Who are they, astrologers, to make predictions? - Nikhil Kumaraswamy lashes out at DCM

ಭವಿಷ್ಯ ನುಡಿಯೋಕೆ ಅವರ‍್ಯಾರು, ಜ್ಯೋತಿಷಿನಾ? – ಡಿ.ಕೆ. ಶಿವಕುಮಾರ್ ವಿರುದ್ಧ ನಿಖಿಲ್‌ ಕುಮಾರಸ್ವಾಮಿ ಕಿಡಿ

ರಾಮನಗರ: ಖಾತಾ ಪರಿವರ್ತನೆ ಹೆಸರಿನಲ್ಲಿ ರಾಜ್ಯ ಸರ್ಕಾರ ಬಡವರ ಹೊಟ್ಟೆ ಮೇಲೆ ಹೊಡೆಯುತ್ತಿದೆ. ಸರ್ಕಾರದ ಬಳಿ ಗುಂಡಿ ಮುಚ್ಚಲು ಹಣವಿಲ್ಲ, ಹಗಲು ದರೋಡೆ ದಂಧೆ ಮಾಡ್ತಿದ್ದಾರೆ ಎಂದು ರಾಜ್ಯ ಸರ್ಕಾರದ ವಿರುದ್ಧ ನಿಖಿಲ್ ಕುಮಾರಸ್ವಾಮಿ (Nikhil Kumaraswamy) ಅವರು ತೀವ್ರ ವಾಗ್ದಾಳಿ ನಡೆಸಿದರು.

ಈ ಬಗ್ಗೆ ಚನ್ನಪಟ್ಟಣದಲ್ಲಿ ಮಾತನಾಡಿದ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರು ಡಿ.ಕೆ ಶಿವಕುಮಾರ್ ( D.K. Shivakumar) ವಿರುದ್ಧ ಕಿಡಿಕಾರಿದರು.

ಸರ್ಕಾರದ ಖಾತಾ ಪರಿವರ್ತನೆ ಹೆಸರಿನಲ್ಲಿ ಸರ್ಕಾರ ಒಂದು ಲಕ್ಷ ಕೋಟಿ ಆದಾಯ ತರಲು ಹೊರಟಿದ್ದಾರೆ. ಬಡವರ ಹೊಟ್ಟೆ ಮೇಲೆ ಹೊಡೆದು ಆದಾಯ ತರಲು ಹೊರಟಿದ್ದಾರೆ. ಜನರಿಗೆ ಒಳ್ಳೆಯದು ಮಾಡಬೇಕೆಂದರೆ ಅವತ್ತಿನ ಎಸ್ ಆರ್ ವ್ಯಾಲ್ಯೂ ಮೇಲೆ ದರ ಪಿಕ್ಸ್ ಮಾಡಿ ಎಂದು ಸರ್ಕಾರಕ್ಕೆ ನಿಖಿಲ್ ಕುಮಾರಸ್ವಾಮಿ ಅವರು ಆಗ್ರಹಿಸಿದರು.

ಬೆಂಗಳೂರಲ್ಲಿ 7.5 ಲಕ್ಷ ಮನೆಗಳು ಇದಕ್ಕೆ ಒಳಪಡ್ತವೆ. ಅದಕ್ಕೆ 100 ದಿನ ಟೈಂ ಲೈನ್ ಪಿಕ್ಸ್ ಮಾಡಿದ್ದಾರೆ. ಖಾತೆ ವರ್ಗಾವಣೆಗೆ ಒಂದೊಂದು ಕಡೆ ಒಂದೊಂದು ಎಸ್ ಆರ್ ವ್ಯಾಲ್ಯೂ ಇದೆ. ಇದರಿಂದ ಮಾಧ್ಯಮ ವರ್ಗದ ಜನರಿಗೆ ತೊಂದರೆಯಾಗುತ್ತೆ. ಜನರಿಗೆ ಒತ್ತಡ ಹೇರಿ ಅವರ ಬಳಿ ಹಣ ಕಸಿದು ಅವರಿಗೆ ಗ್ಯಾರಂಟಿ ರೂಪದಲ್ಲಿ ವಾಪಸ್ಸ್ ಕೊಡ್ತಾವ್ರೆ ಎಂದು ಸರ್ಕಾರದ ವಿರುದ್ಧ ನಿಖಿಲ್ ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.

HDK ಕೊಟ್ಟ ಕಾರ್ಯಕ್ರಮ ಜನರ ಮನಸ್ಸಿನಲ್ಲಿದೆ

ಕುಮಾರಸ್ವಾಮಿ ಖಾಲಿ ಟ್ರಂಕ್ ಎಂಬ ಡಿಸಿಎಂ ಡಿಕೆಶಿ ಹೇಳಿಕೆ ವಿಚಾರಕ್ಕೆ ಮಾತನಾಡಿದ ಅವರು; ಕುಮಾರಣ್ಣ ಅವರ ಕಾಲಘಟ್ಟದಲ್ಲಿ ಏನೇನು ಮಾಡಿದ್ದಾರೆ ಅಂತ ರಾಜ್ಯದ ಜನತೆಗೆ ಗೊತ್ತು. ಅಧಿಕಾರದಲ್ಲಿದ್ದಾಗ ಕೊಟ್ಟಂತ ಕಾರ್ಯಕ್ರಮ ಜನರ ಮನಸ್ಸಿನಲ್ಲಿದೆ. ಅದನ್ನ ಚುನಾವಣೆ ಸಂದರ್ಭದಲ್ಲಿ ಏನೆಲ್ಲಾ ಮಾಡಿದ್ದಾರೆ ಮಾತನಾಡ್ತೀವಿ ಎಂದು ಡಿಕೆಶಿಗೆ ನಿಖಿಲ್ ಕುಮಾರಸ್ವಾಮಿ ಅವರು ತಿರುಗೇಟು ನೀಡಿದರು.

ಭವಿಷ್ಯ ನುಡಿಯೋಕೆ ಡಿಕೆಶಿ ಜ್ಯೋತಿಷಿನಾ?

ಮುಂದೆ ಜೆಡಿಎಸ್ 8ರಿಂದ 9 ಸ್ಥಾನ ಬರುತ್ತೆ ಎಂಬ ಡಿಕೆಶಿ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಭವಿಷ್ಯ ನುಡಿಯೋಕೆ ಅವರ‌್ಯಾರು, ರಾಜ್ಯದ ಜನ ನಮ್ಮ ಭವಿಷ್ಯ ತೀರ್ಮಾನ ಮಾಡ್ತಾರೆ. ಭವಿಷ್ಯ ಹೇಳೋಕೆ ಅವರೇನು ಜ್ಯೋತಿಷ್ಯೀನಾ.? ಅವರು ಭವಿಷ್ಯ ನುಡಿಯಲಿ ಟೈಂ ಬಂದಾಗ ಮಾತಾಡ್ತೀವಿ ಎಂದು ಡಿಕೆ ಶಿವಕುಮಾರ್ ಗೆ ನಿಖಿಲ್ ಕುಮಾರಸ್ವಾಮಿ ಟಾಂಗ್ ನೀಡಿದರು.

ರಾಜ್ಯದಲ್ಲಿ ಅಭಿವೃದ್ಧಿ ಕೆಲಸ ಸಂಪೂರ್ಣ ಶೂನ್ಯ. ಶಾಸಕರಿಗೆ ಅನುದಾನ ಕೊಡ್ತೀವಿ ಅಂತ ಹೇಳಿ ಕೊಟ್ಟಿಲ್ಲ. ಒಬ್ಬ ಶಾಸಕನಿಗೆ 10ಕೋಟಿ ಅನುದಾನವೂ ಸಿಕ್ಕಿಲ್ಲ.

ಬಿಜೆಪಿ-ಜೆಡಿಎಸ್ ಬಿಡಿ ಕಾಂಗ್ರೆಸ್ ಶಾಸಕರೇ ಅನುದಾನ ಸಿಕ್ಕಿಲ್ಲ ಅಂತ ಹೇಳ್ತಾರೆ. ಕಂಟ್ರಾಕ್ಟರ್ ಗಳು ಕಥೆ ಏನಾಗಿದೆ ಹಣ ಬಿಡುಗಡೆ ಮಾಡಿಲ್ಲ. ಕಾಂಗ್ರೆಸ್ ಸರ್ಕಾರದ ಕಾಲಘಟ್ಟದಲ್ಲಿ ಅಭಿವೃದ್ಧಿ ಆಗ್ತಿಲ್ಲ ಎಂದು ಕಿಡಿಕಾರಿದರು.

ನವೆಂಬರ್ ಕ್ರಾಂತಿ ಅಂತ ಮಾತಾಡ್ತಾರೆ. ಅದೇನು ಕ್ರಾಂತಿ ಮಾಡ್ತಾರೋ ನೋಡೊಣ. ಇವರ ಕುರ್ಚಿ ಕಿತ್ತಾಟದ ನಡುವೆ ರಾಜ್ಯದ ಜನ ಬಲಿಪಶು ಆಗ್ತಿದ್ದಾರೆ ಎಂದು ನಿಖಿಲ್ ಕುಮಾರಸ್ವಾಮಿ ಆಕ್ರೋಶ ವ್ಯಕ್ತ ಪಡಿಸಿದರು.

ರಾಜಕೀಯ

ದೊಡ್ಡಬಳ್ಳಾಪುರ: ನಾರನಹಳ್ಳಿ MPCS ಅಧ್ಯಕ್ಷ ಸ್ಥಾನಕ್ಕೆ ಎನ್.ಎಮ್. ಸುರೇಶ್ ಅವಿರೋಧ ಆಯ್ಕೆ

ದೊಡ್ಡಬಳ್ಳಾಪುರ: ನಾರನಹಳ್ಳಿ MPCS ಅಧ್ಯಕ್ಷ ಸ್ಥಾನಕ್ಕೆ ಎನ್.ಎಮ್. ಸುರೇಶ್ ಅವಿರೋಧ ಆಯ್ಕೆ

ನಾರನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ (MPCS) ಅಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಎನ್.ಎಮ್. ಸುರೇಶ್ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

[ccc_my_favorite_select_button post_id="119997"]
ಮನರೇಗಾ ಮರುಸ್ಥಾಪಿಸುವ ಕಾಂಗ್ರೆಸ್ ಹೋರಾಟವನ್ನು ಬೆಂಬಲಿಸಿ: ರಾಜ್ಯದ ಜನರಿಗೆ ಸಿಎಂ ಸಿದ್ದರಾಮಯ್ಯ ಕರೆ

ಮನರೇಗಾ ಮರುಸ್ಥಾಪಿಸುವ ಕಾಂಗ್ರೆಸ್ ಹೋರಾಟವನ್ನು ಬೆಂಬಲಿಸಿ: ರಾಜ್ಯದ ಜನರಿಗೆ ಸಿಎಂ ಸಿದ್ದರಾಮಯ್ಯ ಕರೆ

ಗ್ರಾಮೀಣ ಜನರ ಉದ್ಯೋಗದ ಹಕ್ಕನ್ನು ಕಸಿಯುತ್ತಿರುವ ವಿಬಿಜಿರಾಮ್ ಜಿ ಕಾಯ್ದೆಯನ್ನು ರದ್ದುಪಡಿಸಿ, ಮನರೇಗಾ ಮರುಸ್ಥಾಪಿಸುವವರೆಗೆ ದೇಶಾದ್ಯಂತ ಕಾಂಗ್ರೆಸ್ ನಡೆಸುತ್ತಿರುವ ಹೋರಾಟವನ್ನು ಬೆಂಬಲಿಸಬೇಕೆಂದು ರಾಜ್ಯದ ಜನರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ (Cmsiddaramaiah) ಕರೆ ನೀಡಿದರು.

[ccc_my_favorite_select_button post_id="119685"]
ಯುದ್ಧ: ಭಾರತದ ಷೇರುಪೇಟೆ ತತ್ತರ.. ಬೆಲೆಯೇರಿಕೆ ಚಿಂತೆ

ಯುದ್ಧ: ಭಾರತದ ಷೇರುಪೇಟೆ ತತ್ತರ.. ಬೆಲೆಯೇರಿಕೆ ಚಿಂತೆ

ಮಧ್ಯಪ್ರಾಚ್ಯದಲ್ಲಿ ಯುದ್ದ ನಡೆಯುತ್ತಿರುವುದರಿಂದ ಭಾರತದ ಷೇರುಪೇಟೆ (Indian share market ) ತತ್ತರಿಸುತ್ತಿದ್ದು, ಕೋಟ್ಯಾಂತರ ರೂ ನಷ್ಟದ ಜೊತೆಗೆ, ತೈಲ ಬೆಲೆಯೇರಿಕೆಯಾಗುವ ಭೀತಿ ಉಂಟಾಗಿದೆ.

[ccc_my_favorite_select_button post_id="119892"]
ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ -ಚೀನಿ ಬಾಯಿ ಬಾಯಿ

ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ

ಅಮೇರಿಕಾದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ (Donald Trump) ಶೇ.50 ರಷ್ಟು ತೆರಿಗೆ ಬರೆ ಬೆನ್ನಲ್ಲೇ, ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು 7 ವರ್ಷಗಳ ಬಳಿಕ ಚೀನಾಗೇ ಭೇಟಿ ನೀಡಿದ್ದಾರೆ.

[ccc_my_favorite_select_button post_id="113347"]

ಕ್ರೀಡೆ

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕ್ರಿಕೆಟ್ ಪಂದ್ಯಗಳ ಆಯೋಜನೆಗೆ ಅನುಮತಿ: ಡಿಸಿಎಂ ಡಿ.ಕೆ. ಶಿವಕುಮಾರ್

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕ್ರಿಕೆಟ್ ಪಂದ್ಯಗಳ ಆಯೋಜನೆಗೆ ಅನುಮತಿ: ಡಿಸಿಎಂ ಡಿ.ಕೆ. ಶಿವಕುಮಾರ್

"ಯುವಕರು ಹಾಗೂ ಕ್ರಿಕೆಟ್ ಕ್ರೀಡೆಯ ಹಿತದೃಷ್ಟಿಯಿಂದ ಇನ್ನುಮುಂದೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪಂದ್ಯ ಆಯೋಜನೆಗೆ ಸರ್ಕಾರ ಅನುಮತಿ ನೀಡುತ್ತಿದೆ" ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ (D.K. Shivakumar) ಅವರು ತಿಳಿಸಿದರು.

[ccc_my_favorite_select_button post_id="119372"]
ದೊಡ್ಡಬಳ್ಳಾಪುರ: ಗ್ಯಾಸ್ ಗೀಸರ್ ಬಳಸುವವರೆ ಎಚ್ಚರ.. ವಿಷಾನಿಲ ಸೋರಿಕೆಯಿಂದ ಬಾಲಕಿ ದುರ್ಮರಣ

ದೊಡ್ಡಬಳ್ಳಾಪುರ: ಗ್ಯಾಸ್ ಗೀಸರ್ ಬಳಸುವವರೆ ಎಚ್ಚರ.. ವಿಷಾನಿಲ ಸೋರಿಕೆಯಿಂದ ಬಾಲಕಿ ದುರ್ಮರಣ

ಗ್ಯಾಸ್ ಗೀಸರ್ (Gas geyser) ಬಳಕೆ ಮಾಡುವವರು ಆದಷ್ಟು ಮುಂಜಾಗ್ರತೆಯ ಕ್ರಮಕೈಗೊಳ್ಳಬೇಕಿದೆ. ಏಕೆಂದರೆ ಪದೇ ಪದೇ ವಿಷಾನಿಲ ಸೋರಿಕೆಯಿಂದ ಸಾವನಪ್ಪುವ ಪ್ರಕರಣಗಳು ವರದಿಯಾಗುತ್ತಿವೆ.

[ccc_my_favorite_select_button post_id="119828"]
ದೊಡ್ಡಬಳ್ಳಾಪುರ: ಹೊಸಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಪಘಾತ.. ಬೈಕ್ ಸವಾರನ ಸ್ಥಿತಿ ಗಂಭೀರ

ದೊಡ್ಡಬಳ್ಳಾಪುರ: ಹೊಸಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಪಘಾತ.. ಬೈಕ್ ಸವಾರನ ಸ್ಥಿತಿ ಗಂಭೀರ

ಆದರೆ ಹೊಸಹಳ್ಳಿ ಠಾಣೆಯ ಪೊಲೀಸರು ಅವರ ವ್ಯಾಪ್ತಿಯಲ್ಲಿನ ಗುಂಡಿ ಬಿದ್ದ ರಸ್ತೆಯಲ್ಲಿ ಎದ್ದು, ಬಿದ್ದು ಬರುವ ವಾಹನಗಳನ್ನು ತಡೆದು, ಹೆಲ್ಮೆಟ್ ಹಾಕಿಲ್ಲ, ಸೀಟ್ ಬೆಲ್ಟ್ ಹಾಕಿಲ್ಲ ಎಂದು ವಾಹನ ಸವಾರರ ದಂಡ ವಿಧಿಸಲು ಮಾತ್ರ

[ccc_my_favorite_select_button post_id="120010"]

ಆರೋಗ್ಯ

ಸಿನಿಮಾ

ದರ್ಶನ್ ಬರ್ತ್‌ಡೇ: ಅಭಿಮಾನಿಗಳಿಂದ ವಿಶೇಷ ವಿಶ್

ದರ್ಶನ್ ಬರ್ತ್‌ಡೇ: ಅಭಿಮಾನಿಗಳಿಂದ ವಿಶೇಷ ವಿಶ್

ಕನ್ನಡ ಚಿತ್ರರಂಗದ ಖ್ಯಾತ ನಟ ದರ್ಶನ್ (Actor Darshan) ಅವರಿಗೆ ಇಂದು ಜನ್ಮದಿನದ (Birthday) ಸಡಗರ. 49ನೇ ವರ್ಷಕ್ಕೆ ದರ್ಶನ್ ಕಾಲಿಟ್ಟಿದ್ದಾರೆ.

[ccc_my_favorite_select_button post_id="119431"]
error: Content is protected !!