ಶಬರಿಮಲೆ: ಕೇರಳದ (Kerala) ಪ್ರಸಿದ್ಧ ಶಬರಿಮಲೆಗೆ (Sabarimala) ರಾಷ್ಟ್ರಪತಿ ದೌಪದಿ ಮುರ್ಮು (Droupadi Murmu) ಅವರು ಇಂದು (ಅ.22) ಭೇಟಿ ನೀಡಿ, ಇರುಮುಡಿ ಕಟ್ಟು ಹೊತ್ತು ಅಯ್ಯಪ್ಪ ಸ್ವಾಮಿಯ ದರ್ಶನ ಪಡೆದರು.

ಈ ಮೂಲಕ ಶಬರಿಮಲೆಯ ಅಯ್ಯಪ್ಪ ಸ್ವಾಮಿ ದೇಗುಲಕ್ಕೆ ಪ್ರಾರ್ಥನೆ ಸಲ್ಲಿಸಲು ಭೇಟಿ ನೀಡಿದ ಮೊದಲ ಮಹಿಳಾ ರಾಷ್ಟ್ರಪತಿ ಎಂಬ ಹೆಗ್ಗಳಿಕೆಗೆ ದೌಪದಿ ಮುರ್ಮು ಪಾತ್ರರಾಗಿದ್ದಾರೆ.
ಈ ಹಿಂದೆ ಅಂದರೆ 1970 ರಲ್ಲಿ ಮಾಜಿ ರಾಷ್ಟ್ರಪತಿ ವಿವಿ. ಗಿರಿ ಅವರು ಶಬರಿಮಲೆಗೆ ಭೇಟಿ ನೀಡಿದ್ದರು.
ಇನ್ನು ದೇಗುಲ ಪ್ರವೇಶಕ್ಕೂ ಮುನ್ನ ಮುರ್ಮು ಅವರು ಪಂಪಾದಲ್ಲಿ ಸಾಂಕೇತಿಕವಾಗಿ ಕೈಕಾಲುಗಳನ್ನು ತೊಳೆದು, ನಂತರ ಧಾರ್ಮಿಕ ಸ್ನಾನದೊಂದಿಗೆ ವಿಧ್ಯುಕ್ತ ಇರುಮುಡಿ ತಯಾರಿಸಲಾಯಿತು.
ಸಂಪ್ರದಾಯದ ಪ್ರಕಾರ ಭಗವಾನ್ ಅಯ್ಯಪ್ಪನಿಗೆ ಭಕ್ತರು ಹೊತ್ತೊಯ್ಯುವ ಪವಿತ್ರ ಕಾಣಿಕೆಗಳ ಕಟ್ಟಾದ ಇರುಮುಡಿ ಕಟ್ಟನ್ನು ಸಹ ಕೊಂಡೊಯ್ಯದರು.
ಪವಿತ್ರವಾದ 18 ಮೆಟ್ಟಿಲುಗಳನ್ನು ಏರಿದ ನಂತರ, ರಾಷ್ಟ್ರಪತಿಯನ್ನು ಪೂರ್ಣಕುಂಭದೊಂದಿಗೆ ಸ್ವಾಗತಿಸಲಾಯಿತು. ಇದಾದ ಬಳಿಕ ರಾಷ್ಟ್ರಪತಿಗಳು ಮಾಲಿಕಪುರಂ ಮಂದಿರಕ್ಕೂ ಭೇಟಿ ನೀಡಿದರು.
Black attire barefooted and Irumudi on her head President of the country Droupati Murmu ji begins her sabrimala Yatra not as the first citizen of the country but as a humble devotee
— 💝🌹💖🇮🇳jaggirmRanbir🇮🇳💖🌹💝 (@jaggirm) October 22, 2025
Swamiye Sharanam Ayyappa🙏 pic.twitter.com/RE1ERX8o7D
ರಾಷ್ಟ್ರಪತಿಗಳು ವಿಶೇಷ ವಾಹನದ ಮೂಲಕ 15 ನಿಮಿಷಗಳಲ್ಲಿ ಶಬರಿಮಲೆ ತಲುಪಿದರು. ತಮ್ಮ ಅಂಗರಕ್ಷಕರ ಜೊತೆಗೂಡಿ, ಸಾಂಪ್ರದಾಯಿಕ ಇರುಮುಡಿಯನ್ನು ಹೊತ್ತುಕೊಂಡು ಬೆಟ್ಟವನ್ನು ಹತ್ತಿದರು. ಭಗವಾನ್ ಅಯ್ಯಪ್ಪನ ಪೂಜೆಯ ಸಮಯದಲ್ಲಿ ದೇವಸ್ವಂ ಸಚಿವ ವಿ.ಎನ್. ವಾಸವನ್ ಅವರ ಹಿಂದೆಯೇ ಇದ್ದರು.
ದೇವಾಲಯದಲ್ಲಿ ತಂತ್ರಿ ಕಂದರ್ ಮಹೇಶ್ ಮೋಹನರ್ ಬ್ರೌಪದಿ ಮುರ್ಮು ಅವರನ್ನು ಪೂರ್ಣ ಕುಂಭದೊಂದಿಗೆ ಸ್ವಾಗತಿಸಿದರು.
ದರ್ಶನ ಮುಗಿಸಿದ ನಂತರ, ರಾಷ್ಟ್ರಪತಿಗಳು ದೇವಸ್ವಂ ಅತಿಥಿ ಗೃಹದಲ್ಲಿ ಊಟ ಮತ್ತು ವಿಶ್ರಾಂತಿ ಪಡೆಯಲಿದ್ದಾರೆ. ದೇವಸ್ವಂ ಮಂಡಳಿಯು ಅವರಿಗೆ ಮರದ ಅಯ್ಯಪ್ಪ ಮೂರ್ತಿಯನ್ನು ವಿಧ್ಯುಕ್ತ ಉಡುಗೊರೆಯಾಗಿ ನೀಡಲಿದೆ.
ಇಂದಿನ ಕಾರ್ಯಕ್ರಮ
ರಾಷ್ಟ್ರಪತಿಯವರು ಗುರುವಾರ (ಅ.23) ರಾಜಭವನದಲ್ಲಿ ಮಾಜಿ ರಾಷ್ಟ್ರಪತಿ ಕೆ ಆರ್ ನಾರಾಯಣನ್ ಅವರ ಪ್ರತಿಮೆಯನ್ನು ಅನಾವರಣಗೊಳಿಸಲಿದ್ದಾರೆ. ನಂತರ ವರ್ಕಳದ ಶಿವಗಿರಿ ಮಠದಲ್ಲಿ ಶ್ರೀನಾರಾಯಣ ಗುರುಗಳ ಮಹಾಸಮಾಧಿ ಶತಮಾನೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ.
ಕೊಟ್ಟಾಯಂ ಜಿಲ್ಲೆಯ ಪಾಲಾದ ಸೇಂಟ್ ಥಾಮಸ್ ಕಾಲೇಜಿನ ಪ್ಲಾಟಿನಂ ಜುಬಿಲಿ ಆಚರಣೆಯ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ.
ಅಕ್ಟೋಬರ್ 24 ರಂದು ಎರ್ನಾಕುಲಂನ ಸೇಂಟ್ ತೆರೇಸಾ ಕಾಲೇಜಿನ ಶತಮಾನೋತ್ಸವ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ. ಬಳಿಕ ದೆಹಲಿಗೆ ಹಿಂದಿರುಗಲಿದ್ದಾರೆ.
ತಪ್ಪಿದ ಪ್ರಮಾದ
ರಾಷ್ಟ್ರಪತಿ ಬ್ರೌಪದಿ ಮುರ್ಮು ಅವರು ಬಂದಳಿದ ಹೆಲಿಕಾಪ್ಟರ್ ಚಕ್ರ ಹೆಲಿಪ್ಯಾಡ್‌ನ ಕಾಂಕ್ರಿಟ್‌ನಲ್ಲಿ
ಹೂತುಹೋಗಿರುವ ಘಟನೆ ನಡೆದಿತ್ತು. ಕೇರಳದ ಪ್ರಮದಂನಲ್ಲಿ ಹೊಸದಾಗಿ ಕಾಂಕ್ರಿಟ್ ಹಾಕಿದ ಹೆಲಿಪ್ಯಾಡ್‌ನಲ್ಲಿ ರಾಷ್ಟ್ರಪತಿಯವರ ಹೆಲಿಕಾಪ್ಟರ್ ಲ್ಯಾಂಡಿಂಗ್ ಬಳಿಕ ಘಟನೆ ನಡೆದಿತ್ತು.
ಸ್ಥಳದಲ್ಲಿ ನಿಯೋಜಿತರಾಗಿದ್ದ ಪೊಲೀಸರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಹೆಲಿಕಾಪ್ಟರ್ ಅನ್ನು ಮೇಲಕ್ಕೆ ತಳ್ಳಿ, ಸುರಕ್ಷಿತವಾಗಿ ರಾಷ್ಟ್ರಪತಿಯವರನ್ನು ಕೆಳಗೆ ಇಳಿಸಿದರು.