ಕೆ.ಎಂ.ಸಂತೋಷ್, ಆರೂಢಿ; ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ (Rahul Gandhi) ಚುನಾವಣೆ ಆಯೋಗದ ವಿರುದ್ಧ ವೋಟ್ ಚೋರಿ (Vote Chori) ಕುರಿತಂತೆ ನಿನ್ನೆ ಮತ್ತೊಂದು ಗಂಭೀರ ಆರೋಪ ಮಾಡಿದ್ದಾರೆ.
ಇದನ್ನು ಬಿಜೆಪಿ ಬೆಂಬಲಿಗರು ಹಾದಿ ಬೀದಿಯಲ್ಲಿ ಮಾತಾಡುವುದ ಬಿಟ್ಟು, ಚುನಾವಣೆ ಆಯೋಗಕ್ಕೆ ಅಧಿಕೃತ ದೂರು ಕೊಡು, ಸುಪ್ರಿಂ ಕೋರ್ಟ್‌ಗೆ ಹೋಗು ಎನ್ನುತ್ತಿದ್ದಾರೆ.
ಮತ್ತೊಂದೆಡೆ ಕಾಂಗ್ರೆಸ್ ಬೆಂಬಲಿಗರು, ದೇಶದಲ್ಲಿ ನ್ಯಾಯ ಸಮ್ಮತ ಚುನಾವಣೆ ನಡೆಸಬೇಕಾದ ಜವಬ್ದಾರಿ ಚುನಾವಣೆ ಆಯೋಗದ್ದಾಗಿದೆ. ಆದರೆ ನಿಮ್ಮ ಮನೆಯಲ್ಲಿ (ಚುನಾವಣೆ ಆಯೋಗ) ಕಳ್ಳತನ ನಡೆದಿದೆ ಎಂದು ಹೇಳಿದರೆ, ತನಿಖೆ ನಡೆಸಿ, ತಪ್ಪಾಗಿದ್ದರೆ ಕ್ರಮ ಕೈಗೊಳ್ಳಬೇಕಾದದ್ದನ್ನು ಬಿಟ್ಟು, ದೂರು ಕೊಡು, ಸುಪ್ರೀಂ ಕೋರ್ಟ್ಗೆ ಹೋಗು ಎನ್ನುತ್ತಾರೆ ಎಂದು ತಿರುಗೇಟು ನೀಡುತ್ತಿದ್ದಾರೆ.
Rahul Gandhi is the best investigative journalist in India today. 🔥
— Gabbar (@Gabbar0099) November 5, 2025
He is single handedly exposed BJP
Every indian should watch this. pic.twitter.com/47B7dIoGBh
ನಿನ್ನೆ ನವದೆಹಲಿಯಲ್ಲಿ ಈ ಮಹಿಳೆಯ ನೋಡಿದ್ದೀರಾ..? ಯಾವ ರಾಜ್ಯದವರು ಗೊತ್ತೆ..? ಎಂದು ಸುದ್ದಿಗೋಷ್ಠಿ ಆರಂಭಿಸಿದ ರಾಹುಲ್ ಗಾಂಧಿ ಹೈಡ್ರೋಜನ್ ಬಾಂಬ್ (ಹೆಚ್ ಫೈಲ್ಸ್) ಸ್ಪೋಟಿಸಿದರು.
ಹರಿಯಾಣ ವಿಧಾನಸಭೆ ಚುನಾವಣೆ ವೇಳೆ 25 ಲಕ್ಷ ಮತದಾರರ ನಕಲಿ ಮತದಾರ ಗುರುತಿನ ಚೀಟಿ ಸೃಷ್ಟಿಸಿ ಕಾಂಗ್ರೆಸ್ ಅನ್ನು ಸೋಲಿಸಲಾಗಿದೆ. ಅಲ್ಲದೆ ಲೋಕಸಭೆ ಚುನಾವಣೆಯಲ್ಲಿ ಮತದಾನ ಮಾಡಿದ್ದ 3,50,000 ಮತದಾರರ ಗುರುತಿನ ಚೀಟಿಯನ್ನು ರದ್ದು ಮಾಡಲಾಗಿದೆ. ಇವೆಲ್ಲ ಕಾಂಗ್ರೆಸ್ ಬೆಂಬಲಿತರದ್ದು ಎಂದು ಆರೋಪಿಸಿದರು.
LIVE: #VoteChori Press Conference – The H Files https://t.co/IXFaH9fEfr
— Rahul Gandhi (@RahulGandhi) November 5, 2025
ಈ ರೀತಿ ನಕಲಿ ಹೆಸರಲ್ಲಿ ಸೇರಿಸಿದ್ದ ಮಹಿಳೆಯೇ ಈ ಬ್ರೆಜಿಲ್ ದೇಶದ ಮಾಡಲ್ ಎಂದು ಹೇಳಲಾಗುತ್ತಿದೆ. ಈ ಮೂಲಕ ಕಳೆದ ಒಂದು ತಿಂಗಳಿನಿಂದ ಹೇಳಲಾಗುತ್ತಿದ್ದ ಹೈಡ್ರೋಜನ್ ಬಾಂಬ್ ಅನ್ನೂ ನವೆಂಬರ್ 5 ರಂದು ರಾಹುಲ್ ಗಾಂಧಿ ಸ್ಪೋಟಿಸಿದ್ದಾರೆ.
ಚುನಾವಣೆ ಆಯೋಗದ ಮೇಲೆ ಗಂಭೀರ ಆರೋಪ
ಚುನಾವಣೆ ಆಯುಕ್ತ ಸುಕ್ವೀರ್ ಸಿಂಗ್ ಸಂದು, ಮಾಜಿ ಮುಖ್ಯ ಚುನಾವಣೆ ಆಯುಕ್ತ ರಾಜೀವ್ ಕುಮಾರ್, ಹಾಲಿ ಮುಖ್ಯ ಚುನಾವಣೆ ಆಯುಕ್ತ ಜ್ಞಾನೇಶ್ ಕುಮಾರ್ ಅವರ ಫೋಟೋ ಸುದ್ದಿಗೋಷ್ಠಿಯಲ್ಲಿ ಪದೇ ಪದೇ ತೋರಿಸಲಾಗಿದ್ದು, ಈ ಮೂವರು ಪ್ರಧಾನಿ ನರೇಂದ್ರ ಮೋದಿ, ಗೃಹಸಚಿವ ಅಮಿತ್ ಶಾ ಅವರೊಂದಿಗೆ ಸೇರಿ ಭಾರತದ ಪ್ರಜಾಪ್ರಭುತ್ವವನ್ನು ಹಾಳುಗೆಡುವುತ್ತಿದ್ದಾರೆ ಎಂದು ಆರೋಪಿಸಿದರು.
ಭಾರತದ ಚುನಾವಣೆ ಆಯೋಗದ ಮೇಲೆ ಇಷ್ಟು ದೊಡ್ಡಮಟ್ಟದ ಆರೋಪ ಈ ಹಿಂದೆ ಎಂದು ಕೇಳಿಬಂದಿರಲಿಲ್ಲ. ಏಕೆಂದರೆ ರಾಹುಲ್ ಗಾಂಧಿ ಅವರು ದೊಡ್ಡ ಟ್ರೇಯಲ್ಲಿ ಮತದಾರರ ಗುರುತಿನ ಚೀಟಿಯನ್ನು ತೋರಿಸಿ ಗಂಭೀರ ಆರೋಪ ಮಾಡಿದ್ದಾರೆ.
ಬಿಜೆಪಿ ಕಾರ್ಯಕರ್ತರ ವಿರುದ್ಧವೂ ಆರೋಪ
ರಾಹುಲ್ ಗಾಂಧಿ ಅವರ ಸುದ್ದಿಗೋಷ್ಠಿ ಹೊಸ ವಿಚಾರವನ್ನು ಹೇಳಿ ಚರ್ಚೆಗೆ ಕಾರಣವಾಗುವಂತೆ ಮಾಡಿದ್ದಾರೆ. ಏಕೆಂದರೆ ಬಿಜೆಪಿ ಮುಖಂಡರು, ಕಾರ್ಯಕರ್ತರಿಗೆ ಎರಡೆರಡು ರಾಜ್ಯಗಳಲ್ಲಿ ವೋಟ್ ಕಾರ್ಡ್ ಸೃಷ್ಟಿಸಲಾಗಿದೆ. ಬಿಜೆಪಿ ನಾಯಕರ ಮನೆಯಲ್ಲಿ 6ಲಕ್ಷ ಮತದಾರ ಹೆಸರು ದೊರೆತಿದೆ ಎಂಬ ಆರೋಪಕೂಡ ಮಾಡಲಾಗಿದೆ.
ಇದಕ್ಕೆ ಉದಾಹರಣೆ ಎಂಬಂತೆ ಸುದ್ದಿಗೋಷ್ಠಿಯಲ್ಲಿ ಕೇರಳ ಬಿಜೆಪಿ ನಾಯಕನ ಹೇಳಿಕೆಯ ವಿಡಿಯೋ ತೋರಿಸಲಾಗಿದ್ದು, ಆ ವಿಡಿಯೋದಲ್ಲಿ ಯಾವ ಕ್ಷೇತ್ರದಲ್ಲಿ ಬಿಜೆಪಿ ಗೆಲ್ಲಬೇಕೋ ಆ ಕ್ಷೇತ್ರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮತದಾರರನ್ನು ಸೇರಿಸಲಾಗುವುದು. ಬೇಕಾದಲ್ಲಿ ಜಮ್ಮು ಕಾಶ್ಮೀರದಿಂದ ಜನರನ್ನು ಕರೆತರಲಾಗುವುದು ಎಂದಿರುವುದು.
ಈ ಮಾತಿನ ಕುರಿತು ತನಿಖೆ ಯಾರು ಮಾಡುತ್ತಾರೆ..? ಎಷ್ಟು ಮಂದಿ ಬಿಜೆಪಿ ಕಾರ್ಯಕರ್ತರ ಬಳಿ ಎರಡೆರಡು ವೋಟರ್ ಐಡಿ ಕಾರ್ಡ್ ಇದೆ.? ಇದು ನಿಜವೇ ಆದರೆ ಚುನಾವಣೆ ನಡೆಸುವುದು ಏಕೆ ಎಂಬ ಪ್ರಶ್ನೆ ಕೇಳಿಬಂದಿದೆ.
ರಾಹುಲ್ ಗಾಂಧಿ ಪದೇ ಪದೇ ಈ ಪ್ರಕ್ರಿಯೆ ಒಂದು ಸೆಂಟ್ರಲೈಸ್ಟ್ ಸಿಸ್ಟಮ್ ರೀತಿಯಲ್ಲಿ ಮಾಡಲಾಗುತ್ತಿದ್ದು, ಒಂದೇ ಕಡೆ ಚುನಾವಣೆ ಆಯೋಗ ಬಿಜೆಪಿಯೊಂದಿಗೆ ಕೈ ಜೊಡಿಸಿ ಬಿಜೆಪಿಯನ್ನು ಗೆಲ್ಲಿಸುತ್ತಿದೆ ಎಂಬುದಾಗಿದೆ.
ಹಿರಿಯ ಪತ್ರಕರ್ತ ಕಳವಳ
ರಾಷ್ಟ್ರೀಯವಾದಿಗಳಾಗಿರುವ ಬಿಜೆಪಿ ಕಾರ್ಯಕರ್ತರು ಎರಡೆರಡು ರಾಜ್ಯಗಳಿಗೆ ತೆರಳಿ ಮತದಾನ ಮಾಡಿದ್ದರೆ, ಅವರ ಬಳಿ ನಿಜವಾಗಿಯೂ ಎರಡು ರಾಜ್ಯಗಳ ವೋಟ್ ಕಾರ್ಡ್ ಇದ್ದರೆ ಇದು ಆತಂಕಕಾರಿಯಾಗಿದೆ ಎಂದು ಹಿರಿಯ ಪತ್ರಕರ್ತ ರವೀಶ್ ಕುಮಾರ್ ಕಳವಳ ವ್ಯಕ್ತಪಡಿಸಿದ್ದಾರೆ.
ಬಿಹಾರದಲ್ಲಿ ಮತದಾನ
ಇಂದು ಬಿಹಾರದಲ್ಲಿ ಮೊದಲ ಹಂತದ ಮತದಾನ ನಡೆದಿದೆ. ಎರಡನೇ ಹಂತದ ಮತದಾನ ನವೆಂಬರ್ 11 ರಂದು ನಡೆಯಲಿದೆ. ಆದರೆ ನವೆಂಬರ್ 5 ರಂದು ರಾಹುಲ್ ಗಾಂಧಿ ಹರಿಯಾಣದಲ್ಲಿ ವೋಟ್ ಚೋರಿ ನಡೆದಿದೆ ಎಂದು ಸುದ್ದಿಗೋಷ್ಠಿ ನಡೆಸಿದ್ದಾರೆ.
ಅವರ ಆರೋಪ ಗಮನಿಸಿದರೆ ವಿರೋಧ ಪಕ್ಷಗಳು ಏನು ತಾನೇ ಮಾಡಲು ಸಾಧ್ಯ..? ಒಂದು ವೇಳೆ ವೋಟ್ ಚೋರಿ ನಿಜವೇ ಆದರೆ. ವಿರೋಧ ಪಕ್ಷಗಳು ಚುನಾವಣೆ ವೇಳೆ ಹಳ್ಳಿ ಹಳ್ಳಿ, ಗಲ್ಲಿ ಗಲ್ಲಿ ಸುತ್ತಿ ಮತ ಕೇಳಿದರೆ ಲಾಭವೇನು..?
ಸುದ್ದಿಗೋಷ್ಠಿಯ ವೇಳೆ ಟ್ರಾಲಿಯಲ್ಲಿ ಸಾವಿರಾರು ವೋಟರ್ ಲೀಸ್ಟ್ ತಂದ ರಾಹುಲ್ ಗಾಂಧಿ ಈ ದಾಖಲೆಗಳನ್ನು ತಿಂಗಳುಗಳ ಕಾಲ, ಪದೇ ಪದೇ ಎಲ್ಲಾ ರೀತಿಯಲ್ಲಿ ಪರಿಶೀಲನೆ ನಡೆಸಿದ ಬಳಿಕವೇ ಈ ಸುದ್ದಿಗೋಷ್ಠಿಯ ಕರೆಯಲಾಗಿದ್ದು, ಇದು ಶೇ.100 ರಷ್ಟು ವಾಸ್ತವ ಎಂದರು.
ತನಿಖೆ ಅಗತ್ಯ
ಇಷ್ಟು ದೊಡ್ಡ ಮಟ್ಟದ ಆರೋಪಕ್ಕೆ ಉತ್ತರ ನೀಡಲಾಗದಿದ್ದರೆ ಚುನಾವಣೆ ಆಯುಕ್ತರು ರಾಜೀನಾಮೆ ನೀಡುವುದು ಸೂಕ್ತ. ರಾಜೀನಾಮೆ ನೀಡಿ ತನಿಖೆಯನ್ನು ಎದುರಿಸಬೇಕಿದೆ. ಏಕೆಂದರೆ ಭಾರತದ ಚುನಾವಣೆ ಆಯೋಗದ ಇತಿಹಾಸದ ಬಗ್ಗೆ ಅರಿವಿರಬೇಕಿದೆ.
ಸ್ವಾತಂತ್ರ್ಯ ನಂತರ ಬಡ ರಾಷ್ಟ್ರವಾಗಿದ್ದ ಭಾರತ. ದೇಶದ ವಯಸ್ಕ ಪ್ರತಿಯೊಬ್ಬರನ್ನು ಮತದಾರರನ್ನಾಗಿ ಮಾಡುವ ದೊಡ್ಡ ಸಾಹಸಕ್ಕೆ ಕೈಹಾಕಿತು. ಆಗ ವಿದೇಶಗಳೆಲ್ಲ ಅಚ್ಚರಿಯಿಂದ ಗಮನಿಸಿದ್ದವು, ಭಾರತದಿಂದ ಇದು ಸಾಧ್ಯವೆ ಎಂದು ಅನುಮಾನಿಸಿದ್ದವು. ಆದರೆ ಭಾರತದ ಚುನಾವಣೆ ಆಯೋಗ ಅಸಂಭವ ಎನ್ನಲಾದ ಕೆಲಸವನ್ನು ಸಂಭವ ಎಂದು ಸಾರುವಲ್ಲಿ ಯಶಸ್ವಿಯಾಯಿತು.
ದೇಶದ ಅರ್ಹ ವಯಸ್ಕ ಪ್ರತಿಯೊಬ್ಬರಿಗೂ ಮತದಾನದ ಹಕ್ಕನ್ನು ನೀಡುವ ಮೂಲಕ ಪ್ರಜಾಪ್ರಭುತ್ವದ ಐತಿಹಾಸಿಕ ಗುರಿಯನ್ನು ಸಾಧಿಸಿತು. ಅಲ್ಲದೆ ಪ್ರಪಂಚಕ್ಕೆ ಭಾರತದ ಪ್ರಜಾಪ್ರಭುತ್ವದ ಶಕ್ತಿಯನ್ನು ತೋರಿಸಿತು.
ಇಂತಹ ಐತಿಹಾಸಿಕ ಸಾಹಸ ಮಾಡಿ ಯಶಸ್ವಿಯಾಗಿ ಮಾಡಿದ ಭಾರತದ ಮೊದಲ ಚುನಾವಣಾ ಆಯುಕ್ತರು ಸುಕುಮಾರ್ ಸೇನ್. ಆದರೆ ಪ್ರಸ್ತುತ ಮುಖ್ಯ ಚುನಾವಣೆ ಆಯುಕ್ತರ ಹೆಸರು ಜ್ಞಾನೇಶ್ ಕುಮಾರ್.
ವೋಟ್ ಚೋರಿ ಆರೋಪ ಹೊತ್ತು ನಿರ್ಗಮಿಸುವರೇ
ಈಗ ಭಾರತದ ಚುನಾವಣೆ ಆಯೋಗದ ಮೇಲೆ ಕೇಳಿ ಬಂದಿರುವ ಈ ರೀತಿಯ ಗಂಭೀರ ಆರೋಪಗಳನ್ನು ಹೊತ್ತು ಇತಿಹಾಸ ಪುಟಗಳಲ್ಲಿ ದಾಖಲಾಗಲು ಜ್ಞಾನೇಶ್ ಕುಮಾರ್ ಅವರು ಇಚ್ಚಿಸುವರೆ.? ವೋಟ್ ಚೋರಿ ಆರೋಪ ಹೊತ್ತು ಜ್ಞಾನೇಶ್ ಕುಮಾರ್ ಅಧಿಕಾರದಿಂದ ಕೆಳಗಿಳಿಯುವರೇ..? ಆಯೋಗ ಈ ರೀತಿಯ ಗಂಭೀರ ಆರೋಪಗಳನ್ನು ಸುಳ್ಳೆಂದು ಸಾಬೀತು ಮಾಡಲು ಕೈಗೊಳ್ಳಬಹುದಾದ ಕ್ರಮ ಏನು ಎಂಬ ಪ್ರಶ್ನೆ ಅನೇಕರಿಂದ ಕೇಳಿಬರುತ್ತಿದೆ.
ಕಾಂಗ್ರೆಸ್-ಬಿಜೆಪಿ ಮತಗಳ ಅಂತರ 20 ಸಾವಿರ
ರಾಹುಲ್ ಗಾಂಧಿ ಸುದ್ದಿಗೋಷ್ಠಿಯಲ್ಲಿ ಹೇಳಿದಂತೆ ಹರಿಯಾಣ ವಿಧಾನಸಭೆ ಚುನಾವಣೆ ಕಾಂಗ್ರೆಸ್ ಮತ್ತು ಬಿಜೆಪಿ ನಡುವಿನ ಮತಗಳ ಅಂತರ ಒಂದು ಲಕ್ಷ ಎಂಟು ಸಾವಿರ. 8 ಕ್ಷೇತ್ರಗಳಲ್ಲಿ ಬಿಜೆಪಿಗೆ ಕಾಂಗ್ರೆಸ್ ಗಿಂತ 20 ಸಾವಿರ ಹೆಚ್ಚು ಮತಗಳು ದೊರೆತಿವೆ. ಇದರಿಂದ ಬಿಜೆಪಿಗೆ ಗೆಲುವಾಗಿದೆ.
ಈ ವಿಧಾನಸಭೆ ಚುನಾವಣೆಯಲ್ಲಿ 3,50 ಸಾವಿರ ಮತಗಳನ್ನು ಕತ್ತರಿಸಲಾಗಿದೆ. ಆದರೆ ಈ ಮತದಾರರು ಈ ಮುಂಚೆ ನಡೆದ ಲೋಕಸಭೆ ಚುನಾವಣೆಯಲ್ಲಿ ಮತದಾನ ಮಾಡಿದ್ದವರಾಗಿದ್ದರಂತೆ.
ಹರಿಯಾಣದ ಎರಡು ಕೋಟಿ ಮತದಾರರಲ್ಲಿ 25 ಲಕ್ಷ ಮತದಾರರು ನಕಲಿ, 5 ಲಕ್ಷ 21 ಸಾವಿರ ಮತದಾರರು ಡೂಪ್ಲಿಕೇಟ್, 93 ಸಾವಿರ ವಿಳಾಸ ಇಲ್ಲದವರು, 19 ಲಕ್ಷ ಮತದಾರರು ಒಂದೇ ವಿಳಾಸದಲ್ಲಿ ಇರುವವರು. ಅಂದರೆ ಒಂದೇ ಮನೆಯ ವಿಳಾಸ ನೀಡಿ 66 ಮಂದಿ, 501ಮಂದಿ, 108 ಮಂದಿ ಎಂಬಂತೆ ಇದು ಹೇಗೆ ಸಾಧ್ಯ.? ಎಂಬ ಪ್ರಶ್ನೆ ರಾಹುಲ್ ಗಾಂಧಿ ಅವರದ್ದಾಗಿದೆ.
ಬ್ರೆಜಿಲ್ ಮಾಡೆಲ್ ಹೆಸರಲ್ಲಿ ನಕಲಿ ವೋಟರ್ ಐಡಿ
ಬ್ರೆಜಿಲ್ ದೇಶದ ಮಾಡೆಲ್ ಹೆಸರಲ್ಲಿ ನಕಲಿ ವೋಟರ್ ಐಡಿ ಕಾರ್ಡ್ ಮಾಡಲಾಗಿದೆ ಎಂದು ರಾಹುಲ್ ಗಾಂಧಿ ದಾಖಲೆ ನೀಡಿದರು. ಈಕೆ ಫೋಟೋ ಯಾವುದೇ ಬಿಎಲ್‌ಓ ಬಳಸಿಲ್ಲ. ಬದಲಿಗೆ ಚುನಾವಣೆ ಆಯೋಗದ ಡೆಟಾ ಬೇಸ್ ಮೂಲಕ ಸೇರಿಸಲಾಗಿದೆ. ಈಕೆಯ ಹೆಸರಲ್ಲಿ 10 ಬೂತ್ ಗಳಲ್ಲಿ ವೋಟರ್ ಲೀಸ್ಟ್ ಇದ್ದು 22 ಕಡೆಗಳಲ್ಲಿ ಮತದಾನ ನಡೆಸಲಾಗಿದೆ ಎಂದಿದ್ದಾರೆ.
ಎರಡು ಬೂತಲ್ಲಿ ಒಂದೇ ಮಹಿಳೆಯ 222 ಮತ..!
ಇದಲ್ಲದೆ ರಾಹುಲ್ ಗಾಂಧಿ ಮತ್ತೋರ್ವ ಮಹಿಳೆಯ ಉದಾಹರಣೆ ನೀಡಿದ್ದು, ಎರಡು ಬೂತ್ ಗಳ ಪಟ್ಟಿಯಲ್ಲಿ 223 ಕ್ಕೂ ಹೆಚ್ಚು ಕಡೆ ಒಂದೇ ಮಹಿಳೆಯ ಪೋಟೋ ಬಳಸಲಾಗಿದೆ. ಹೀಗೆ ಬರಲು ಹೇಗೆ ಸಾಧ್ಯ..? ಇದರಲ್ಲಿ ಹೆಸರುಗಳು ಬೇರೆಯಾದರು, ಫೋಟೋ ಮಾತ್ರ ಒಂದೇ ಮಹಿಳೆಯದ್ದಾಗಿದೆ.
ಈ ಕಾರಣಕ್ಕೆ ಸಿಸಿಟಿವಿ ದೃಶ್ಯಾವಳಿಗಳನ್ನು ನೀಡದೆ ಚುನಾವಣೆ ಆಯೋಗ ಡಿಲೀಟ್ ಮಾಡುತ್ತಿದೆ. ಹರಿಯಾಣದಲ್ಲಿ 22 ಲಕ್ಷ ವೋಟ್ ಚೋರಿ ನಡೆದಿದೆ ಎಂದು ರಾಹುಲ್ ಆರೋಪಿಸಿದ್ದಾರೆ.
ರಾಹುಲ್ ಗಾಂಧಿ ಹೇಳಿಕೆಯಂತೆ ಚುನಾವಣೆ ಆಯೋಗದ ಎಐ ತಂತ್ರಜ್ಞಾನ ಬಳಸಿ ಒಂದೇ ಪೋಟೋದಲ್ಲಿ ನಕಲಿ ಮತದಾರರನ್ನು ಸುಲಭವಾಗಿ ಪತ್ತೆ ಹಚ್ಚಬಹುದಾಗಿದೆ. ಆದರೆ ಚುನಾವಣೆ ಆಯೋಗ ಈ ಕೆಲಸ ಮಾಡುತ್ತಿಲ್ಲ ಎಂದರು.
ಸುದ್ದಿಗೋಷ್ಠಿಯ ವೇಳೆ ರಾಹುಲ್ ಗಾಂಧಿ ಹರಿಯಾಣ ಮತ್ತು ಬಿಹಾರ ಚುನಾವಣೆಯಲ್ಲಿ ಮತದಾನದ ಹಕ್ಕು ಕಳೆದುಕೊಂಡವರನ್ನು ವೇದಿಕೆಗೆ ಕರೆತಂದು ಮಾತನಾಡಿಸಿದರು.
ಸುಳ್ಳು ಹೇಳುದ್ರಾ ಜ್ಞಾನೇಶ್ ಕುಮಾರ್..?
ಅಲ್ಲದೆ ರಾಹುಲ್ ಗಾಂಧಿ ಮುಖ್ಯ ಚುನಾವಣೆ ಆಯುಕ್ತ ಜ್ಞಾನೇಶ್ ಕುಮಾರ್ ಈ ಮುಂಚೆ ಮಾಡಿದ್ದ ಸುದ್ದಿಗೋಷ್ಠಿಯ ಹೇಳಿಕೆಯನ್ನು ತೋರಿಸಿದರು. ಅದರಲ್ಲಿ ಜ್ಞಾನೇಶ್ ಕುಮಾರ್ ವೋಟರ್ ಐಡಿಯಲ್ಲಿ ಮನೆ ಸಂಖ್ಯೆ ಶೂನ್ಯ ಇರಲು ಕಾರಣ ಏನು ಎಂಬುದನ್ನು ತಿಳಿಸಿದ್ದರು. ಆದರೆ ರಾಹುಲ್ ಗಾಂಧಿ ಮುಖ್ಯ ಚುನಾವಣೆ ಆಯುಕ್ತರು ಸುಳ್ಳು ಹೇಳುತ್ತಿದ್ದಾರೆ. ಉಪಚುನಾವಣೆ ಆಯುಕ್ತರ ಪ್ರತಿಕ್ರಿಯೆ ನೋಡಿ ಎಂದರು.
ಸುದ್ದಿಗೋಷ್ಠಿಯಲ್ಲಿ ರಾಹುಲ್ ಗಾಂಧಿ ಆರೋಪಗಳ ಕುರಿತು ಸುಪ್ರೀಂಕೋರ್ಟ್ಗೆ ಹೋಗುವಿರಾ ಎಂದು ಪ್ರಶ್ನಿಸಲಾಯಿತು. ನಾವು ಇದನ್ನು ಕದ್ದುಮುಚ್ಚಿ ಆರೋಪ ಮಾಡುತ್ತಿಲ್ಲ. ಮಾಧ್ಯಮಗಳ ಮುಂದೆ ಸಾರ್ವಜನಿಕವಾಗಿ ಆರೋಪ ಮಾಡುತ್ತಿದ್ದೇವೆ, ಸುಪ್ರೀಂ ಕೋರ್ಟ್ ಇದನ್ನು ಗಮನಿಸುತ್ತಿದೆ ಎಂದರು.
ವೋಟ್ ಚೋರಿ ಕುರಿತಂತೆ ಈ ಮುಂಚೆ ರಾಹುಲ್ ಗಾಂಧಿ ನಡೆಸಿದ್ದ ಸುದ್ದಿಗೋಷ್ಠಿ ನಡೆಸಿದ್ದರು. ಆದರೆ ನವೆಂಬರ್ 5 ರಂದು ನಡೆಸಿದ ಸುದ್ದಿಗೋಷ್ಠಿ ತೀವ್ರ ಸ್ವರೂಪದ ಆರೋಪವನ್ನು ಒಳಗೊಂಡಿದೆ. ಈ ರೀತಿ ವೋಟರ್ ಲೀಸ್ಟ್ ರಚಿಸಲಾಗುತ್ತಿದ್ದರೆ, ಒಂದೇ ಫೋಟೋ ಹಲವು ಬಾರಿ ಬಳಸಿದ್ದರೆ, ಎಲ್ಲಿಯದೋ ಫೋಟೋ ಬಳಸಿ ವೋಟರ್ ಕಾರ್ಡ್ ಸೃಷ್ಟಿಸಿದ್ದರೆ ಚುನಾವಣೆ ಮಹತ್ವ ಉಳಿಯುವುದಾದರು ಏನು..?
ಮಹಾರಾಷ್ಟ್ರ, ಮಧ್ಯಪ್ರದೇಶ, ಹರಿಯಾಣದಂತೆ ಬಿಹಾರದಲ್ಲಿಯೂ ಇದೇ ರೀತಿ ಮಾಡಲಾಗುತ್ತಿದೆ ಎಂದು ಆರೋಪಿಸಿರುವ ರಾಹುಲ್ ಗಾಂಧಿ, ಇದನ್ನು ಪತ್ತೆ ಹಚ್ಚಲು ಅವಕಾಶ ಇಲ್ಲದಂತೆ ಚುನಾವಣೆಯ ಕೊನೆಯ ಕ್ಷಣದಲ್ಲಿ ಮತದಾರರ ಪಟ್ಟಿ ನೀಡುತ್ತಿದ್ದಾರೆ ಎಂದು ಆರೋಪಿಸಿದರು.
ಬಿಜೆಪಿ ತಿರುಗೇಟು
ರಾಹುಲ್ ಗಾಂಧಿ ಅವರು ಸುದ್ದಿಗೋಷ್ಠಿ ಬೆನ್ನಲ್ಲೇ ಬಿಜೆಪಿ ಕೂಡ ಸುದ್ದಿಗೋಷ್ಠಿ ನಡೆಸಿತು. ಆದರೆ ಕಳೆದ ಬಾರಿ ಉಂಟಾದ ಎಡವಟ್ಟಿನಿಂದ ಎಚ್ಚೆತ್ತು ಈ ಬಾರಿ ಸುದ್ದಿಗೋಷ್ಠಿಯಲ್ಲಿ ಅನುರಾಗ್ ಠಾಕೂರ್ ಬದಲಿಗೆ ಸಂಸದೀಯ ಸಚಿವ ಕಿರಣ್ ರೀಜೀಜೂ ಮಾತನಾಡಿದರು.
🚨 BREAKING NEWS
— Amock_ (@Amockx2022) November 5, 2025
BJP ministers are holding Press Conference and countering Rahul Gandhi for his allegations on #VoteChori in Haryana
But RaGa asked questions to ECI 😂
Everytime, it is BJP who gets more reactive than Gyanesh Kumar to respond. Why?
pic.twitter.com/FWWok1x7xD
ಆದರೆ ಅವರು ರಾಹುಲ್ ಗಾಂಧಿ ಅವರ ಆರೋಪಗಳಿಗೆ ಸೂಕ್ತ ಉತ್ತರ ನೀಡದೆ, ರಾಹುಲ್ ಗಾಂಧಿ ಎಲ್ಲಿಗೇ ಹೋಗುತ್ತಾರೆ, ಯಾವಾಗ ಹೋಗುತ್ತಾರೆ ಎಂದು ವಿವರಿಸಿದರು. ಈ ಮೂಲಕ ಅವರು ಸುದ್ದಿಗೋಷ್ಠಿ ನಡೆಸಿದ್ದು ಉತ್ತರ ನೀಡಲು ಅಲ್ಲದೆ ರಾಹುಲ್ ಗಾಂಧಿ ಅವರ ಆರೋಪ ಗಂಭೀರವಲ್ಲ ಎಂದಷ್ಟೇ ಹೇಳಿ ಮುಗಿಸುವುದಕ್ಕೆ ಎಂಬುದು ಸಾಬೀತಾಯಿತು.
ಆದರೆ ಒಂದು ರಾಜ್ಯದ ಚುನಾವಣೆಯಲ್ಲಿ 25 ಲಕ್ಷ ನಕಲಿ ಮತದಾರರು ಎಂಬುದು ಗಂಭೀರ ವಿಚಾರವಲ್ಲವೇ.? ವೋಟ್ ಚೋರಿ ಆರೋಪ ಗಂಭೀರವಲ್ಲವಾದರೆ ಕಿರಣ್ ರಿಜಿಜೂ ಅವರ ದೃಷ್ಟಿಯಲ್ಲಿ ಮತ್ಯಾವ ವಿಷಯ ಗಂಭೀರ ಎಂದು ಹಿರಿಯ ಪತ್ರಕರ್ತ ರವೀಶ್ ಕುಮಾರ್ ಪ್ರಶ್ನಿಸಿದ್ದಾರೆ.