
ಬೆಂ.ಗ್ರಾ.ಜಿಲ್ಲೆ: ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಾಲಾ ಶಿಕ್ಷಣ ಇಲಾಖೆ ಹಾಗೂ ಜಿಲ್ಲಾ ಬಾಲಭವನ ಸೊಸೈಟಿ ಇವರ ವತಿಯಿಂದ ಮಕ್ಕಳ ದಿನಾಚರಣೆ ಅಂಗವಾಗಿ ರಾಜ್ಯ ಮಟ್ಟದ ಕಲಾಶ್ರೀ ಪ್ರಶಸ್ತಿಗೆ ಆಯ್ಕೆಗೆ 9 ರಿಂದ 16 ವರ್ಷದ ಮಕ್ಕಳಿಗಾಗಿ ನವೆಂಬರ್ 7 ರಂದು ಕರ್ನಾಟಕ ಪಬ್ಲಿಕ್ ಶಾಲೆ ವಿಶ್ವನಾಥಪುರ ಸಭಾಂಗಣದಲ್ಲಿ ಜಿಲ್ಲಾ ಮಟ್ಟದ ವಿವಿಧ ಸ್ಪರ್ಧೆಗಳನ್ನು (Competitions) ಆಯೋಜಿಸಲಾಗಿದೆ.
1) ಸೃಜನಾತ್ಮಕ ಕಲೆ: (ಚಿತ್ರಕಲೆ, ಕರಕುಶಲೆ, ಜೇಡಿಮಣ್ಣಿನಕಲೆ
(ಮೂರರಲ್ಲೂ ಕಡ್ಡಾಯವಾಗಿ ಭಾಗವಹಿಸಬೇಕು)(ಹಾಳೆ ಮತ್ತುಜೇಡಿಮಣ್ಣು, ಕರಕುಶಲೆ ಸಾಮಾಗ್ರಿಗಳನ್ನು ತಂದು ಸ್ಥಳದಲ್ಲೇ ತಯಾರಿಸುವುದು)
2) ಸೃಜನಾತ್ಮಕ ಬರವಣಿಗೆ: (ಕಥೆ,ಕವನ, ಪ್ರಬಂಧಬರೆಯುವುದು)
(ಮೂರರಲ್ಲೂ ಕಡ್ಡಾಯವಾಗಿ ಭಾಗವಹಿಸಬೇಕು)
3) ಸೃಜನಾತ್ಮಕ ಪ್ರದರ್ಶನ ಕಲೆ: (ಶಾಸ್ತ್ರೀಯನೃತ್ಯ ಜಾನಪದನೃತ್ಯ, ಕರ್ನಾಟಕ ಹಾಗೂ ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತ, ವಾದ್ಯಸಂಗೀತ, ಯಕ್ಷಗಾನ, ಯಕ್ಷಿಣಿಪ್ರದರ್ಶನ, ಸುಗಮಸಂಗೀತ, ಏಕಪಾತ್ರಾಭಿನಯ, ಯೋಗತ್ಯ. ಮ್ಯಾಜಿಕ್ ಇತ್ಯಾದಿ ಯಾವುದಾದರೊಂದು ಕಲೆಯನ್ನು ಮಾತ್ರ ಪ್ರದರ್ಶಿಸಲು ಅವಕಾಶವಿರುತ್ತದೆ. (ಗುಂಪು ಪ್ರದರ್ಶನಕ್ಕೆ ಅವಕಾಶವಿರುವುದಿಲ್ಲ)
4) ವಿಜ್ಞಾನದಲ್ಲಿ ನೂತನ ಆವಿಷ್ಕಾರ: (ವಿಜ್ಞಾನಕ್ಕೆ ಸಂಬಂಧಪಟ್ಟಂತೆ ಒಂದು ವಿಷಯದ ಬಗ್ಗೆ ಮಾದರಿ ಪ್ರದರ್ಶನ ಹಾಗೂ ವಿವರಣೆ ಮತ್ತು ವಿಜ್ಞಾನ ಕ್ಷೇತ್ರಕ್ಕೆ ಸಂಬಂಧಿಸಿದಂತೆ ತೀರ್ಪುಗಾರರ ಇನ್ನಿತರ ಪ್ರಶ್ನೆಗಳಿಗೆ ಉತ್ತರ (ಮಕ್ಕಳು ಪ್ರತ್ಯೇಕ ಮಾದರಿ ಪ್ರದರ್ಶನ ಮಾಡುವುದು ಕಡ್ಡಾಯ)
ಯಾವುದೇ ಸ್ಪರ್ಧೆಗಳಲ್ಲಿಯೂ ಪ್ರತಿಭಾವಂತ ಅಂಗವಿಕಲ/ಬುಡಕಟ್ಟು ಪ್ರದೇಶದ ಮಕ್ಕಳು ಭಾಗವಹಿಸಬಹುದು.
ಸ್ಪರ್ಧೆಗಳಲ್ಲಿ ಪ್ರತಿಭಾವಂತ ಶಾಲಾ ಮಕ್ಕಳು ಭಾಗವಹಿಸ ಬಹುದಾಗಿದ್ದು, ಆಸಕ್ತಿಯುಳ್ಳ ಪ್ರತಿಭಾವಂತ ಮಕ್ಕಳು ನವೆಂಬರ್ 6 ಸಂಜೆ 5.30 ರೊಳಗಾಗಿ ಉಪನಿರ್ದೇಶಕರ ಕಛೇರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇ ಲಾಖೆ, ಬೆಂಗಳೂರು ಗ್ರಾಮಾಂತರ ಜಿಲ್ಲೆ ಇಲ್ಲಿ ಹೆಸರು ನೋಂದಾಯಿಸಿಕೊಳ್ಳಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ಕಛೇರಿಯ ದೂರವಾಣಿ ಸಂಖ್ಯೆ. 7349488216 ಮತ್ತು 9380094471 ಗೆ ಕಛೇರಿ ಸಮಯದಲ್ಲಿ ಸಂಪರ್ಕಿಸಬಹುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. (ಸಾಂದರ್ಭಿಕ ಚಿತ್ರ ಬಳಸಲಾಗಿದೆ)
 
				 
															 
						 
						 
						 
						 
						 
						 
						 
						 
						 
						 
						 
						 
						 
						 
						 
						 
					 
						 
						 
						 
						 
					 
						 
						 
						 
						 
						 
						 
					 
						 
						 
						 
						 
						 
						 
						 
						 
						 
						 
					 
						 
						 
						 
						 
						 
						 
						 
						 
						 
						 
						 
						 
					 
					 
					 
					 
					 
					 
					 
						 
						 
						 
						