ಬೆಂ.ಗ್ರಾ.ಜಿಲ್ಲೆ: ತೋಟಗಾರಿಕೆ ಇಲಾಖೆ ವತಿಯಿಂದ ಕ್ಲಸ್ಟರ್ ಡೆವಲಪ್ ಮೆಂಟ್ ಪ್ರೋಗ್ರಾಂ (ಸಿ.ಡಿ.ಪಿ) ಎಂಬ ಯೋಜನೆಯನ್ನು ಅನುಷ್ಠಾನಗೊಳಿಸಿದೆ. ರೈತರಿಗೆ ಬೆಳೆಗಳನ್ನು ಬೆಳೆಯಲು ಮತ್ತು ಅವುಗಳನ್ನು ಮಾರಾಟ ಮಾಡಲು ಸಹಕರಿಸುವ ಇಂಪ್ಲಿಮೆಂಟಿಂಗ್ ಏಜೆನ್ಸಿ (Implementing Agencies) ಅವರು ಪ್ರಸ್ತಾವನೆ ಸಲ್ಲಿಸಬಹುದಾಗಿದೆ.
ಆಸಕ್ತಿಯುಳ್ಳ ಏಜೆನ್ಸಿ NHB ಜಾಲತಾಣದ ಮುಖಾಂತರ ಪ್ರಸ್ತಾವನೆಯನ್ನು ಸಲ್ಲಿಸಿ, ಅನುಮೋದನೆ ಪಡೆದು ಅನುಷ್ಟಾನ ಮಾಡಬೇಕು.
ಸಾಮಾನ್ಯವಾಗಿ ಬೆಳೆಯಬಹುದಾದ ಬೆಳೆಯನ್ನು ಕ್ಲಸ್ಟರ್ ರೂಪದಲ್ಲಿ ಒಗ್ಗೂಡಿಸಿ ಉತ್ಪಾದನೆ – ಸಂಸ್ಕರಣೆ – ಸಂಗ್ರಹಣೆ-ಮಾರುಕಟ್ಟೆ- ರಫ್ತು ಸರಪಳಿಯನ್ನು ಬಲಪಡಿಸುವುದು. ಈ ಕ್ಲಸ್ಟರ್ ಗಳಿಗೆ ಎನ್.ಹೆಚ್.ಬಿ ಯಿಂದ ಹಣಕಾಸು ನೆರವು ನೀಡಲಾಗುವುದು.
ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ತರಕಾರಿ ಬೆಳೆಗಳಾದ ಟೊಮ್ಯಾಟೋ, ಆಲೂಗಡ್ಡೆ, ಈರುಳ್ಳಿ, ಎಲೆಕೋಸು, ಹೂಕೋಸು, ಬೆಂಡೆಕಾಯಿ, ಬದನೆ, ದೊಣ್ಣೆ ಮೆಣಸಿನಕಾಯಿ, ಸೌತೆಕಾಯಿ, ಕುಂಬಳಜಾತಿ, ಕೊತ್ತಂಬರಿ, ನಿಂಬೆ, ಶುಂಠಿ, ಹಸಿಮೆಣಸಿನಕಾಯಿ, ಬೆಳ್ಳುಳ್ಳಿ, ಸ್ವಾಪ್, ತರಕಾರಿ, ಹಲಸು, ಹುರುಳಿ, ನುಗೆ. ಬೀಟ್ ರೋಟ್, ಟರ್ನಿಪ್, ಝುಕಿನಿ, ಕ್ಯಾರೆಟ್, ಮೂಲಂಗಿ, ಹಸಿ ಬಟಾಣಿ, ದಂಟು ಸೊಪ್ಪು, ಮೆಂತೆ, ಪಾಲಕ್ ಹಾಗೂ ಮುಂತಾದ), ಕ್ಲಸ್ಟರ್ ಅಭಿವೃದ್ಧಿ ಯೋಜನೆಯನ್ನು ಅನುಷ್ಠಾನ ಮಾಡಲು ಅವಕಾಶವಿದ್ದು, ಅನುಷ್ಟಾನಮಾಡಲು ಇಂಪ್ಲಿಮೆಂಟಿಂಗ್ ಏಜೆನ್ಸಿಗಳು ಮುಂದೆ ಬಂದಲಿ ರೈತರಿಗೆ ಹೆಚ್ಚಿನ ಸಹಾಯಧನ ಮತ್ತು ನೆರವನ್ನು ಒದಗಿಸಿಕೊಡಬಹುದಾಗಿರುತ್ತದೆ.
ಹೆಚ್ಚಿನ ಮಾಹಿತಿಗಾಗಿ ತೋಟಗಾರಿಕೆ ಜಂಟಿ ನಿರ್ದೇಶಕರ ಕಚೇರಿ ಬೀರಸಂದ್ರ ಗ್ರಾಮ ಕುಂದಾಣ ಹೋಬಳಿ ದೇವನಹಳ್ಳಿ ತಾಲೂಕು ಸಂಪರ್ಕಿಸಬಹುದು ಎಂದು ತೋಟಗಾರಿಕೆ ಇಲಾಖೆಯ ಜಂಟಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.