ಅಂಬಾಲಾ: ರಾಷ್ಟ್ರಪತಿ ದ್ರೌಪದಿ ಮುರ್ಮು (Droupadi Murmu) ಅವರು ಬುಧವಾರ ರಫೇಲ್ ಯುದ್ಧ ವಿಮಾನದಲ್ಲಿ ಯಶಸ್ವಿಯಾಗಿ ಹಾರಾಟ ನಡೆಸಿದ್ದು, ‘ಇದೊಂದು ಮರೆಯಲಾಗದ ಅನುಭವ’ ಎಂದು ಬಣ್ಣಿಸಿದ್ದಾರೆ.
ಜಿ-ಸೂಟ್, ಸನ್‌ಗ್ಲಾಸ್ ಧರಿಸಿದ್ದ ರಾಷ್ಟ್ರಪತಿ ಮುರ್ಮು ಅವರು ಹರಿಯಾಣ ರಾಜ್ಯದ ಅಂಬಾಲಾದಲ್ಲಿರುವ ವಾಯುನೆಲೆ ಯಲ್ಲಿ ಧೈರ್ಯದಿಂದಲೇ ರಫೇಲ್ ಯುದ್ಧ ವಿಮಾನವನ್ನೇರಿ ಹಾರಾಟ ನಡೆಸಿದರು.
ಈ ಮೂಲಕ ಭಾರತೀಯ ವಾಯು ಪಡೆಯ ಎರಡು ಶಕ್ತಿಶಾಲಿ ಯುದ್ಧ ವಿಮಾನಗಳಲ್ಲಿ ಹಾರಾಟ ನಡೆಸಿದ ದೇಶದ ಮೊದಲ ರಾಷ್ಟಪತಿ ಎಂಬ ಗೌರವಕ್ಕೂ ಮುರ್ಮು ಪಾತ್ರರಾದರು. ಇದಕ್ಕೂ ಮೊದಲು, ಅವರು 2023 ರಲ್ಲಿ ಸುಖೋಯ್ 30 ಎಂಕೆಐ ವಿಮಾನದಲ್ಲಿ ಹಾರಾಟ ನಡೆಸಿದ್ದರು.
आज हरियाणा के अंबाला-कुरुक्षेत्र के ऊपर राफेल विमान में उड़ान भरने के दौरान राष्ट्रपति द्रौपदी मुर्मु ने अपना अनुभव साझा किया:
— President of India (@rashtrapatibhvn) October 29, 2025
‘राफेल की यह उड़ान मेरे लिए एक अविस्मरणीय अनुभव है।
इस आधुनिक विमान से आज मैं इस प्राचीन भूमि और ब्रह्मसरोवर को देख रही हूँ, जो हमारी सांस्कृतिक विविधता… pic.twitter.com/I3md42RFwx
ಭಾರತೀಯ ಸಶಸ್ತ್ರ ಪಡೆಗಳ ಸರ್ವೋಚ್ಚ ಕಮಾಂಡರ್ ಆಗಿರುವ ರಾಷ್ಟ್ರಪತಿ, ಅಂಬಾಲಾ ವಾಯುನೆಲೆಗೆ 200 ಕಿ.ಮೀ. ದೂರದಲ್ಲಿ 30 ನಿಮಿಷಗಳ ಕಾಲ ರಫೇಲ್ ವಿಮಾನದಲ್ಲಿ ಹಾರಾಡಿದರು.
ರಫೇಲ್ ಯುದ್ಧ ವಿಮಾನ ಸಮುದ್ರ ಮಟ್ಟದಿಂದ 15,000 ಅಡಿಗಳಷ್ಟು ಎತ್ತರದಲ್ಲಿ ಗಂಟೆಗೆ 700 ಕಿ.ಮೀ. ವೇಗದಲ್ಲಿ ಹಾರಾಟ ನಡೆಸಿದೆ.
17 ಸ್ಮಾಡ್ರನ್ ಕಮಾಂಡಿಂಗ್ ಆಫೀಸರ್ ‘ಗ್ರೂಪ್ ಕ್ಯಾಪ್ಟನ್ ಅಮಿತ್ ಗೆಹಾನಿ’ ಅವರು ವಿಮಾನದ ಮುಖ್ಯ ಪೈಲಟ್ ಆಗಿ ರಾಷ್ಟ್ರಪತಿ ಮುರ್ಮು ಅವರ ಹಾರಾಟದ ಅನುಭವಕ್ಕೆ ಸಹಕರಿಸಿದರು ಎಂದು ರಾಷ್ಟ್ರಪತಿ ಕಚೇರಿ ಪ್ರಕಟಣೆ ತಿಳಿಸಿದೆ.