ದೊಡ್ಡಬಳ್ಳಾಪುರ; ವಿದ್ಯುತ್ ಸರಬರಾಜು ಸಂಬಂಧಿಸಿದಂತೆ ಬೆಸ್ಕಾಂ (BESCOM) ಗ್ರಾಹಕರ ಕುಂದು-ಕೊರತೆಗಳನ್ನು ನೇರವಾಗಿ ಕೇಳಿ ಪರಿಹರಿಸುವ ಉದ್ದೇಶದಿಂದ ಇಂದು (ನ.15) ದೊಡ್ಡಬಳ್ಳಾಪುರ ನಗರದ ಉಪವಿಭಾಗ ಕಚೇರಿಯಲ್ಲಿ ಗ್ರಾಹಕರ ಸಂವಾದ ಸಭೆ ಹಾಗೂ ಸುರಕ್ಷತಾ ದಿನ ಕಾರ್ಯಕ್ರಮ ಆಯೋಜಿಸಲಾಗಿದೆ.
ಬೆಸ್ಕಾಂ ಕಂಪನಿಯ ಆದೇಶದಂತೆ, ಗ್ರಾಹಕರು ತಮ್ಮ ಸಮಸ್ಯೆಗಳು, ನ್ಯೂನ್ಯತೆಗಳು ಹಾಗೂ ಸಲಹೆಗಳನ್ನು ಅಧಿಕಾರಿಗಳೊಂದಿಗೆ ಪರಸ್ಪರ ಚರ್ಚಿಸಿ ಸ್ನೇಹಪೂರ್ವಕ ಪರಿಹಾರ ಕಂಡುಕೊಳ್ಳಲು ಈ ಸಭೆಯನ್ನು ಏರ್ಪಡಿಸಲಾಗಿದೆ.
ಸಭೆ ಇಂದು ಮಧ್ಯಾಹ್ನ 3.00 ಗಂಟೆಗೆ, ಎ.ಪಿ.ಎಂ.ಸಿ ಮಾರುಕಟ್ಟೆ ಎದುರಿನ ದೊಡ್ಡಬಳ್ಳಾಪುರ ನಗರ ಉಪವಿಭಾಗ ಕಚೇರಿಯಲ್ಲಿ ನಡೆಯಲಿದೆ.
ನಗರ ಉಪವಿಭಾಗ ವ್ಯಾಪ್ತಿಯ O&M-1, O&M-2, ಬಾಶೆಟ್ಟಿಹಳ್ಳಿ ಮತ್ತು ಮೆಳೆಕೋಟೆ ಕ್ರಾಸ್ ಶಾಖೆಗಳ ವಿದ್ಯುತ್ ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಾಗಿ, ಸಮಸ್ಯೆ ಪರಿಹಾರಕ್ಕೆ ಮತ್ತು ಸುರಕ್ಷತೆ ಬಗ್ಗೆ ಪರಿಹಾರ ಕಂಡುಕೊಳ್ಳುಲು ಸಹಕರಿಸುವಂತೆ ಬೆಸ್ಕಾಂ ನಗರ ಉಪವಿಭಾಗದ ಬೆಸ್ಕಾಂ ಎಇಇ ವಿನಯ್ ಕುಮಾರ್ ಹೆಚ್.ಪಿ ಕೋರಿದ್ದಾರೆ.