ಕೆ.ಎಂ.ಸಂತೋಷ್, ಆರೂಢಿ: ಬಿಗ್ಬಾಸ್ (Bigg Boss) ಸೀಸನ್ 12 ರಿಯಾಲಿಟಿ ಶೋ ದಿನೇದಿನೇ ವೀಕ್ಷಕರ ಮನ ಗೆಲ್ಲುವಲ್ಲಿ ಯಶಸ್ವಿಯಾಗುತ್ತಿದೆ.
ಬಿಗ್ಬಾಸ್ 12ರಲ್ಲಿ ಗಿಲ್ಲಿ ನಟ ತಂಡ ಹಾಗೂ ಅಶ್ವಿನಿ ಗೌಡ ತಂಡ ಎಂದು ವಿಂಗಡನೆಯಾಗಿದ್ದು, ಗಿಲ್ಲಿ ನಟ ತಂಡ ಎಂದರೆ ಮನರಂಜನೆ, ಅಶ್ವಿನಿ ತಂಡ ಎಂದರೆ ಜಗಳ, ಕಿರಿಕ್ ಎಂಬುದು ವೀಕ್ಷಕರು ಬಹುತೇಕ ಅಭಿಪ್ರಾಯಕ್ಕೆ ಬಂದಿದ್ದಾರೆ.
ಗಿಲ್ಲಿ ನಟ ಸ್ಟಾಟರ್ಜಿಯಿಂದಾಗಿ ಅಶ್ವಿನಿ ಗೌಡ ತಂಡದಲ್ಲಿ ಅಲ್ಲೋಲ ಕಲ್ಲೋಲವೇ ನಡೆಯುತ್ತಿದೆ. ಇದು ಯಾವ ಮಟ್ಟಕ್ಕೆ ಎಂದರೆ ಇಡೀ ಬಿಗ್ ಬಾಸ್ ಶೋ ಗಿಲ್ಲಿ ನಟನ ಸ್ಟಾಟರ್ಜಿ ಅನ್ವಯವೇ ನಡೆಯುತ್ತಿದೆ ಎಂಬಂತೆ ಕಂಡು ಬರುತ್ತಿದೆ.
ಏಕೆಂದರೆ ರಕ್ಷಿತ ನಾಮಿನೇಷನ್ ತಂಡವಾದ ಅಶ್ವಿನಿ ಗೌಡ ತಂಡದಲ್ಲಿದ್ದರೂ, ಗಿಲ್ಲಿ ಸಲಹೆಯಂತೆ ಸ್ಟಾಟರ್ಜಿ ಆಟವನ್ನು ಆಡಿ, ಅಶ್ವಿನಿ ತಂಡವನ್ನು ಸಂಕಷ್ಟಕ್ಕೆ ಸಿಲುಕಿಸುತ್ತಿದ್ದು, ವೀಕ್ಷಕರಿಗೆ ಮನರಂಜನೆ ನೀಡುತ್ತಿದ್ದಾರೆ. ಇದರಿಂದ ಅಶ್ವಿನಿ ತಂಡದಲ್ಲಿ ಉಂಟಾಗುತ್ತಿರುವ ಜಡೆಗಳ ಜಗಳವನ್ನು ಸಂಭ್ರಮಿಸುತ್ತಿದ್ದಾರೆ.
ಇನ್ನೂ ಸಾಮಾಜಿಕ ಜಾಲತಾಣದಲ್ಲಿ ಗಿಲ್ಲಿ ನಟ ತಂಡದ ಪರ ಅನೇಕ ಅನೇಕ ಮೀಮ್ಸ್, ವಿಡಿಯೋಗಳು ಹೆಚ್ಚಾಗಿ ವೈರಲ್ ಆಗುತ್ತಿದ್ದು, ಗಿಲ್ಲಿ ನಟ ಕಾವ್ಯ ನಡುವಿನ ಒಡನಾಟ, ಗಿಲ್ಲಿ ನಟ – ರಘು ನಡುವಿನ ಟಾಮ್ ಜರಿ ಆಟ, ಗಿಲ್ಲಿ ನಟ – ರಕ್ಷಿತ ನಡುವಿನ ಅಣ್ಣಾ – ತಂಗಿ ಬಾಂಧ್ಯವ್ಯ, ಸೂರಜ್ ಸೇರಿದಂತೆ ತಂಡದ ಸದಸ್ಯರಿಗೆ ಗಿಲ್ಲಿ ನಟ ಹುರುಪು ನೀಡುವ ವಿಡಿಯೋಗಳು ಹೆಚ್ಚಾಗಿ ಗಮನ ಸೆಳೆಯುತ್ತಿವೆ.
ಗಿಲ್ಲಿ ನಟ ಮತ್ತು ಅಶ್ವಿನಿ ತಂಡಗಳಲ್ಲಿ ಪ್ರಸ್ತುತ ಗಿಲ್ಲಿ ನಟ ತಂಡ ಹೆಚ್ಚಾಗಿ ಜನರ ಬೆಂಬಲ ಪಡೆದಿದ್ದು, ಅಶ್ವಿನಿ ತಂಡವನ್ನು ವೀಕ್ಷಕರು ಸಾರಾ ಸಗಟಾಗಿ ನಿರ್ಲಕ್ಷಿಸುತ್ತಿದೆ.
ಈ ಕುರಿತಾಗಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಕೆಲ ವಿಡಿಯೋಗಳು ಹೀಗಿವೆ.