ಬೆಂಗಳೂರು: ಬಿಗ್ ಬಾಸ್ (Bigg boss) ಸೀಸನ್ 12 ನಿನ್ನೆಯ (ಶನಿವಾರ) ವಾರದ ಕಥೆ ಕಿಚ್ಚ ಜೊತೆ ಎಪಿಸೋಡ್, ಸಾಮಾಜಿಕ ಜಾಲತಾಣದಲ್ಲಿ ಕಿಚ್ಚನೇ ಎಬ್ಬಿಸಿದ್ದು, ಉತ್ತಮ ನಿರೂಪಕ ಎಂದು ಹೆಸರು ಪಡೆದಿರುವ ಸುದೀಪ್ ವಿರುದ್ಧವೇ ವೀಕ್ಷಕರು ಕೆರಳಿದ್ದಾರೆ.
ಈ ಕುರಿತಾದ ಕೆಲ ವೀಕ್ಷಕರ ಅಭಿಪ್ರಾಯ ಹೀಗಿದೆ ನೋಡಿಕೊಂಡು ಬನ್ನಿ
ಏನ್ ಸುದೀಪ್ ಸರ್, ಇವತ್ತು ಪಿತ್ತ ನೆತ್ತಿಗೇರ್ತಾ ಹೋದ್ ಎಪಿಸೋಡ್ ಆ ರಕ್ಷಿತಾ ಗೇ ಕೆಟ್ಟದಾಗಿ ಅಂದ್ರು ಬೈದ್ರು ಅವಾಗ ನಿಮಗೆ ಪಿತ್ತ ನೆತ್ತಿಗೆ ಏರಿಲಿಲ್ವಾ ನೀವ್ಸಾರ್ ಬಕೆಟ್ ಹಿಡಿತಿರೋದು ಬಿಗ್ ಬಾಸ್ ಒಳಗಿರೋರಲ್ಲ ನ್ಯಾಯ ಎಲ್ಲರಿಗೂ ಒಂದೇ ಕೊಡಿ ಸರ್ ಮೊನ್ನೆ ಜಾನ್ವಿ ರಕ್ಷಿತ ಗೆ ಒಂದು ಟಾಸ್ಕಲ್ಲಿ ಮೆಜಾರಿಟಿ ಕೊಡಬೇಕಾದರೆ ಜಾನ್ವಿ ರಕ್ಷಿತೆಗೆ ನಾನು ಹೊಡೆದೇ ಹೋಗ್ತೀನಿ ಅಂತ ಹೇಳಿದ್ದು ಕೇಳಲೇ ಇಲ್ಲ ನೀವು.
ವಾರದ ಕಥೆ ಕಿಚ್ಚನ ಜೊತೆ ತುಂಬಾ ಕಳಪೆಯಾಗಿತ್ತು…..
ಕಂತ್ರಿ ಟೀಂ ಗೆ ಬೆಣ್ಣೆ ಸವರಿ ಮಾತಾಡ್ತಾರೆ
ಸೂರ್ಯ ವಂಶ ಟೀಮ್ ಗೆ ಬೇಕಾಬಿಟ್ಟಿ ಮಾತಾಡ್ತಾರೆ.
ಬಡವರ ಮಕ್ಕಳು ಒಂದು ಸಣ್ಣ ಪುಟ್ಟ ತಪ್ಪು ಮಾಡಿದರೂ ಅದನ್ನ ದೊಡ್ಡದು ಮಾಡಿ ಪಿತ್ತ ನೆತ್ತಿಗೆ ಏರಿಸ್ಕೋತಾರೆ
ಆದ್ರೆ ಶ್ರೀಮಂತರಿಗೆ ಬೆಣ್ಣೆ ಸವರಿ ಮಾತಾಡ್ತಾರೆ .
ಈ ವಾರ ಸುದೀಪ್ ತುಂಬಾ ಫೇಕ್ ಆಗಿ ಕಾಣಿಸ್ತಾರೆ…. ಇದನ್ನ ನಾನು ಖಂಡಿಸ್ತೀನಿ…
ಅಶ್ವಿನಿ,ಧ್ರುವ, ಜಾನ್ವಿ ಕಂಡ್ರೆ ತುಂಬಾ ಪ್ರೀತಿ ಸುದೀಪ್ ಅವರಿಗೆ ಯಾಕೋ ಗೊತ್ತಿಲ್ಲಾ…!!!
ಕಾಫಿ ಪೌಡರ್ ಎತ್ತಿಟ್ಟಿತ್ತು
ಕಳಪೆ ಬಗ್ಗೆ ಚರ್ಚಿಸಿದ್ದು
ಗೇಮ್ ಆಡೋವಾಗ ಮೋಸ ವಿಷಯಗೆ
ಚೇಂಜಿಂಗ್ ರೂಮ್ ಮಾತಾಡು ವಿಷಯಗೆ
ಕೊಟ್ಟಿರೋ ಚಪ್ಪಾಳೆ ಅಲ್ವಾ ಕಿಚ್ಚ ಸುದೀಪ್ ಅವ್ರೆ,, ಸುದೀಪ್ ಅವರು ಬಡವರ ಮನೆಯ ಮಕ್ಕಳು ಮುಂದೆ ಉಗ್ರಂ ಅವತಾರ ಆಗ್ತಾರೆ ಅಷ್ಟೇ.

ಇದು ವಾರದ ಕಥೆಯಲ್ಲ ,ವ್ಯಥೆ.
ಆ ಲೇಡಿ ಡಾನ್ ಅಶ್ವಿನಿಗೆ ಬಹುಶಃ ಹೆದರ್ತಾರೆ ಅನ್ಸುತ್ತೆ, ಅವರಿಗೆ ಗಟ್ಟಿಯಾಗಿ ಅವರ ತಪ್ಪನ್ನ ಹೇಳಲಿಲ್ಲ. ಅಥವಾ ಅವಳಿಗೇ ಟ್ರೋಫಿ ಅಂತ ಫಿಕ್ಸ್ ಆಗಿರಬಹುದು.
ಯಾರಿಗೂ ಈ ಎಪಿಸೋಡ್ ಇಷ್ಟ ಹಾಗಿಲ್ಲ ಇವರೆಲ್ಲ ಸಿನಿಮಾ ದಲ್ಲಿ ಇರೋ ಡೈಲಾಗ್ ತಂದು ಇಲ್ಲಿ us ಮಾಡ್ತಾರೆ ಕರ್ಮ ಈ ಸಲದ big ಬಾಸ್ ನೋಡೋದೇ ಗಿಲ್ಲಿ ಹಾಗೂ ರಕ್ಷಿತಾ ಗೋಸ್ಕರ bt ಅವರನ್ನು ಒರಗಡೆ ಕಳಿಸಿ ನೋಡ್ಲಿ ಇವರ ಅಂಗಡಿ ಮುಚ್ಚಿ ಹೋಗುತ್ತೆ.
ಸುದೀಪ್ ಸರ್ ಒಳ್ಳೆ ವೆಕ್ತಿ ನೇ, next week ಕಂಟೆಂಟ್ ಬೇಕು TRP ಗೋಸ್ಕರ,ಅದರ ಪ್ರಕಾರ ಮಾತಾಡ್ಬೇಕು ಅವರು,ಇಲ್ಲ ಅಂದ್ರೆ ನಮ್ ಜನ ಈ ಷೋ ನ ನೋಡೋದಿಲ್ಲ.
ಸರಿ ಮಾಡಿಲ್ಲ ಸುದೀಪ ಅಶ್ವಿನಿ ಗೆ ಹೆದರುತ್ತಾರೆ ಅನ್ನಿಸುತ್ತಿದೆ.
Buck gang leader waste bodigalla. ಜೊತೆ ಮಾತಾಡಲಿಕ್ಕೆ ಹೆದರುವ ಕಾರಣ ಏನು ಪಾಪದವರ ಮೇಲೆ ಗೂಬೆ ಕೂರಿಸುವ ಕೆಲಸ ಯಾಕೆ don’t worry Rakshitha shetty ಮತ್ತು ಗಿಲ್ಲಿ ನೀವು ನಮ್ಮ ಮನಸನ್ನು ಗೆದ್ದುಕೊಂಡು ಆಗಿದೆ ಇನ್ನೂ ಚೆನ್ನಾಗಿ ಆಡಿ All the best ವೋಟ್ ರಕ್ಷಿತಾ ಶೆಟ್ಟಿ and vote ಗಿಲ್ಲಿ.
ಸುದೀಪಣ್ಣ ಬೇಜಾರ್ ಮಾಡ್ಕೋಬೇಡಿ.. ನಿಮ್ಮ ಅಭಿಮಾನಿಯಾಗಿಯೇ ಹೇಳ್ತಿದ್ದೇವೆ… ಈ ಸಲ ನಿಮ್ಮ ಪಂಚಾಯತ್ 00000 💯
ಅಶ್ವಿನಿ ಅನ್ನೋ ಕ್ರಿಮಿ ಕೋಟ್ಯಾಧಿಪತಿ ಎದುರು ಕಿಚ್ಚ ಗಪ್ ಚುಪ್. ನಾಚಿಕೆ ಇದೆಯಾ ಇವರಿಗೆ. ಬಡವರ ಮಕ್ಕಳಾದ ರಕ್ಷಿತಾ, ಗಿಲ್ಲಿಗೆ ತುಂಬಾ ತುಂಬಾ ಕುಗ್ಗಿಸಿ, ಸೈಡ್ ಲೈನ್ ಮಾಡುದೇ ಇವರ ಉದ್ದೇಶ. ನಮಗೆ ಎಲ್ಲಾ ಗೊತ್ತು. Ok
ಸುದೀಪ್ ನ್ಯಾಯ ಹಾಸ್ಯಾಸ್ಪದ ಆಗಿದೆ.. ಯಾಕಿಷ್ಟು ಭಯ ಸುದೀಪ್.

ಅಶ್ವಿನಿ ಅವರಿಗೆ ಒಂದು ನ್ಯಾಯ ರಕ್ಷಿತಾಗೆ ಒಂದು ನ್ಯಾಯ.
ಸುದೀಪ್ ಅವರೇ ಒಬ್ಬರಿಗೊಂದ್ ನ್ಯಾಯ ಮಾಡಬೇಡ್ರಿ ಮಾಡಿದ್ರೆ ಎಲ್ಲರಿಗೂ ಒಂದೇ ನ್ಯಾಯ ಮಾಡಿ ಅಶ್ವಿನಿ ಗೌಡ ಅವಳ್ಯಾರು ಜಾನ್ವಿಯಂತೆ ಅವಳಿಗೆ ಉಸಿರೇ ಬರಲ್ಲ ನಿಮಗೆ ಅಪ್ಪ ಗಿಲ್ಲಿನೋ ಮತ್ತೆ ನಿಮಗೆ ಆ ಪಾಪುದ್ ಹುಡ್ಗಿ ರಕ್ಷಿತಾ ಏನ್ ಮಾಡಿದ್ಲು ಮಾತಾಡಬೇಕಾರೆ ಎಲ್ಲರಿಗೂ ಒಂದೇ ತರ ಮಾತಾಡ್ರಿ.
ಒಬ್ಬರಿಗೊಂದ್ ಒಬ್ರಿಗ್ ಒಂದ್ ಮಾಡೋದಿಕ್ಕೆ ಏನು ಶನಿವಾರ ಭಾನುವಾರ ನಿಮ್ಮ ಕಾಯ್ತಾ ಕೂತಿರ್ತೀವಲ್ಲ ನಿಮ್ಮ ವೇಷ ಭೂಷಣ ನೋಡಕಲ್ಲ ಯಾರ್ ಪರವಾಗಿಲ್ಲ ಮಾತಾಡ್ತೀರಾ ನ್ಯಾಯ ಎಲ್ಲಿದೆ ಅದು ನೋಡಕ್ ಕಾಯ್ತಾ ಇರ್ತೀವಿ.
ಅಶ್ವಿನಿ ಗೌಡಗಂತೂ ಒಂದು ಚೂರು ನೀವು ಮಾತೆ ಆಡೋದಿಲ್ಲ ಇದು ಯಾವ ಸೀಮೆ ನ್ಯಾಯರಿ ಈ ಸಲ ಅಂತ ಹೋಸ್ಟ್ ಬಿಗ್ ಬಾಸ್ ಅಭ್ಯರ್ಥಿಗಳು ಹಾಗೆ ಇದ್ದೀರಾ ನೀವು ಹಾಗೆ ಇದ್ದೀರಾ.
ಶನಿವಾರ ಭಾನುವಾರ ಬಂದ್ರೆ ಅವರಿಗೆಲ್ಲ ಬುದ್ಧಿ ಹೇಳ್ತೀರಾ ಅಂದ್ರೆ ನೀವು ಪರವಾಗಿಲ್ಲ ಅವರಿಗೆ ಬೈತಾಯಿರ್ತೀರಾ ನಿಮಗೆ 2 ತರ ನಗದರೆ ನಗು ಬಂದ್ರೆ ನೋಡೋ ವೀಕ್ಷಕರಿಗೆ ಹತ್ತುತರ ನಗ್ತಾ ಇರ್ತಾರೆ ದಿನ.
ಇವತ್ತಿನ ಎಪಿಸೋಡ್ ನೋಡಿದಾಗ….ಬಿಗ್ ಬಾಸ್ ಅಂದ್ರೆ ಇದೇ ಕಾರಣಕ್ಕೆ ಸುದೀಪ್ ಅವರು ಇಷ್ಟ ಆಗುವುದು.
ಈ ರೀತಿಯೂ ರುಬ್ಬ ಬಹುದು ಅಂತ….ಕಿಚ್ಚನ ನೋಡಿ ತಿಳಿಯಿತು.
ಯಾರಿಗೆ, ಯಾವ ಜಾಗಕ್ಕೆ ಮೆಣಸಿನ ಕಾಯಿ ಇಡಬೇಕೋ ಅವರಿಗೆ ಇಟ್ಟಿದ್ದಾರೆ. ಉರ್ಕೊಳ್ಳುವವರು ಉರ್ಕೊಳ್ಳಿ ಅಷ್ಟೇ.
ದಯವಿಟ್ಟು ನಿರೂಪಕನನ್ನು ಬದಲಾಯಿಸಿ. Golden star Ganesh or Ramesh ನಿರೂಪಣೆ ಮಾಡಿದ್ರೆ ಉತ್ತಮ. ಈ ಮನುಷ್ಯಂದು ಒಂದು ಕಣ್ಣಿಗೆ ಬೆಣ್ಣೆ ಇನ್ನೊಂದು ಕಣ್ಣಿಗೆ ಸುಣ್ಣ. ತಾರತಮ್ಯ ಮಾಡೋದು ಎದ್ದು ಕಾಣುತ್ತಿದೆ.
ಸುದೀಪ್ ಅಶ್ವಿನಿ ಗೌಡಳ ದೊಡ್ಡ ಬಕೇಟ್ ಅಂತ ಪದೇ ಪದೇ ಪ್ರೂವ್ ಆಗ್ತಾ ಇದೆ.
ಎಲ್ಲರೂ ಒಂದೇ ಅಂತ ಹೇಳುವ ಸುದೀಪ್ ಸಾರ್ ನಿವ್ಯಾಕೆ ಇತರ ಅದಿರಿ ಸಾರ್.
ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಬೇಡ sir ನಿಮ್ ಮೇಲೆ ತುoಬಾ ಗೌರವ ಇದೆ ಕಲ್ಕೋಬೇಡಿ sir pllize.
ಸುದೀಪ್ ಎನ್ ಈ ಪಂಚಾಯ್ತಿ…ಜನ ನಿನ್ನ ರುಬ್ಬುತ ಇದರಾಲ …ಸರಿಯಾಗಿ ನ್ಯಾಯವಾಗಿ ಪಂಚಾಯ್ತಿ ಮಾಡು .ಅಶ್ವಿನಿ,ಜಾನ್ನಾಹವಿ,ರೀಷ ಗು ಇದೆ ಥರ ಪಂಚಾಯ್ತಿ ಮಾಡಿದ್ದ…
ಸುದೀಪ್ ಸರ್ ನಿಮಗೆ ಗಿಲ್ಲಿ ಮತ್ತು ರಕ್ಷಿತಾ ನಾ ನೋಡುವಾಗ ಪಿತ್ತ ನೆತ್ತಿಗೆ ಏರಿದರೆ ಇನ್ ಮೇಲೆ ಬರುವಾಗ ಒಂದು ಗ್ಲಾಸ್ ನಿಂಬೆ ಹಣ್ಣಿನ ಜ್ಯೂಸ್ ಕುಡಿದು ಬನ್ನಿ ಪಿತ್ತ ಇಳಿಯುತ್ತೆ
ಯಾರಿಗೆ ಹೇಗೆ ಬೇಕು ಹಾಗೇ ಅರ್ಥ ಆಗುವಾಗೆ ಹೇಳಿದರೆ ಇನ್ನು ಸುಧಾರಿಸದಿದ್ದರೆ ಅವರ ಹಣೆಬರ.
ಈ ತರಹದ ಪಂಚಾಯ್ತಿ ಮಾಡಿ ನಿಮ್ಮ ಮರ್ಯಾದೆನ ನೀವೇ ಕಳೆದುಕೊಳ್ಳುತ್ತಿದ್ದೀರಿ….. ನಿಮ್ಮ ಮೇಲಿರುವ ಅಭಿಮಾನ ಕಡಿಮೆಯಾಗುತ್ತಿದೆ. ಮಾಡಲು ಆಗೋದಿಲ್ಲ ಅಂದಾದರೆ ಬಿಗ್ಬಾಸ್ . hosting ಬಿಟ್ಟು ಬಿಡಿ.
ಎಲ್ಲವೂ ಅವರವರ ಗ್ರಹಿಕೆ….ಈಗ ನೋಡುಗರು ಸಹ ಬಿಗ್ ಬಾಸ್ ನ ಬಾಗವಾದಿರಿ….ಒಳ ಹೋಗದೇ ಆಟದ ಬಾಗವಾಗಿದ್ದೀರಿ….ಅದೇ ಅವರಿಗೆ ಬೇಕಾಗಿರೋದು….weldone.
ನ್ಯಾಯ ಕೊಡುವವನು ದೇವರಿಗೆ ಸಮಾನ……ಸುದೀಪ್ ಸರ್… ತಪ್ಪು ಮಾಡಿದ್ದಾರೆ.
ನಾನು ಕಿಚ್ಚ ಸುದೀಪ್ ಅವರ ಅಭಿಮಾನಿಯಾಗಿ ಹೇಳ್ತಾ ಇದೀನಿ ಸುದೀಪ್ ಸರ್ ಹೇಳೋ ಹಾಗೆ ಮೈಕ್ರೋಸ್ಕೋಪ್ zoom ಆಕೊಂಡ್ ನೋಡ್ತೀನಿ ಅಂತಾರಲ್ವ ವಾರ ಪೂರ್ತಿ ಫುಲ್ ಎಪಿಸೋಡ್ ನೋಡ್ಕೊಂಡು ಪಂಚಾಯ್ತಿ ಮಾಡ್ತಾರ ಇಲ್ಲ Colors Kannada ಅವ್ರು ತೋರ್ಸೋ ಪ್ರೋಮೋ ನೋಡಿ ಪಂಚಾಯ್ತಿ ಮಾಡ್ತಾರ ಗೊತ್ತಾಗ್ಲಿಲ್ಲ ಇವತ್ತಿನ ಕಿಚ್ಚನ ಪಂಚಾಯ್ತಿ ನೋಡಿ.
ಇದು ಕಿಚ್ಚನ ಪಂಚಾಯಿತಿ ಅಲ್ಲ ಕಿಚ್ಚನ ಪುರಾಣ..ಇದನ್ನು ನೋಡದೆ ಮಲ್ಕೊಂಡ್ಬಿಟ್ಟಿದ್ರೆ ಒಳ್ಳೆ ನಿದ್ದೆನಾದ್ರೂ ಬರ್ತಿತ್ತು.. Full time waste.
ಗಿಲ್ಲಿ ಆತ್ಮಸ್ಟೈರ್ಯ ನೀವೇ ಕುಗ್ಗುಸ್ತಾ ಇದ್ದೀರಾ ಸುದೀಪ್ ಸರ್…. ಇವತ್ತು ನಿಮ್ ಮೇಲೆ ತುಂಬಾ ಬೇಜಾರಾಯ್ತು ಗಿಲ್ಲಿ ಮತ್ತೆ ರಕ್ಷಿತಾ ನಿಮ್ ಟಾರ್ಗೆಟ್ ಅಂತ ಗೊತಾಯ್ತು ಬಿಡಿ…
ಡಬ್ಬ ಪಂಚಾಯ್ತಿ ಆ ಚಿಕ್ಕ ಹುಡುಗಿ ಮೇಲೆ ದೊಡ್ಡವರು ಮಾತಾಡಿದ್ದು ಹೇಳೋದು ಬಿಟ್ಟು ಪಾಪ ಈ ಹುಡುಗಿ ಮೇಲೆ ಬ್ರಹ್ಮಸ್ತ್ರ.
ಎಲ್ಲಾ ವೀಕ್ಷಕರಿಗೂ ಇದೇ ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕಿಲ್ಲ…
ಕಳಪೆ ಕೊಡುವುದರ ಬಗ್ಗೆ ಅಶ್ವಿನಿ ಗುಂಪು ಚರ್ಚೆ ಮಾಡ್ತಾರೆ ಇದರ ಬಗ್ಗೆ ಮಾತಾಡ್ಬೇಕಿತ್ತು ಸುದೀಪ್ ಸರ್ …. ಅಶ್ವಿನಿ ರಕ್ಷಿತ ಬಗ್ಗೆ ತುಂಬಾ ಕೇವಲವಾಗಿ ಮಾತಾಡಿದ್ದಾರೆ ಅದರ ಬಗ್ಗೆ ಸುದೀಪ್ ಅವರು ಮಾತಾಡೋದೇ ಇಲ್ಲ….. ಹಾಲು ಕದ್ದು ಗಿಲ್ಲಿ ಮೇಲೆ ಹೇಳೋದು ಇದ್ರೂ ಬಗ್ಗೆನೂ ಮಾತಾಡಲ್ಲ. ಒಟ್ಟಿನಲ್ಲಿ ಕಿಚ್ಚನ ಪಂಚಾಯ್ತಿ ನ್ಯಾಯಸಮ್ಮತವಾಗಿಲ್ಲ.
ಕಿಚ್ಚ ಸುದೀಪ್ ವಿರುದ್ಧ ಬಿಗ್ ಬಾಸ್ ವೀಕ್ಷಕರ ಆಕ್ರೋಶವೇಕೇ..?
ಸಾಮಾಜಿಕ ಜಾಲತಾಣದಲ್ಲಿನ ಬಿಗ್ ಬಾಸ್ ವೀಕ್ಷಕರ ಅಭಿಪ್ರಾಯ, ಮೀಮ್ಸ್ ನೋಡುದ್ರಲ್ವಾ, ಈಗಾಗಲೇ ವಿಷಯ ಅರ್ಥ ಆಯ್ತು ಅನಿಸುತ್ತೆ. ನಿನ್ನೆಯ ಎಪಿಸೋಡ್ ನಲ್ಲಿ ಸುದೀಪ ಅವರ ನಿರೂಪಣೆ ವೈಖರಿ ವೀಕ್ಷಕರ ಆಕ್ರೋಶಕ್ಕೆ ಕಾರಣವಾಗಿದೆ.
ಅಶ್ವಿನಿ ಗೌಡ ತಪ್ಪು ಮಾಡಿದಾಗ ಸುದೀಪ್ ಅವರು ಆಡು ಮಾತಿನ ದಾಟಿಗೂ, ಗಿಲ್ಲಿ, ರಕ್ಷಿತ ಮಾಡಿದ್ದು ತಪ್ಪು ಎಂದು ಸುದೀಪ್ ಅವರ ಮಾತಿನ ದಾಟಿ ಕುರಿತು ಸುದೀಪ್ ಮಲತಾಯಿ ಧೋರಣೆ ಮಾಡುತ್ತಿದ್ದಾರೆ ಎಂಬುದು ನಿನ್ನೆ ನಡೆದ ಎಪಿಸೋಡ್ ನಿಂದ ವೀಕ್ಷಕರ ಆರೋಪ ಕೇಳಿಬಂದಿದೆ.
ಇನ್ನೂ ಕನ್ನಡ ಸಮರ್ಪಕವಾಗಿ ಮಾತನಾಡಲು ಬಾರದ ರಕ್ಷಿತ ಅವರ ಮಾತುಗಳನ್ನು ತುಂಡರಿಸಿ, ವೀರ ವೇಷದಿಂದ ಮಾತನಾಡಿದ ಸುದೀಪ್ ಅವರಿಗೆ ಕಳೆದ ವಾರ ಗಿಲ್ಲಿ ಮತ್ತು ರಕ್ಷಿತ ಆಟದಿಂದಲೇ ಇಡೀ ಬಿಗ್ ಬಾಸ್ ನಡೆದಿದ್ದು ಎಂಬುದು ಮರೆತು ಹೋಯಿತೆ ಎಂಬ ಪ್ರಶ್ನೆಗಳನ್ನು ವೀಕ್ಷಕರು ಕೇಳುತ್ತಿದ್ದಾರೆ.
ಇಂದು ಎಪಿಸೋಡ್ ಮುಂದುವರೆಯಲ್ಲಿದ್ದು, ಶನಿವಾರ ಸುದೀಪ್ ಅವರಿಗೆ ಆಗಿರುವ ಡ್ಯಾಮೇಜ್ ಕಂಟ್ರೋಲ್ ಮಾಡಲು ಬಿಗ್ ಬಾಸ್ ತಂಡ ಯಾವ ತಂತ್ರ ಹೆಣೆಯಲಿದೆ ಕಾದು ನೋಡಬೇಕಿದೆ.