ರಾಯಚೂರು: ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ (D.K. Shivakumar) ಅವರು ಪತ್ನಿ ಉಷಾ (Usha) ಅವರ ಜತೆ ಮಂತ್ರಾಲಯದ ಶ್ರೀ ಗುರು ರಾಘವೇಂದ್ರರ ಬೃಂದಾವನಕ್ಕೆ ಬುಧವಾರ ಪೂಜೆ ಸಲ್ಲಿಸಿ, ಮಂತ್ರಾಲಯ ಮಠಾಧೀಶರಾದ ಶ್ರೀ ಸುಭುದೇಂದ್ರ ತೀರ್ಥ ಸ್ವಾಮೀಜಿ ಅವರಿಂದ ಅಶೀರ್ವಾದ ಪಡೆದರು.


ಬಳಿಕ ಮಂತ್ರಾಲಯದ ಪಂಚಮುಖಿ ಆಂಜನೇಯಸ್ವಾಮಿ ದೇಗುಲಕ್ಕೆ ತೆರಳಿ ಪೂಜೆ ಸಲ್ಲಿಸಿದರು.
ಸಚಿವ ಎನ್ ಎಸ್ ಬೋಸರಾಜ್, ಸಂಸದ ಕುಮಾರ ನಾಯಕ್, ಶಾಸಕರಾದ ಬಸನಗೌಡ ದದ್ದಲ್, ಬಸನಗೌಡ ತುರುವಿಹಾಳ್, ಹಂಪಯ್ಯ ನಾಯಕ್, ಎಂಎಲ್ಸಿಗಳಾದ ಬಸನಗೌಡ ಬಾದರ್ಲಿ, ವಸಂತ್ ಕುಮಾರ್ ಮತ್ತಿತರರು ಜತೆಗಿದ್ದರು.