ತಿರುವನಂತಪುರಂ: ಲಕ್ಷಾಂತರ ಜನರು ಭೇಟಿ ನೀಡುವ, ಇತಿಹಾಸ ಪ್ರಸಿದ್ಧ ಕೇರಳದ ಶಬರಿಮಲೆ ಅಯ್ಯಪ್ಪಸ್ವಾಮಿ (Sabarimala Ayyappa Swami ) ದೇಗುಲದ ದ್ವಾರಗಳು ಭಾನುವಾರ ಮತ್ತೆ ತೆರೆದಿದೆ.
ಸೋಮವಾರದಿಂದ ಭಕ್ತರ ಯಾತ್ರೆ ಆರಂಭವಾಗಲಿದೆ. ಜ.20ರವರೆಗೆ ಮುಂದುವರಿಯಲಿದೆ.
ಈ ಮಧ್ಯೆ ಕೇರಳದಲ್ಲಿ ಮೆದುಳು ಜ್ವರವಿರುವುದರಿಂದ ಪಂಪಾ ನದಿಯಲ್ಲಿ ಸ್ನಾನ ಮಾಡುವಾಗ ಮೂಗಿನೊಳಕ್ಕೆ ನೀರು ಹೋಗದಂತೆ ನೋಡಿಕೊಳ್ಳಿ ಎಂದು ಕೇರಳ ಸರಕಾರ ಸೂಚಿಸಿದೆ.