ದೊಡ್ಡಬಳ್ಳಾಪುರ: ಅಕ್ರಮ ಬಾಂಗ್ಲಾ ವಲಸಿಗರು (Illegal Bangladeshi immigrants) ಕರ್ನಾಟಕ ಸೇರಿದಂತೆ ದೇಶದ ವಿವಿಧೆಡೆ ವಾಸಿಸುತ್ತಿದ್ದಾರೆ ಎಂಬ ಆರೋಪ ಅಗ್ಗಾಗ್ಗೆ ವರದಿಯಾಗುತ್ತಿದ್ದು, ರಾಷ್ಟ್ರೀಯ ಭದ್ರತೆಗೆ ಒಂದು ಅಪಾಯ ಎಂದು ಪರಿಗಣಿಸಲಾಗಿದೆ.

ಅಂತೆಯೇ ದೊಡ್ಡಬಳ್ಳಾಪುರ ತಾಲ್ಲೂಕಿಗೂ ಈ ಅಕ್ರಮ ಬಾಂಗ್ಲಾ ವಲಸಿಗರು ಹೆಚ್ಚಾಗಿ ನುಸುಳಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.
ಈ ಕುರಿತಂತೆ ಬೆಂಗಳೂರು ಗ್ರಾಮಾಂತರ ಜಿಲ್ಲಾ ಬಿಜೆಪಿ ಓಬಿಸಿ ಮೋರ್ಚಾ ಅಧ್ಯಕ್ಷ ರಾಮಕೃಷ್ಣಯ್ಯ (ರಾಂ ಕಿಟ್ಟಿ) ಅವರು ಫೇಸ್‌ಬುಕ್ ಖಾತೆಯಲ್ಲಿ ದೊಡ್ಡಬಳ್ಳಾಪುರದಲ್ಲಿ ಅಕ್ರಮ ಬಾಂಗ್ಲಾ ವಲಸಿಗರು ವ್ಯಾಪಕವಾಗಿ ಹರಡಿಕೊಂಡಿದ್ದಾರೆ. ಇದು ಮುಂದೆ ಅತೀ ದೊಡ್ಡ ಸಮಸ್ಯೆಯಾದಿತು ಎಂದು ಕಳವಳ ವ್ಯಕ್ತಪಡಿಸಿ, ಬರೆದುಕೊಂಡಿದ್ದಾರೆ.

ಇದಕ್ಕೆ ಅನೇಕರು ಪ್ರತಿಕ್ರಿಯೆ ನೀಡಿದ್ದು, ದೊಡ್ಡಬಳ್ಳಾಪುರ ನಗರದ ಕಾಲೇಜು ರಸ್ತೆಗಳಲ್ಲಿ, ಹೋಟೆಲ್ ಬಳಿ, ಮಾರುಕಟ್ಟೆ, ಬಸ್ ನಿಲ್ದಾಣ, ರೈಲ್ವೇ ನಿಲ್ದಾಣ, ಕೈಗಾರಿಕಾ ಪ್ರದೇಶಗಳಲ್ಲಿ ಗುಂಪು ಗುಂಪಾಗಿ ಓಡಾಡುತ್ತಿರುತ್ತಾರೆ. ಇದರಿಂದ ಆತಂಕಕ್ಕೆ ಕಾರಣವಾಗುತ್ತಿದೆ ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಅಲ್ಲದೆ ಪೊಲೀಸ್ ಇಲಾಖೆ ಕೂಡಲೇ ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.
ಮೂಲಗಳ ಮಾಹಿತಿಯಂತೆ ಈ ಅಕ್ರಮ ವಲಸಿಗರು ಪಶ್ಚಿಮ ಬಂಗಾಳ, ಅಸ್ಸಾಂ ರಾಜ್ಯಗಳ ನಕಲಿ ಆಧಾರ್ ಮತ್ತು ಮತದಾರರ ಗುರುತಿನ ಚೀಟಿಗಳನ್ನು ಬಳಸುತ್ತಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.
ಅಕ್ರಮ ವಲಸಿಗರು ರಾಷ್ಟ್ರೀಯ ಭದ್ರತೆಗೆ ಒಂದು ಅಪಾಯವಾಗಿದ್ದು, ಈ ಸಮಸ್ಯೆಯನ್ನು ಬಗೆಹರಿಸಲು ರಾಜಕೀಯ ಪಕ್ಷಗಳು ಮತ್ತು ಅಧಿಕಾರಿಗಳು ಕ್ರಮ ತೆಗೆದುಕೊಳ್ಳುವಂತೆ ಅನೇಕರು ಒತ್ತಾಯಿಸುತ್ತಿದ್ದಾರೆ.
ಆತಂಕಕಾರಿ
ಇನ್ನೂ ಈ ಕುರಿತಂತೆ ರಾಮಕೃಷ್ಣಯ್ಯ (ರಾಂ ಕಿಟ್ಟಿ) ಅವರು ಪ್ರತಿಕ್ರಿಯೆ ನೀಡಿದ್ದು, ದೊಡ್ಡಬಳ್ಳಾಪುರದ ನಗರದ ಕೊಂಗಾಡಿಯಪ್ಪ ರಸ್ತೆಯಲ್ಲಿ ಹೋಟೆಲ್ ತೆರಳಿದ್ದ ವೇಳೆ ಗುಂಪಾಗಿ ಗುಂಪಾಗಿ ಯುವಕರು ಇರುವುದು ನೋಡಿ ಆಶ್ಚರ್ಯವಾಯಿತು. ನಾ ದೊಡ್ಡಬಳ್ಳಾಪುರದಲ್ಲಿ ಇದ್ದೀನಾ..? ಅಥವಾ ಯಾವುದಾದರೂ ಬೇರೆ ದೇಶದಲ್ಲಿ ಇದ್ದೀನಾ..? ಎಂಬಂತೆ.
ಮೂರ್ ನಾಲ್ಕು ಯುವಕರ ಪ್ರಶ್ನೆ ಮಾಡಿದಾಗ ಅವರಲ್ಲಿ ಒಬ್ಬೊಬ್ಬರು, ಒಂದ್ ಒಂದು ರಾಜ್ಯದ ಹೆಸರು ಹೇಳಿದ್ದು ಅನುಮಾನಕ್ಕೆ ಕಾರಣವಾಗಿದೆ.
ಎಲರೂ ಸುಮಾರು 25 ವರ್ಷದ ಯುವಕರು.. ಕರೇನಹಳ್ಳಿ ವ್ಯಾಪ್ತಿಯ ಮಗ್ಗದ ಕೆಲಸದಲ್ಲಿ ಕೆಲವರಿದ್ದರೆ, ಕೈಗಾರಿಕಾ ಪ್ರದೇಶ, ಕೋಳಿ ಫಾರಂ, ಸಲೂನ್ ಸೇರಿದಂತೆ ಮತ್ತಿತರ ಕಡೆ ವ್ಯಾಪಿಸಿದ್ದಾರೆ.
ಈ ಬೆಳವಣಿಗೆ ಅನುಮಾನಕ್ಕೆ ಕಾರಣವಾಗುತ್ತಿದೆ. ಯಾವುದೋ ವ್ಯವಸ್ಥಿತ ಜಾಲ (ಏಜೆನ್ಸಿ) ಇದರ ಹಿಂದೆ ಇದೆ ಎಂಬ ಶಂಕೆ ಕಾಡುತ್ತಿದೆ. ಇಂತವರ ಆಧಾರ್ ಕಾರ್ಡ್ ನೊಂದಣಿ ಪರಿಶೀಲನೆ ಮಾಡಿದರೆ ವಾಸ್ತವ ತಿಳಿಯುತ್ತದೆ. ಈ ಕುರಿತಂತೆ ಪೊಲೀಸ್ ಇಲಾಖೆ ತ್ವರಿತವಾಗಿ ಕ್ರಮಕೈಗೊಳ್ಳಬೇಕಿದೆ, ಏಕೆಂದರೆ ಅಕ್ರಮ ವಲಸಿಗರು ರಾಷ್ಟ್ರೀಯ ಭದ್ರತೆಗೆ ಅಪಾಯ ಎಂದು ರಾಂಕಿಟ್ಟಿ ಕಳವಳ ವ್ಯಕ್ತಪಡಿಸಿದ್ದಾರೆ. (ಸಾಂದರ್ಭಿಕ AI ಚಿತ್ರ ಬಳಸಲಾಗಿದೆ)