ದೊಡ್ಡಬಳ್ಳಾಪುರ: ಕಡೇ ಕಾರ್ತೀಕ ಸೋಮವಾರದ ಹಿನ್ನೆಲೆಯಲ್ಲಿ ತಾಲೂಕಿನ ಇತಿಹಾಸ ಪ್ರಸಿದ್ಧವಾದ, ಬಾಗಿಲಿಲ್ಲದ ದೇವಾಲಯವೆಂದೇ ಪ್ರಸಿದ್ಧ ಪಡೆದಿರುವ ತೋಪನಯ್ಯ ಸ್ವಾಮಿ ದೇವಾಲಯದಲ್ಲಿ (Topanayya Temple) ವಿಶೇಷ ಪೂಜೆ ನಡೆಸಲಾಗುತ್ತಿದೆ.
ಭಕ್ತರಹಳ್ಳಿ ಸಮೀಪದ ತೋಪನಯ್ಯ ಸ್ವಾಮಿ ದೇವಾಲಯ ಬಾಗಿಲು ಇಲ್ಲದ ದೇವಾಲಯವಾಗಿದ್ದು, ಪುರಾತನ ದೇವಾಯವಾಗಿದೆ.
ಇಂದು ಬೆಳಗ್ಗೆಯಿಂದಲೇ ದೇವಾಲಯದಲ್ಲಿ ವಿಶೇಷ ಅಲಂಕಾರ, ಪೂಜೆ ನಡೆಸಲಾಗುತ್ತಿದ್ದು, ನೂರಾರು ಭಕ್ತರು ದೇವರಿಗೆ ಪೂಜೆ ಸಲ್ಲಿಸುತ್ತಿದ್ದಾರೆ.
ಇಂದು ಸಂಜೆ ದೇವಾಲಯದ ಆವರಣದಲ್ಲಿ ಕಡೇ ಕಾರ್ತೀಕ ಸೋಮವಾರದ ಹಿನ್ನೆಲೆಯಲ್ಲಿ ದೀಪೋತ್ಸವ ಆಯೋಜಿಸಲಾಗಿದೆ.