
ದೊಡ್ಡಬಳ್ಳಾಪುರ: ನಗರದ ಪ್ರತಿಷ್ಠಿತ ನಳಂದ ಪ್ರೌಢಶಾಲೆಯ (Nalanda High School) ವಿದ್ಯಾರ್ಥಿಗಳು ಅಕ್ಟೋಬರ್ ತಿಂಗಳಲ್ಲಿ ನಡೆದ ರಾಜ್ಯಮಟ್ಟದ ಹಾಗೂ ರಾಷ್ಟ್ರಮಟ್ಟದ ವಿವಿಧ ಕ್ರೀಡಾಸ್ಪರ್ಧೆಗಳಲ್ಲಿ ಭಾಗವಹಿಸಿ, ಜಯಶಾಲಿಗಳಾಗಿ ಶಾಲೆಗೆ ಮತ್ತು ದೊಡ್ಡಬಳ್ಳಾಪುರಕ್ಕೆ ಕೀರ್ತಿ ತಂದಿದ್ದಾರೆಂದು ಶಾಲೆಯ ಮುಖ್ಯ ಶಿಕ್ಷಕರಾದ ಸುನಿತಾ ಪಿ ರವರು ತಿಳಿಸಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ಅವರು ಮಕ್ಕಳ ಸತತವಾದ ಅಭ್ಯಾಸ ಮತ್ತು ಪರಿಶ್ರಮವೇ ಈ ಮಟ್ಟದ ಜಯಗಳಿಸಲು ಸಾಧ್ಯವಾಗಿದೆ. ಈ ವಿದ್ಯಾರ್ಥಿಗಳ ಸಾಧನೆ ಇತರೆ ವಿದ್ಯಾರ್ಥಿಗಳಿಗೂ ಆದರ್ಶಪ್ರಾಯರಾಗಿದ್ದಾರೆಂದು ತಿಳಿಸಿದ್ದಾರೆ.

ತಾಲೂಕು ಮಟ್ಟದ ಕರಾಟೆಯಲ್ಲಿ ನಿತಿನ್ ಕೆ (ಎಲ್‌ಕೆಜಿ) ಮತ್ತು ಶಿವಾನಿ ಕೆ (2ನೇ ತರಗತಿ) ರವರು ಪ್ರಥಮ ಸ್ಥಾನಗಳಿಸಿ ಹಳದಿ ಬೆಲ್ಟನ್ನು ಪಡೆದಿದ್ದು, ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ದೀಕ್ಷಿತ್ ಎಸ್ (ನಾಲ್ಕನೇ ತರಗತಿ) ಹೈದರಾಬಾದ್ ನಲ್ಲಿ ನಡೆದ ಏಷ್ಯನ್ ಓಪನ್ ಅಂತಾರಾಷ್ಟ್ರೀಯ ಟೇಕ್ವಾಂಡೋ ಚಾಂಪಿಯನ್ ಶಿಪ್ ನಲ್ಲಿ ಚಿನ್ನದ ಪದಕವನ್ನು ಪಡೆದಿದ್ದಾರೆ.

ದಸರಾ ಕ್ರೀಡಾ ಸಮಿತಿಯಿಂದ ಮೈಸೂರಿನಲ್ಲಿ ಆಯೋಜಿಸಲಾಗಿದ್ದ ಟ್ರೆಡಿಶನಲ್ ಯೋಗ ಮತ್ತು ಆರ್ಟಿಸ್ಟಿಕ್ಸ್ ಸೋಲೋ ವಿಭಾಗದಲ್ಲಿ ಹೃತಿಕ್ ಜಿಸಿ (7ನೇ ತರಗತಿ) ಪ್ರಥಮ ಸ್ಥಾನ ಗಳಿಸಿ ಸಿಎಂ ಕಪ್ ತನ್ನದಾಗಿಸಿಕೊಂಡಿದ್ದಾರೆ.

ದಸರಾ ಕ್ರೀಡಾ ಸಮಿತಿ ವತಿಯಿಂದ ನಡೆದ ಆರ್ಟಿಸ್ಟಿಕ್ ಪೇರ್ ಯೋಗಾದಲ್ಲಿ ನೀರಜ್ ಎಲ್(6ನೇ ತರಗತಿ) ಮತ್ತು ಕುಶಾಲ್ ಎಸ್ (7ನೇ ತರಗತಿ)ಪ್ರಥಮ ಸ್ಥಾನ ಗಳಿಸಿದ್ದಾರೆ.

ಸ್ಟೂಡೆಂಟ್ಸ್ ಗೇಮ್ಸ್ ಫೆಡರೇಶನ್ ಆಫ್ ಇಂಡಿಯಾ ವತಿಯಿಂದ ಡಿವಿಷನ್ ಲೆವೆಲ್ ಯೋಗದಲ್ಲಿ ಆರ್ಟಿಸ್ಟಿಕ್ಸ್ ಸೋಲೋ ವಿಭಾಗದಲ್ಲಿ ಹೃತಿಕ್ ಜಿ ಸಿ ( 7ನೇ ತರಗತಿ) ಮತ್ತು ರಿದಮಿಕ್ ಯೋಗಾದಲ್ಲಿ ಹಿತಶ್ರೀ.ಕೆ.ಎಂ ( 7ನೇ ತರಗತಿ )ಯಶಸ್ವಿ (6ನೇ ತರಗತಿ) ಎರಡನೇ ಸ್ಥಾನಗಳಿಸಿದ್ದಾರೆ.

ಸ್ಟುಡೆಂಟ್ಸ್ ಗೇಮ್ಸ್ ಫೆಡರೇಶನ್ ಆಫ್ ಇಂಡಿಯಾ ವತಿಯಿಂದ ನಡೆದ ಡಿವಿಷನ್ ಮಟ್ಟದ ಚೆಸ್ ಸ್ಪರ್ಧೆಯಲ್ಲಿ ತೃಪ್ತಿ ಎನ್ ಶರತ್ (10 ನೇ ತರಗತಿ) ಮತ್ತು ವೈಷ್ಣವಿ (9ನೇ ತರಗತಿ) ಯಶಸ್ವಿಯಾಗಿ ಭಾಗವಹಿಸಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ದೊಡ್ಡಬಳ್ಳಾಪುರದ ಲಯನ್ಸ್ ಕ್ಲಬ್ ವತಿಯಿಂದ ನಡೆದ ಪೀಸ್ ಪೋಸ್ಟರ್ ರಚಿಸುವ ಸ್ಪರ್ಧೆಯಲ್ಲಿ ನಳಂದ ಪ್ರೌಢಶಾಲೆಯ ಚಿನ್ಮಯಿ ಪಿ (8ನೇ ತರಗತಿ) ಪ್ರಥಮ ಸ್ಥಾನವನ್ನು ತೇಜಸ್ವಿನಿ ಬಿಪಿ (6ನೇ ತರಗತಿ) ದ್ವಿತೀಯ ಸ್ಥಾನವನ್ನು ಇಂದುಶ್ರೀ ಕೆ ಎಲ್ (8ನೇ ತರಗತಿ) ಮತ್ತು ಲಿಖಿತಾ ಪಿ (6ನೇ ತರಗತಿ) ಸಮಾಧಾನ ಬಹುಮಾನಗಳನ್ನು ಪಡೆದಿದ್ದಾರೆ.
ನಳಂದ ಪ್ರೌಢಶಾಲೆಯ ವತಿಯಿಂದ ಅಕ್ಟೋಬರ್ ತಿಂಗಳಿನಲ್ಲಿ ಅನೇಕ ರಾಜ್ಯ ಮತ್ತು ರಾಷ್ಟ್ರಮಟ್ಟದ ಅನೇಕ ಸ್ಪರ್ಧೆಗಳಲ್ಲಿ ಭಾಗವಹಿಸಿ ಜಯಶಾಲಿಯಾಗಿ ಶಾಲೆಗೆ ಮತ್ತು ದೊಡ್ಡಬಳ್ಳಾಪುರಕ್ಕೆ ಕೀರ್ತಿ ತಂದ ವಿದ್ಯಾರ್ಥಿಗಳನ್ನು ಶಾಲಾ ಕಾರ್ಯದರ್ಶಿ ಅನುರಾಧ ಕೆ ಆರ್ ಅಭಿನಂದಿಸಿ ಶುಭ ಹಾರೈಸಿದ್ದಾರೆ.
 
				 
															 
						 
						 
						 
						 
						 
						 
						 
						 
						 
						 
						 
						 
						 
						 
						 
						 
					 
						 
						 
						 
						 
					 
						 
						 
						 
						 
						 
						 
					 
						 
						 
						 
						 
						 
						 
						 
						 
						 
						 
					 
						 
						 
						 
						 
						 
						 
						 
						 
						 
						 
						 
						 
					 
					 
					 
					 
					 
					 
					 
						 
						 
						 
						