ದೊಡ್ಡಬಳ್ಳಾಪುರ: ತಾಲೂಕಿನ ಹೊಸಹಳ್ಳಿ ಠಾಣೆ (Hosahalli Police Station) ಆವರಣದಲ್ಲಿ ವರ್ಣರಂಜಿತ ಕಾರಂಜಿಯ ಮೇಲೆ ನಿರ್ಮಿಸಲಾಗಿರುವ ನಾಡದೇವಿ ಭುವನೇಶ್ವರಿ ತಾಯಿಯ ಎಂಟು ಅಡಿಗಳ ವಿಗ್ರಹವನ್ನು (Bhuvaneshwari idol) ಸ್ಥಾಪಿಸಲಾಗಿದೆ.
ಕರ್ನಾಟಕ ರಾಜ್ಯೋತ್ಸವ ಹಿನ್ನೆಲೆಯಲ್ಲಿ ಇನ್ಸ್ಪೆಕ್ಟರ್ ರಾವ್ ಗಣೇಶ್ ಜನಾರ್ಧನ್ ಅವರು ನಾಡದೇವಿ ಭುವನೇಶ್ವರಿ ತಾಯಿಯ ವಿಗ್ರಹವನ್ನು ಅನಾವರಣಗೊಳಿಸಿದ್ದಾರೆ.
ಈ ವೇಳೆ ಹೊಸಹಳ್ಳಿ ಪೊಲೀಸ್ ಠಾಣೆಯ ಸಿಬ್ಬಂದಿಗಳು, ಹಾಸ್ಟೆಲ್ ವಿದ್ಯಾರ್ಥಿಗಳೊಂದಿಗೆ ಹಾಜರಿದ್ದರು.