ಬೆಂ.ಗ್ರಾ, ಜಿಲ್ಲೆ: ಫಿಜಿ ರಿಪಬ್ಲಿಕ್ ದೇಶದ (Republic of Fiji) ಅಧ್ಯಕ್ಷ (President) ನೈಯಿಕ್ವಮ ತವಕೆ ಕಲೊಟ್ ಲಲ ಬಲವು ಅವರು ಫಿಜಿ ದೇಶದ ಪ್ರಥಮ ಮಹಿಳೆ ಎಮಿಲಿ ವೈಸ್ ಲಲ ಬಲವು ಅವರೊಂದಿಗೆ ಬೆಂಗಳೂರಿನ ದೇವನಹಳ್ಳಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದರು.
ನವೆಂಬರ್ 9 ರಿಂದ ನವೆಂಬರ್ 24 ರವರಗೆ ಬೆಂಗಳೂರು ಹಾಗೂ ಚಿಕ್ಕಬಳ್ಳಾಪುರ ದಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ.
ಇವರನ್ನು ಚಿಕ್ಕಬಳ್ಳಾಪುರ ಎ.ಡಿ.ಸಿ ಭಾಸ್ಕರ್, ಬೆಂಗಳೂರಿನ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ಸರ್ಕಾರದ ಉಪ ಕಾರ್ಯದರ್ಶಿ ಅಭಿಜಿನ್ ಹಾಗೂ ಫಿಜಿ ಹೈಕಮಿಷನರ್ ನವದೆಹಲಿ ಅವರುಗಳು ಹೂಗುಚ್ಚ ನೀಡುವ ಮೂಲಕ ಆದರದಿಂದ ಸ್ವಾಗತಿಸಿದರು.
ಈ ಸಂದರ್ಭದಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ಅಧಿಕಾರಿಗಳು ಹಾಗೂ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು