ಬೆಂ.ಗ್ರಾ.ಜಿಲ್ಲೆ: ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ವತಿಯಿಂದ ನಡೆಸುತ್ತಿರುವ ನಾಗರೀಕರ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ-2025 ರ (socio-educational survey) ಗಣತಿ ಕಾರ್ಯವು ಪ್ರಗತಿಯಲ್ಲಿದ್ದು, ಇದೇ ಅಕ್ಟೋಬರ್ 31 ರವರೆಗೆ ಸಮೀಕ್ಷೆ ಅವಧಿಯನ್ನು ವಿಸ್ತರಿಸಲಾಗಿದೆ.
ಜಿಲ್ಲೆಯಲ್ಲಿ ಸಮೀಕ್ಷೆಯಲ್ಲಿ ನೋಂದಾಯಿಸದೆ, ಪಾಲ್ಗೊಳ್ಳದಿರುವ ಕುಟುಂಬಗಳು ಗಣತಿಯಾಗದೇ ಇದ್ದಲ್ಲಿ, ಆಯಾ ಕುಟುಂಬ ಅಥವಾ ಸದಸ್ಯರು ಅಧಿಕೃತ ಜಾಲತಾಣ https://kscbcselfdeclaration.karnataka.gov.in ನಲ್ಲಿ ತಮ್ಮ ಸ್ವ ವಿವರಗಳನ್ನು ನೋಂದಾಯಿಸಿಕೊಳ್ಳುವ ಮೂಲಕ ನೇರವಾಗಿ ಸಮೀಕ್ಷೆಯಲ್ಲಿ ದಾಖಲಿಸಲು ಅವಕಾಶವಿದೆ.
ನಾಗರೀಕರು ಇದರ ಅವಕಾಶವನ್ನು ಸದುಪಯೋಗಪಡಿಸಿಕೊಂಡು ಸಮೀಕ್ಷಾ ಕಾರ್ಯದಲ್ಲಿ ಭಾಗವಹಿಸಿ ಎಂದು ಜಿಲ್ಲಾಧಿಕಾರಿ ಎ.ಬಿ ಬಸವರಾಜು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.