ದೊಡ್ಡಬಳ್ಳಾಪುರ: ನಗರದಿಂದ ಬೆಂಗಳೂರಿಗೆ ತೆರಳುವ ಪ್ರಯಾಣಿಕರು ಸಮಯಕ್ಕೆ ಸರಿಯಾಗಿ ಸಾರಿಗೆ ಬಸ್ (KSRTC) ದೊರಕದೆ ಪರದಾಟ ನಡೆಸುತ್ತಿರುವುದು ಪ್ರತಿ ನಿತ್ಯ ಸಾಮಾನ್ಯವಾಗಿದೆ.
ಇಂದು ಬೆಳಗ್ಗೆ ದೊಡ್ಡಬಳ್ಳಾಪುರ ನಗರದ KSRTC ಬಸ್ ನಿಲ್ದಾಣದಲ್ಲಿ ಬಸ್ಸಿಗಾಗಿ ಕಾದು ನಿಂತಿದ್ದ ವೇಳೆ ಬಂದ KSRTC ಬಸ್ಸಿನ ಚಾಲಕ ವೇಗವಾಗಿ ತಿರುವು ಪಡೆದಿರುವುದು ಪ್ರಯಾಣಿಕರನ್ನು ಗಾಬರಿಗೆ ಒಳಗಾಗುವಂತೆ ಮಾಡಿದೆ.
ಕರ್ನಾಟಕದ KSRTC ಬಸ್ ಇಡೀ ದೇಶದಲ್ಲಿಯೇ ಪ್ರಸಿದ್ಧಿ ಪಡೆದಿದೆ. ಕೆಎಸ್‌ಆರ್ಟಿಸಿ ಚಾಲಕರ ನೈಪುಣ್ಯತೆ ಅನೇಕ ಸಂದರ್ಭಗಳಲ್ಲಿ ಪ್ರಶಂಸೆಗೆ ಒಳಗಾಗಿದ್ದು, ಈ ಕುರಿತಾದ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತದೆ.
ಆದರೆ ಇಂದು ಬೆಳಗ್ಗೆ ನೂರಾರು ಪ್ರಯಾಣಿಕರು ಬಸ್ ನಿಲ್ದಾಣದಲ್ಲಿ ಕಾಯುತ್ತಿದ್ದ ಸ್ಥಳಕ್ಕೆ KSRTC ಬಸ್ ಚಾಲಕ ತಿರುವು ಪಡೆದಿರುವ ರೀತಿ ಆತಂಕ, ಆಶ್ಚರ್ಯ ಹಾಗೂ ಆಕ್ಷೇಪಕ್ಕೂ ಕಾರಣವಾಗಿದೆ.
ಈ ಕುರಿತಾದ ವಿಡಿಯೋವನ್ನು ಸ್ಥಳದಲ್ಲಿದ್ದ ಪ್ರಯಾಣಿಕನೋರ್ವ ಸೆರೆ ಹಿಡಿದಿದ್ದು, ಯಾರ್ ಗುರು.. ಆ ರೇಂಜಿಗೆ ತಿರುಗುಸ್ತಾವ್ನೇ..? ಯಾರಾದ್ರೂ ಚಕ್ರದ ಕೆಳಗೆ ಸಿಲುಕಿದರೆ ಗತಿ ಏನು ಎಂದಿರುವ ಆತಂಕಕಾರಿ ಮಾತುಗಳು ಗಮನ ಸೆಳೆದಿದೆ.