ಚಿಕ್ಕಬಳ್ಳಾಪುರ; ಕೆರೆಯಲ್ಲಿ (Lake) ಮೀನು ಹಿಡಿಯುವ ವೇಳೆ (Fishing) ವಿದ್ಯುತ್ ಸ್ಪರ್ಶಿಸಿ ಮಹಿಳೆ ಸಾವನಪ್ಪಿರುವ ಘಟನೆ ಚೇಳೂರು ತಾಲ್ಲೂಕಿನ ದಿಗುವನೆಟ್ಟಕುಂಟಪಲ್ಲಿ ಗ್ರಾಮದ ಬಳಿ ನಡೆದಿದೆ.
ದಿಗುವನೆಟ್ಟಕುಂಟಪಲ್ಲಿ ಗ್ರಾಮದ ಅಶಾಬೀ (54 ವರ್ಷ) ಮೃತ ಮಹಿಳೆ ಎಂದು ಗುರುತಿಸಲಾಗಿದೆ.
ಪತಿ ಮಾಬುಸಾಬ್ ಜೊತೆ ಮೀನು ಹಿಡಿಯಲು ಹೋಗಿದ್ದ ವೇಳೆ ದುರ್ಘಟನೆ ಸಂಭವಿಸಿದೆ.
ಹಗಲಿನಲ್ಲಿ ಕೆರೆಯಲ್ಲಿ ಬಲೆ ಹಾಕಿ ರಾತ್ರಿ ವೇಳೆ ಮೀನುಗಳನ್ನ ಹಿಡಿಯಲು ಹೋಗಿದ್ದರಂತೆ, ತೆಪ್ಪದಲ್ಲಿ ಹೋಗಿದ್ದ ವೇಳೆ ಕೆರೆ ಒಳಗೆ ಇರುವ ವಿದ್ಯುತ್ ಕಂಬದಿಂದ ತುಂಡಾಗಿದ್ದ ತಂತಿ ತಗುಲಿ, ವಿದ್ಯುತ್ ಶಾಕ್ ಹೊಡೆದು ಕೆರೆಯಲ್ಲಿ ಬಿದ್ದು ಆಶಾಭಿ ಧಾರುಣವಾಗಿ ಸಾವನಪ್ಪಿದ್ದಾರೆ.
ಘಟನೆಯಲ್ಲಿ ಪತಿ ಮಾಬುಸಾಬ್ಗೂ ವಿದ್ಯುತ್ ಸ್ಪರ್ಶದಿಂದ ಗಾಯಗಳಾಗಿದೆ.
ಅಗ್ನಿಶಾಮಕ ದಳದ ಸಿಬ್ಬಂದಿ ನಿರಂತ ಕಾರ್ಯಾಚರಣೆ ನಡೆಸಿ ಶವ ಹೊರಕ್ಕೆ ತೆಗೆದಿದ್ದಾರೆ.
ಚೇಳೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.