ಕಲಬುರಗಿ: ಸಾಲ ಮತ್ತು ಬೆಳೆ ನಷ್ಟದಿಂದ ಮನನೊಂದ ರೈತ (Farmer) ವಿಷ ಸೇವಿಸಿ ಆತ್ಮಹತ್ಯೆ (Suicide) ಮಾಡಿಕೊಂಡಿರುವ ಘಟನೆ ಕಲಬುರಗಿ ಜಿಲ್ಲೆಯ ಕಾಳಗಿ ತಾಲೂಕಿನ ಕರಿಕಲ್ ತಾಂಡಾದಲ್ಲಿ ನಡೆದಿದೆ.
ಪ್ರಕಾಶ ಸೇವು ಜಾಧವ (57 ವರ್ಷ) ಆತ್ಮಹತ್ಯೆ ಮಾಡಿಕೊಂಡ ರೈತ ಎಂದು ಗುರುತಿಸಲಾಗಿದೆ.
ಎರಡು ಎಕರೆ ಜಮೀನು ಹೊಂದಿದ್ದ ಪ್ರಕಾಶ ಜಾಧವ ಬೇರೆಯವರ ಕಡತಿ (ಜಮೀನು ಗುತ್ತಿಗೆ) ಹಾಕಿ ವ್ಯವಸಾಯದಲ್ಲಿ ತೊಡಗಿದ್ದರಂತೆ. ಸುಮಾರು 10 ಲಕ್ಷಕ್ಕೂ ಅಧಿಕ ಖಾಸಗಿ ಸಾಲ ಮಾಡಿಕೊಂಡಿದ್ದರು ಎನ್ನಲಾಗಿದೆ. ಕಾಳಗಿ ಪಟ್ಟಣದ ರೈತ ಸೇವಾ ಸಹಕಾರ ಸಂಘದಲ್ಲಿ 25,000 ಸಾಲ ಮಾಡಿದ್ದರಂತೆ.
ಆದರೆ ಮಳೆಯಿಂದ ತೊಗರಿ ಬೆಳೆ ಸಂಪೂರ್ಣ ನಾಶ ಆಗಿದೆ. ಆದ್ದರಿಂದ ಬೆಳೆಕೈಗೆ ಬಾರದೆ ಸಾಲಭಾದೆ ತಾಳದೇ ಕ್ರಿಮಿನಾಶಕ ಸೇವಿಸಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.
ಈ ಸಂಬಂಧ ಕಾಳಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.