ದೊಡ್ಡಬಳ್ಳಾಪುರ: ರಾಷ್ಟ್ರಪತಿ ಪ್ರಶಸ್ತಿ ಪುರಸ್ಕೃತ ಹೊಸಹಳ್ಳಿ ಪೊಲೀಸ್ ಠಾಣೆಯ (Hosahalli police station) ಇನ್ಸ್ಪೆಕ್ಟರ್ (Inspector) ರಾವ್ ಗಣೇಶ್ ಜನಾರ್ಧನ್ ಸೇರಿ 120 ಮಂದಿ ಪೊಲೀಸ್ ಇನ್ಸ್ಪೆಕ್ಟರ್ಗಳನ್ನು ವರ್ಗಾವಣೆ ಮಾಡಲಾಗಿದೆ.
ಈ ಕುರಿತಂತೆ ಪೊಲೀಸ್ ಮಹಾನಿರೀಕ್ಷಕರ ಪರವಾಗಿ ಸೌಮೇಂದ್ರ ಮುಖರ್ಜಿ ಆದೇಶಿಸಿದ್ದಾರೆ.
ಇದರ ಅನ್ವಯ ದೊಡ್ಡಬಳ್ಳಾಪುರ ತಾಲ್ಲೂಕಿನ ಹೊಸಹಳ್ಳಿ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಆಗಿದ್ದ ರಾವ್ ಗಣೇಶ್ ಜನಾರ್ಧನ್ ಅವರನ್ನು ಬೆಸ್ಕಾಂ ಜಾಗೃತ ದಳಕ್ಕೆ ವರ್ಗಾವಣೆ ಮಾಡಲಾಗಿದೆ.
ಇವರ ವರ್ಗಾವಣೆಯಿಂದ ತೆರವಾಗಿರುವ ಸ್ಥಾನಕ್ಕೆ ಯಾರನ್ನು ನೇಮಿಸಿಲ್ಲ.