
ಹೈದರಾಬಾದ್: 2015ರಲ್ಲಿ ಚಿತ್ತೂರ್‌ನ ಮಾಜಿ ಮೇಯರ್ ಕಟಾರಿ ಅನುರಾಧ ಮತ್ತು ಅವರ ಪತಿ ಕಟಾರಿ ಮೋಹನ್ ಅವರನ್ನು ಹತ್ಯೆಗೈದ ಐದು ಮಂದಿ ಆರೋಪಿಗಳಿಗೆ ಆಂಧ್ರಪ್ರದೇಶದ ನ್ಯಾಯಾಲಯ ಶುಕ್ರವಾರ ಮರಣ ದಂಡನೆ ಶಿಕ್ಷೆ (Sentenced to death) ವಿಧಿಸಿದೆ.
2015ರ ನವೆಂ ಬರ್ 17ರಂದು ಚಿತ್ತೂರು ನಗರಸಭೆ ಕಚೇರಿಯೊಳಗೆ ದಂಪತಿಯನ್ನು ಕೊಲೆ ಮಾಡಲಾಗಿತ್ತು.
ಪ್ರಧಾನ ಆರೋಪಿಯನ್ನು ಮೋಹನ್ ಅವರ ಸೋದರಳಿಯ ಶ್ರೀರಾಮ್ ಚಂದ್ರಶೇಖರ್ ಎಂದು ಗುರುತಿಸಲಾಗಿದೆ. ಈ ಕೃತ್ಯ ಚಿತ್ತೂರು ಜಿಲ್ಲೆಯಲ್ಲಿ ಬಾರೀ ಸಂಚಲನ ಮೂಡಿಸಿತ್ತು.