ದೊಡ್ಡಬಳ್ಳಾಪುರ: ಈಶ್ವರ ಬಸವೇಶ್ವರ ಸೇವಾ ಟ್ರಸ್ಟ್ ವತಿಯಿಂದ ದೇವರಾಜ ನಗರದ ಕಿತ್ತೂರು ರಾಣಿ ಚನ್ನಮ್ಮ ರಸ್ತೆಯಲ್ಲಿನ ಈಶ್ವರ ದೇವಾಲಯದಲ್ಲಿ (Eshwara temple) ಮೂರು ದಿನಗಳ ಕಾಲ ಗಣೇಶ, ಪಾರ್ವತಿ ಸಮೇತ ಈಶ್ವರ ಕಾಲಭೈರವ ನೂತನ ಶಿಖರ ಕಳಶ ಪ್ರತಿಷ್ಠಾಪನೆ, ಕುಂಭಾಭಿಷೇಕ ಮತ್ತು ಬಸವೇಶ್ವರ, ಆಂಜನೇಯ, ಮಾಚೀಶ್ವರ, ನವಗ್ರಹ, ನಾಗ ವಿಗ್ರಹಗಳ ಪ್ರತಿಷ್ಠಾಪನಾ ಮಹೋತ್ಸವ ಶ್ರದ್ಧಾಭಕ್ತಿಯಿಂದ ನೆರವೇರಿತು.
ಅ.25 ಸಂಜೆ 4-00 ಗಂಟೆಗೆ ಮಂಗಳವಾದ್ಯ ಸಮೇತ ಪೂರ್ಣಕುಂಭಗಳೊಡನೆ ಗಂಗಾಪೂಜೆ, ಆಲಯ ಪ್ರವೇಶ, ಮಹಾಗಣಪತಿ ಪೂಜಾ, ಶೈವ ಪುಣಣ್ಯಾಹ, ದೇವನಾಂದಿ ಪಂಚಗವ್ಯಾ ಪೂಜಾ, ಋತ್ವಿಗರಣ, ರಕ್ಷಾಬಂಧನ, ಅಸ್ತ್ರ ರಾಜಪೂಜಾ, ರಾಕ್ಷೆಜ್ಞ ಪೂಜಾ, ಅಂಕುರಾರೋಪಣ, ಕಳಶ ಸ್ಥಾಪನಾದಿ ಕಾರ್ಯ. ರಾತ್ರಿ 7-30 ಗಂಟೆಗೆ ಮಹಾಮಂಗಳಾರತಿ ಹಾಗೂ ಪ್ರಸಾದ ವಿನಿಯೋಗ ನಡೆಸಲಾಯಿತು.
ಅ.26 ರಂದು ಬೆಳಿಗ್ಗೆ 10-00 ಗಂಟೆಗೆ ಶ್ರೀ ಮಹಾಗಣಪತಿ ಪೂಜಾ, ಧ್ವಜಾರೋಹಣ, ಶೈವಾಗ್ನಿ ಪ್ರತಿಷ್ಠಾ. ಮಹಾಹೋಮ, ಪೂಜೆ ಮತ್ತು ಪ್ರಸಾದ ವಿನಿಯೋಗ ಕಾರ್ಯಕ್ರಮ ನೂತನ ಕಳಶ ಪ್ರತಿಷ್ಠಾಪನೆ, ವಿಗ್ರಹ ಧಾನ್ಯಾಧಿವಾಸ, ಶೈಯ್ಯಾಧಿವಾಸ. ರಾತ್ರಿ 7-30 ಗಂಟೆಗೆ ಮಹಾಮಂಗಳಾರತಿ ಹಾಗೂ ಪ್ರಸಾದ ವಿನಿಯೋಗ ನೆರವೇರಿತು.
ಅ.27 ರಂದು ಬೆಳಗಿನ ಜಾವ 4-30 ರಿಂದ 5-30 ಗಂಟಗೆ ಮಹಾಚಕ್ರ ಸ್ಥಾಪನೆ, ನವರತ್ನ ಪಂಚಲೋಹ ಸಮೇತ ವಿಗ್ರಹಗಳ ಪ್ರತಿಷ್ಠಾಪನೆಯನ್ನು ನೆರವೇರಿಸಲಾಗುತ್ತದೆ. ನಂತರ ಬೆಳಗ್ಗೆ 9-00 ರಿಂದ 9-45 ಗಂಟೆಯೊಳಗೆ ಸಲ್ಲುವ ಶುಭ ವೃಶ್ಚಿಕ ಲಗ್ನದಲ್ಲಿ ನೇತ್ರೋಲನ, ಪೂರ್ಣಾಹುತಿ ಕಾರ್ಯಕ್ರಮವನ್ನು ನೆರವೇರಿಸಲಾಯಿತು.
ಕಾರ್ಯಕ್ರಮದ ದಿವ್ಯ ಸಾನ್ನಿಧ್ಯವನ್ನು ಶ್ರೀ ಸಿದ್ದಗಂಗಾ ಮಠದ ಶ್ರೀ ಸಿದ್ಧಲಿಂಗ ಮಹಾಸ್ವಾಮಿಗಳು ವಹಿಸಿದ್ದರು..
ಈ ವೇಳೆ ಶ್ರೀಗಳಿಗೆ ಪಾದಪೂಜೆ ಸಲ್ಲಿಸಲಾಯಿತು.
ಈ ವೇಳೆ ಟ್ರಸ್ಟ್ ಗೌರವ ಅಧ್ಯಕ್ಷ ಎ.ರಾಜಣ್ಣ, ಅಧ್ಯಕ್ಷ ಎಲ್.ವೆಂಕಟೇಶ್, ಉಪಾಧ್ಯಕ್ಷ ಆರ್.ಲಕ್ಷ್ಮೀನಾರಾಯಣ್, ಪ್ರಧಾನ ಕಾರ್ಯದರ್ಶಿ ಜೆ.ಮಂಜುನಾಥ್, ಖಜಾಂಚಿ ಸತ್ಯನಾರಾಯಣ, ಕಾರ್ಯದರ್ಶಿ ಕೆ.ಎಸ್. ಬಾಲಕೃಷ್ಣ, ಸದಸ್ಯರಾದ ಜಿ.ವೆಂಕಟೇಶ್, ಎಸ್.ಶಿವಣ್ಣ, ಲತಾ ಆರಾಧ್ಯ, ಕೆ. ಭರತ್ ಕೃಷ್ಣಮೂರ್ತಿ, ವಸಂತ್ ಕುಮಾರ್.ಕೆ.ವಿ., ಬಿ.ಆರ್.ಜಯಶಂಕರ್, ಕೆ.ಗಂಗಾಧರ್, ಎಂ.ಮಂಜುನಾಥ್, ನಟರಾಜ್, ರಾಕೇಶ್, ಪ್ರಧಾನ ಅರ್ಚಕ ಕೆ.ಎನ್.ಶಶಿಧರ್‌ಸ್ವಾಮಿ, ನಗರಸಭೆ ಸದಸ್ಯ ಶಿವಶಂಕರ್ ಮತ್ತಿತರರಿದ್ದರು.