ದೊಡ್ಡಬಳ್ಳಾಪುರ: ತಾಲೂಕಿನ ಮಜರಾಹೊಸಹಳ್ಳಿಯಲ್ಲಿ ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ವಿವಿದ್ದೋಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ (VSSN) ಆಡಳಿತ ಮಂಡಳಿಗೆ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ನಿರ್ದೇಶಕರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ.
ಮಜರಾಹೊಸಹಳ್ಳಿಯಲ್ಲಿ ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ವಿವಿದ್ದೋಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ (VSSN) ಆಡಳಿತ ಮಂಡಳಿಗೆ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ನಿರ್ದೇಶಕರ ಆಯ್ಕೆ ಪ್ರಕ್ರಿಯೆ ಇಂದು ನಡೆಸಲಾಯಿತು.
ಈ ವೇಳೆ ಪಕ್ಷಾತೀತವಾಗಿ ಚುನಾವಣೆ ಇಲ್ಲದೆ ಆಯ್ಕೆ ಮಾಡಲು ಮುಖಂಡರು ನಿರ್ಧರಿಸಿದ್ದು, ನೂತನ ಅಧ್ಯಕ್ಷರಾಗಿ ತಿ.ರಂಗರಾಜು, ಉಪಾಧ್ಯಕ್ಷರಾಗಿ ವೀರಾಪುರ ನಟರಾಜ್, ನಿರ್ದೇಶಕರಾಗಿ ಬಿ.ಹೆಚ್.ಕೆಂಪಣ್ಣ, ಡಾ.ವಿಜಯ್ ಕುಮಾರ್, ಬಿ.ಟಿ. ಶ್ರೀನಿವಾಸ್ ಮೂರ್ತಿ, ಸಂದೇಶ್, ಆದಿತ್ಯ ನಾಗೇಶ್, ಮಂಜುಳಮ್ಮ, ಚಂದ್ರಮ್ಮ, ರಂಗಸ್ವಾಮಿ, ಮುನಿರಾಜು, ಆಯ್ಕೆಮಾಡಲಾಯಿತು.
ನೂತನ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ನಿರ್ದೇಶಕರನ್ನು ಬಮೂಲ್ ನಿರ್ದೇಶಕ ಬಿ.ಸಿ. ಆನಂದ್ ಕುಮಾರ್ ಅವರು ಅಭಿನಂದನೆ ಸಲ್ಲಿಸಿದ್ದಾರೆ.
ಮಜರಾಹೊಸಹಳ್ಳಿ ವ್ಯಾಪ್ತಿ ಈ ಮುಂಚೆ ಬಾಶೆಟ್ಟಿಹಳ್ಳಿ ವಿಎಸ್‌ಎಸ್‌ಎನ್ಗೆ ಒಳಪಟ್ಟಿತ್ತು ಎಂಬುದನ್ನು ಸ್ಮರಿಸಬಹುದಾಗಿದೆ.