ದೊಡ್ಡಬಳ್ಳಾಪುರ: ಪಂಜಾಬ್ (Punjab State) ರಾಜ್ಯದಲ್ಲಿ ವಿಪರೀತ ಮಳೆಯಿಂದ ನೆರೆ (flood) ಉಂಟಾಗಿ, ಅಲ್ಲಿನ ಕೃಷಿಕರು ಭೂಮಿ ಕಳೆದುಕೊಂಡು ಮನೆ ಇಲ್ಲದೇ ನಿರಾಶ್ರಿತರಾಗಿದ್ದಾರೆ. ಮನೆ ಕಳೆದುಕೊಂಡು, ಕೃಷಿಯನ್ನೂ ಕಳೆದುಕೊಂಡು ಕಂಗಾಲಾಗಿದ್ದಾರೆ.
ಈ ಹಿನ್ನೆಲೆಯಲ್ಲಿ ಪಂಜಾಬ್‌ನ ಜನರಿಗೆ ನೆರವು ನೀಡುವ ಸಲುವಾಗಿ ದೊಡ್ಡಬಳ್ಳಾಪುರ ತಾಲೂಕಿನ ಎಲ್ಲಾ ಮಸೀದಿಗಳಲ್ಲಿಯೂ ಪರಿಹಾರ ನಿಧಿಗಾಗಿ ಸಂಗ್ರಹಿಸಲಾಗಿದೆ.
ಹೀಗೆ ಸಂಗ್ರಹಿಸಲಾದ ಒಟ್ಟು 3,17,350ರೂ. ಗಳನ್ನು ಕರ್ನಾಟಕ ಜಮಾಯತೆ ಉಲ್ಮ ಅಧ್ಯಕ್ಷ ಮುಫ್ತಿ ಇಫ್ತೆಕರ್ ಅವರಿಗೆ ಹಸ್ತಾಂತರಿಸಲಾಯಿತು.
ಈ ಸಂದರ್ಭದಲ್ಲಿ ಪರಿಹಾರ ಸ್ವೀಕರಿಸಿದ ಜಮಾಯತೆ ಉಲ್ಮ ಅಧ್ಯಕ್ಷ ಮುಫ್ತಿ ಇಫ್ತೆಕರ್ ಮಾತನಾಡಿ, ಪಂಜಾಬ್ ರಾಜ್ಯದಲ್ಲಿ ವಿಪರೀತ ಮಳೆಯಿಂದ ನೆರೆ ಉಂಟಾಗಿ ಅಲ್ಲಿನ ಕೃಷಿಕರು ಭೂಮಿ ಕಳೆದುಕೊಂಡು ಮನೆ ಇಲ್ಲದೇ ನಿರಾಶ್ರಿತರಾಗಿರುವ ಜನರಿಗಾಗಿ, ಪರಿಹಾರ ಸಂಗ್ರಹಿಸಿದ ದೊಡ್ಡಬಳ್ಳಾಪುರ ತಾಲೂಕಿನ ಎಲ್ಲಾ ಮಸೀದಿಯ ಸದಸ್ಯರುಗಳಿಗೂ ಹಾಗೂ ಮುಸ್ಲಿಂ ಬಾಂಧವರಿಗೆ ಧನ್ಯವಾದ ಅರ್ಪಿಸಿದರು.
ಈ ವೇಳೆ ದೊಡ್ಡಬಳ್ಳಾಪುರ ವಕ್ಫ್ ಬೋರ್ಡಿನ ಮಾಜಿ ಅಧ್ಯಕ್ಷ ಮೊಹಮ್ಮದ್ ಆಜಾಮ್ ಪಾಷಾ, ಉಪಾಧ್ಯಕ್ಷ ಸೈಯದ್ ಮುಶೀರ್, ಮಾಜಿ ಸದಸ್ಯ ಶ್ರೀನಗರ ಬಶೀರ್, ವಿಸ್ಡಮ್ ಶಾಲೆಯ ಮುಖ್ಯಸ್ಥ ಜಲೀಲ್ ಅಹ್ಮದ್, ಮುಜಾಹಿದ್ ಖಾನ್ ಸೇರಿದಂತೆ ದೊಡ್ಡಬಳ್ಳಾಪುರದ ವಿವಿಧ ಮಸೀದಿಗಳ ಮೌಲಾನಗಳು ಇದ್ದರು.
 
				 
															 
						 
						 
						 
						 
						 
						 
						 
						 
						 
						 
						 
						 
						 
						 
						 
						 
					 
						 
						 
						 
						 
					 
						 
						 
						 
						 
						 
						 
					 
						 
						 
						 
						 
						 
						 
						 
						 
						 
						 
					 
						 
						 
						 
						 
						 
						 
						 
						 
						 
						 
						 
						 
					 
					 
					 
					 
					 
					 
					 
					 
						 
						 
						 
						