ಕಲಬುರಗಿ: ನ್ಯಾಯಾಲಯದ ಮೆಟ್ಟಿಲೇರಿದ್ದ ಚಿತ್ತಾಪುರ ಆರ್‌ಎಸ್‌ಎಸ್ (RSS) ಪಥ ಸಂಚಲನ ಇಂದು (ಭಾನುವಾರ) ನಡೆಯಲಿದೆ.
ಚಿತ್ತಾಪುರ ಪಟ್ಟಣದ ಬಜಾಜ್ ಕಲ್ಯಾಣ ಮಂಟಪದಿಂದ ಆರಂಭವಾಗುವ ಈ ಪಥಸಂಚಲನದಲ್ಲಿ 300 ಗಣವೇಷ ಧಾರಿ ಸ್ವಯಂಸೇವಕರು ಹಾಗೂ 50 ಘೋಷ್ ವಾದಕರು ಸೇರಿದಂತೆ ಒಟ್ಟು 350 ಮಂದಿ ಪಾಲ್ಗೊಳ್ಳಲಿದ್ದಾರೆ.
ಪಥ ಸಂಚಲನವು ಬಸ್ ನಿಲ್ದಾಣ, ಅಂಬೇಡ್ಕರ್ ವೃತ್ತ, ಸರಕಾರಿ ಗ್ರಂಥಾಲಯ, ಬಸವ ಆಸ್ಪತ್ರೆ, ಕಾಶಿ ಗಲ್ಲಿ, ತಾಲೂಕು ಪಂಚಾಯತ್ ಕಚೇರಿ, ಸರಕಾರಿ ಪಿಯು ಕಾಲೇಜು ಮಾರ್ಗವಾಗಿ ಮರುಬಾರಿ ಬಜಾಜ್ ಮಂಟಪದಲ್ಲೇ ಸಭೆಯೊಂದಿಗೆ ಸಂಪನ್ನಗೊಳ್ಳಲಿದೆ.
ಭದ್ರತೆಗೆ 650 ಪೊಲೀಸರು, 60 ಸಿಸಿಟಿವಿ ಅಳವಡಿಸಲಾಗಿದೆ. (ಸಾಂದರ್ಭಿಕ ಚಿತ್ರ ಬಳಸಲಾಗಿದೆ)