ಚಿಕ್ಕಬಳ್ಳಾಪುರ: ದೀಪಾವಳಿ (Deepavali) ಹಬ್ಬದಂದು ಪೂಜೆ ಮಾಡಿ ನಿಲ್ಲಿಸಿದ್ದ ಟ್ರಾಕ್ಟರ್ ನ್ನ ಕಳ್ಳನೋರ್ವ (Thief) ಕದ್ದೊಯ್ದಿರುವ ಘಟನೆ ನಗರದ ಭಗತ್ ಸಿಂಗ್ ನಗರದಲ್ಲಿ ನಡೆದಿದೆ.

ಕಿರಣ್ ಎನ್ನುವವರಿಗೆ ಸೇರಿದ ಟ್ರಾಕ್ಟರ್ ಮತ್ತು ಟ್ರಾಲಿ ಇದಾಗಿದ್ದು, ಟ್ರಾಕ್ಟರ್ ಕದ್ದೋಯ್ಯುತ್ತಿದ್ದ ದೃಶ್ಯ ಸಿ ಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ದೀಪಾವಳಿ ಹಬ್ಬಕ್ಕೂ ಮುನ್ನ ಟ್ರಾಕ್ಟರ್ ಖರೀದಿಸಿದ್ದ ಕಿರಣ್ ಅವರು ದೀಪಾವಳಿ ದಿನ ಪೂಜೆ ಸಲ್ಲಿಸಿ ನಿಲ್ಲಿಸಿದ್ದರು. ಆದರೆ ಖತರ್ನಾಕ್ ಕಳ್ಳ ಟ್ರಾಲಿ ಸಮೇತ ಟ್ರಾಕ್ಟರ್ ನ್ನ ಕದ್ದೊಯ್ದಿದ್ದಾನೆ.
ಈ ಕುರಿತಂತೆ ಚಿಕ್ಕಬಳ್ಳಾಪುರ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.