ಬೆಂ.ಗ್ರಾ.ಜಿಲ್ಲೆ; ಮಕ್ಕಳ ದಿನಾಚರಣೆ (Children’s Day) ಅಂಗವಾಗಿ ಜಿಲ್ಲೆಯ ಎಲ್ಲಾ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲೆ ಹಾಗೂ ಪದವಿ ಪೂರ್ವ ಕಾಲೇಜುಗಳಲ್ಲಿ ಪೋಷಕ (Parents) ಶಿಕ್ಷಕರ (Teachers) ಮಹಾ ಸಭೆಯನ್ನು ಆಯೋಜಿಸಲಾಗಿದೆ.
ನವೆಂಬರ್ 14 ಶುಕ್ರವಾರ ದಂದು ಬೆಳಿಗ್ಗೆ 10.00 ಗಂಟೆಯಿಂದ ಅಪರಾಹ್ನ 2.15 ರವರೆಗೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಕಾರ್ಯಕ್ರಮದಲ್ಲಿ ಪೋಷಕರಿಗೆ ಶಾಲೆಗಳಲ್ಲಿ ಸರ್ಕಾರದ ವತಿಯಿಂದ ನೀಡುತ್ತಿರುವ ಪ್ರೋತ್ಪಾಧಾಯಕ ಯೋಜನೆಗಳಾದ ಅ ಪಠ್ಯಪುಸ್ತಕ ಉಚಿತ ಸಮವಸ್ತ್ರ, ಉಚಿತ ವಿದ್ಯಾರ್ಥಿವೇತನ ಶುಲ್ಕ ವಿನಾಯಿತಿ ಹಾಗೂ ಮಧ್ಯಾಹ್ನ ಬಿಸಿಯೂಟದ ಬಗ್ಗೆ ಪೋಷಕರಿಗೆ ಮಾಹಿತಿ ನೀಡುವುದು.
ವಿದ್ಯಾರ್ಥಿಗಳ ಪಾಠಾಧಾರಿತ ಮೌಲ್ಯಮಾಪನದ (ಎಲ್.ಬಿ.ಎ) ವಿಶ್ಲೇಷಣೆ ಬಗ್ಗೆ, ವಿದ್ಯಾರ್ಥಿಗಳ ಆರೋಗ್ಯ ಪೋಷಣೆ, ಮತ್ತು ಕಲಿಕಾ ಪ್ರಗತಿಯಲ್ಲಿ ಪೋಷಕರ ಜವಾಬ್ದಾರಿ ಮತ್ತು ಭಾಗವಹಿಸುವಿಕೆ ಬಗ್ಗೆ ಅರಿವು ಮಾಡಿಸುವುದು ಮತ್ತು ವಿದ್ಯಾರ್ಥಿಗಳಲ್ಲಿ ಇರುವ ಪರೀಕ್ಷಾ ಭಯ ಆತಂಕ ನಿವಾರಣೆ ಹಾಗೂ ಮಾನಸಿಕ ಒತ್ತಡದ ಸಮಸ್ಯೆಗಳ ಬಗ್ಗೆ ಮಾಹಿತಿ ನೀಡುವುದು.
1098, 112 ಹಾಗೂ ಶಾಲೆಯಲ್ಲಿ ಸಲಹಾ ಪೆಟ್ಟಿಗೆ ಇವುಗಳ ಕುರಿತು ಶಾಲೆಗಳಲ್ಲಿ ರಚನೆಯಾಗಿರುವ ಮಕ್ಕಳ ರಕ್ಷಣಾ ಸಮಿತಿಯ ಬಗ್ಗೆ ಪೋಷಕರಲ್ಲಿ ಜಾಗೃತಿ ಉಂಟುಮಾಡುವುದು ಮುಂತಾದ ವಿಷಯಗಳ ಕುರಿತು ಪೋಷಕರಿಗೆ ಮಾಹಿತಿ ನೀಡಲಾಗುತ್ತದೆ ಹಾಗಾಗಿ ಪ್ರತಿಯೊಬ್ಬ ಪೋಷಕರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ಜಿಲ್ಲಾ ಯೋಜನಾ ಸಮನ್ವಯಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.