ದೊಡ್ಡಬಳ್ಳಾಪುರ: ತಾಲೂಕಿನ ಪ್ರತಿಷ್ಠಿತ ಶಾಲೆಯಾದ ಎಂಎಸ್‌ವಿ ಪಬ್ಲಿಕ್ ಶಾಲೆಯ (MSV Public School) ಟೇಕ್ವಾಂಡೋ ತರಬೇತುದಾರ ಪರಮೇಶ್ವರ್ ಜೆ. ಅವರಿಗೆ ಗುರು ಸಮ್ಮಾನ್-2025 ಪ್ರಶಸ್ತಿ ದೊರೆತಿದೆ.
ಸಿಬಿಎಸ್ಇ ಪಠ್ಯಕ್ರಮ ಶಾಲೆಗಳ ಒಕ್ಕೂಟವಾದ ಬೆಂಗಳೂರು ಸಹೋದಯ ಶಾಲೆಯಗಳ ಸಂಕೀರ್ಣದ ವತಿಯಿಂದ ಗುರುಸಮ್ಮಾನ್ – 2025 ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ದೊಡ್ಡಕಲ್ಲಸಂದ್ರದ ಬಳಿಯ ಮೀನಾಕ್ಷಿ ರಂಗಮಂಚ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಸಂಸದ ತೇಜಸ್ವಿ ಸೂರ್ಯ ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಬೆಂಗಳೂರು ಸಹೋದಯ ಶಾಲೆಗಳ ಸಂಕೀರ್ಣದ ಪದಾಧಿಕಾರಿಗಳ ಆಯ್ಕೆಯ ಅನುಸಾರ ಶಾಲೆಗಳಲ್ಲಿ ತಮ್ಮ ಕ್ಷೇತ್ರಗಳಲ್ಲಿ ಗುರುತಿಸಿಕೊಂಡ ಸಿಬ್ಬಂದಿಗೆ ಪ್ರಶಸ್ತಿಗಳನ್ನು ನೀಡಲಾಯಿತು.
ಕುಮಾರನ್ಸ್ ಸಂಸ್ಥೆಗಳ ಶೈಕ್ಷಣಿಕ ನಿರ್ದೇಶಕ ದೀಪಾ ಶ್ರೀಧರ್, ಹಾರ್ವೆಸ್ಟ್ ಅಂತರಾಷ್ಟ್ರೀಯ ಶಾಲೆಯ ಹಿರಿಯ ಪ್ರಾಂಶುಪಾಲರಾದ ಡಾ. ದಾಕ್ಷಾಯಿಣಿ ಖನ್ನಾ ಇದ್ದರು.
ಪಠ್ಯೇತರ ಶಿಕ್ಷಕರ ವಿಭಾಗದಲ್ಲಿ ದೊಡ್ಡಬಳ್ಳಾಪುರದ ಎಂಎಸ್‌ವಿ ಶಾಲೆಯ ಟೇಕ್ವಾಂಡೋ ತರಬೇತುದಾರ ಪರಮೇಶ್ವರ್ ಜೆ. ಅವರು ಬೆಂಗಳೂರು ಸಹೋದಯ ಚಟುವಟಿಕೆ ಯೋಧ (Bangalore Sahodaya Activity Warrior) ಪ್ರಶಸ್ತಿಗೆ ಭಾಜನರಾದರು
ಪರಮೇಶ್ವರ್ ಜೆ ರವರ ನೇತೃತ್ವದಲ್ಲಿ ಎಂಎಸ್‌ವಿ ಶಾಲೆಯ ವಿದ್ಯಾರ್ಥಿನಿ ಹರ್ಷಿತಾ ಎಂ. ರಾಷ್ಟ್ರೀಯ ಮಟ್ಟದಲ್ಲಿ ಭಾಗವಹಿಸಿ ಬೆಳ್ಳಿಯ ಪದಕ ಪಡೆದಿದ್ದಾರೆ.
ಈ ಗೌರವಕ್ಕೆ ಭಾಜನರಾದ ಪರಮೇಶ್ವರ್ ರವರಿಗೆ ಶಾಲೆಯ ಅಧ್ಯಕ್ಷ ಸುಬ್ರಮಣ್ಯ ಎ, ಕಾರ್ಯದರ್ಶಿ ಮಂಜುಳಾ ಸುಬ್ರಮಣ್ಯ, ಉಪಾಧ್ಯಕ್ಷ ಸ್ವರೂಪ್, ಪ್ರಾಂಶುಪಾಲರಾದ ರೆಮ್ಯ.ಬಿ.ವಿ., ಮತ್ತು ಶಾಲೆಯ ಸಿಬ್ಬಂದಿ ಅಭಿನಂದನೆ ಸಲ್ಲಿಸಿದರು.
 
				 
															 
						 
						 
						 
						 
						 
						 
						 
						 
						 
						 
					 
						 
						 
						 
						 
						 
						 
					 
						 
						 
						 
						 
					 
						 
						 
						 
						 
						 
						 
					 
						 
						 
						 
						 
						 
						 
						 
						 
						 
						 
					 
						 
						 
						 
						 
						 
						 
						 
						 
						 
						 
						 
						 
					 
					 
					 
					 
					 
					 
					 
						 
						 
						 
						