
ದೊಡ್ಡಬಳ್ಳಾಪುರ: ಕರ್ನಾಟಕ ರಾಜ್ಯೋತ್ಸವ (Karnataka Rajyotsava ) ಅಂಗವಾಗಿ ತಾಲ್ಲೂಕಿನ ಇತಿಹಾಸ ಪ್ರಸಿದ್ಧ ಘಾಟಿ ಸುಬ್ರಹ್ಮಣ್ಯಸ್ವಾಮಿ ದೇವಾಲಯದಲ್ಲಿ (Ghati Subrahmanyaswamy Temple) ವಿಶೇಷ ಪೂಜೆ, ಅಲಂಕಾರ ನಡೆಸಲಾಗಿದೆ.
ದೇವಾಲಯದ ಗೋಪುರಕ್ಕೆ ಶುಕ್ರವಾರ ಪಾತ್ರಿ ವಿಶೇಷ ದೀಪಾಲಂಕಾರ ಮಾಡಲಾಗಿತ್ತು.
ದೊಡ್ಡಬಳ್ಳಾಪುರ ನಗರದ ಮಂಗಳವಾರ ಭಕ್ತ ಮಂಡಳಿ ಟ್ರಸ್ಟ್ ಇವರಿಂದ ಶ್ರೀ ಕ್ಷೇತ್ರ ಘಾಟಿಯಲ್ಲಿ 28ನೇ ವರ್ಷದ ವಿಶೇಷ ಪೂಜಾ ಕಾರ್ಯಕ್ರಮ ಅಂಗವಾಗಿ ಶನಿವಾರ ಬೆಳಗ್ಗೆ ಶ್ರೀ ಸುಬ್ರಹ್ಮಣ್ಯ ಸ್ವಾಮಿಯವರಿಗೆ ಅಭಿಷೇಕದ ಬಳಿಕ ವಿಶೇಷ ಅಲಂಕಾರ ಹಾಗೂ ಶ್ರೀ ನರಸಿಂಹ ಸ್ವಾಮಿಯವರಿಗೆ ಬೆಣ್ಣೆ ಅಲಂಕಾರ ಮಾಡಲಾಗಿತ್ತು.