ಕೆ.ಎಂ.ಸಂತೋಷ್, ಆರೂಢಿ (ದೊಡ್ಡಬಳ್ಳಾಪುರ): ರಾಜ್ಯ ಕಾಂಗ್ರೆಸ್‌ನಲ್ಲಿ ಸಿಎಂ ಸಿದ್ದರಾಮಯ್ಯ (Cmsiddaramaiah) ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ್ (D.K. Shivakumar) ನಡುವೆ ನಾಯಕತ್ವ ಬದಲಾವಣೆಯ ಕಿಡಿ ಹೊತ್ತಿದೆ ಎಂಬ ನ್ಯೂಸ್ ಚಾನಲ್‌ಗಳ ವರದಿ ಮುಗಿಲು ಮುಟ್ಟಿದೆ.
ಇನ್ನೂ ಕೆಲ ದಿನ ಪತ್ರಿಕೆಗಳ ವರದಿ ಅನ್ವಯ ಕಳೆದ ದಿನಗಳಿಂದ ನಾಲ್ಕು ಬೆಂಗಳೂರಿನಲ್ಲಿಯೇ ಇದ್ದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಕಿಚ್ಚು ಶಮನ ಮಾಡಲು ಸಾಧ್ಯವಾಗಿಲ್ಲ, ಇಂದು ಸಂಜೆ ರಾಹುಲ್ ಜತೆ ಚರ್ಚಿಸಿದ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಬುಲಾವ್ ಬರುವುದು ಖಚಿತವಾಗಿದೆ ಎಂದಿವೆ.
ಅಲ್ಲದೆ ರಾಹುಲ್ ಗಾಂಧಿ ಅವರ ಸೂಚನೆಯಂತೆ ಬೆಂಗಳೂರಿನಲ್ಲಿಯೇ ಎಲ್ಲವನ್ನೂ ಇತ್ಯರ್ಥಪಡಿಸಲು ಮಲ್ಲಿಕಾರ್ಜುನ ಖರ್ಗೆ ಅವರು ಪ್ರಯತ್ನಿಸಿದ್ದು, ಸಾಧ್ಯವಾಗಿಲ್ಲವಂತೆ. ಆದ್ದರಿಂದ ರಾಜ್ಯದ ಬೆಳವಣಿಗೆ ಬಗ್ಗೆ ರಾಹುಲ್‌ಗೆ ವರದಿ ಸಲ್ಲಿಸಲು ತೀರ್ಮಾನಿಸಿದ್ದಾರಂತೆ.
ಮಂಗಳವಾರ ಸಂಜೆ ವೇಳೆಗೆ ರಾಹುಲ್ ಗಾಂಧಿ ಹಾಗೂ ಮಲ್ಲಿಕಾರ್ಜುನ ಖರ್ಗೆ ಅವರು ಕರ್ನಾಟಕ ನಾಯಕತ್ವ ಬದಲಾವಣೆಗೆ ಸಂಬಂಧಿಸಿದಂತೆ ಸಭೆ ನಡೆಸುವ ಸಾಧ್ಯತೆಯಿದೆಯಂತೆ.
ಈ ಸಭೆಯ ಬಳಿಕ ವಾರಾಂತ್ಯದೊಳಗೆ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್‌ರನ್ನು ದೆಹಲಿಗೆ ಕರೆಸಿ ಕೊಂಡು ಇಬ್ಬರ ನಡುವೆ ಉದ್ಭವಿಸಿರುವ ನಾಯಕತ್ವ ಗೊಂದಲಕ್ಕೆ ಪರಿಹಾರ ಕಂಡುಕೊಳ್ಳುವ ಸಾಧ್ಯತೆಯಿದೆ. ಆದರೆ ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯುವ ಈ ಸಭೆಯಲ್ಲಿ ಸಂಕ್ರಾಂತಿ ವೇಳೆಗೆ ‘ಸಂ’ ಕ್ರಾಂತಿಯೋ ಅಥವಾ ಸದ್ಯಕ್ಕೆ ಯಾವುದೇ ಬದಲಾವಣೆ ಬೇಡ ಎನ್ನುವ ಸಂದೇಶ ನೀಡುವರೋ ಎನ್ನುವ ಕುತೂಹಲ ಇದೀಗ ರಾಜ್ಯ ನಾಯಕರಲ್ಲಿದೆಯಂತೆ.
ಈ ಹಿಂದೆ ರಾಹುಲ್ ಗಾಂಧಿ ಅವರು ವಿದೇಶಿ ಪ್ರವಾಸ ಕೈಗೊಂಡಿದ್ದಾರೆ ಎಂದು ಹೇಳಲಾಗಿತ್ತು. ಆದರೆ ಸೋಮವಾರ ಬೆಳಗ್ಗೆ ಕಾಂಗ್ರೆಸ್ ಹಿರಿಯ ನಾಯಕ ಬಿ.ಕೆ. ಹರಿಪ್ರಸಾದ್ ರಾಹುಲ್ ಗಾಂಧಿ ಅವರನ್ನು ಭೇಟಿಯಾಗಿ ಚರ್ಚೆ ನಡೆಸುವ ಮೂಲಕ ರಾಹುಲ್ ವಿದೇಶದಿಂದ ವಾಪಸಾಗಿದ್ದಾರೆ ಎನ್ನುವುದು ಖಾತ್ರಿಯಾಯಿತು. ಆದರೆ ಮತ್ತೊಂದು ಮೂಲಗಳ ಪ್ರಕಾರ ರಾಹುಲ್ ಅವರು ವಿದೇಶ ಪ್ರವಾಸವನ್ನೇ ಕೈಗೊಂಡಿರಲಿಲ್ಲ ಎನ್ನಲಾಗಿದೆ.
ಗೊಂದಲದ ಹೊರತಾಗಿ ರಾಹುಲ್ ದೆಹಲಿಯಲ್ಲಿರುವುದು ಖಚಿತವಾಗುತ್ತಿದ್ದಂತೆ, ಭೇಟಿಗೆ ರಾಜ್ಯ ನಾಯಕರು ಮತ್ತೆ ತಮ್ಮ ಪ್ರಯತ್ನ ಮುಂದುವರಿಸಿದ್ದಾರೆ. ಆದರೆ ಈವರೆಗೆ ಹರಿಪ್ರಸಾದ್ ಹೊರತುಪಡಿಸಿ, ಇನ್ಯಾರಿಗೂ ಅವಕಾಶ ಸಿಕ್ಕಿಲ್ಲ ಎಂದು ತಿಳಿದುಬಂದಿದೆ ಎಂದು ವರದಿಯಾಗಿದೆ.
ಬಣಗಳ ಕಿತ್ತಾಟ
ಇನ್ನೂ ಸಾಮಾಜಿಕ ಜಾಲತಾಣದಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಬೆಂಬಲಿಗರ ಕಿತ್ತಾಟ ಜೋರಾಗಿಯೇ ನಡೆಯುತ್ತಿದೆ.
ಪಕ್ಷಕ್ಕೆ ಬಂದ ತಕ್ಷಣ ಮುಖ್ಯಮಂತ್ರಿ ಆಗಿದ್ದಲ್ಲ,
— Radha Avinash (@RadhaAvinash1) November 25, 2025
ಕಷ್ಟ ಪಟ್ಟು ಪಕ್ಷವನ್ನು ಅಧಿಕಾರಕ್ಕೆ ತಂದು ಮುಖ್ಯಮಂತ್ರಿ ಆದದ್ದು
ನಿಂತು ಜನರನ್ನ ಮನವೊಲಿಸಿ ಪಕ್ಷಕ್ಕೆ ಮತ ಹಾಕಿಸಬೇಕು…
ಹೀಗೆ ಜನರ ಬಳಿ ಹೋಗಿ ಅವರ ಮನವೊಲಿಸಿ ಮತ ಹಾಕಿಸಿರುವ ಲಕ್ಷಾಂತರ ಕಾರ್ಯಕರ್ತರು ಈ ಪಕ್ಷಕ್ಕೆ ಬಾವುಟ ಹಿಡಿಯದೆ ದುಡಿದಿದ್ದಾರೆ…@RahulGandhi @siddaramaiah pic.twitter.com/eJgBO0cQZV
ಸಿಎಂ ಸಿದ್ದರಾಮಯ್ಯ ಮಾಸ್ ಲೀಡರ್ ಅವರಿಂದಲೇ ಕಾಂಗ್ರೆಸ್ ಅಧಿಕಾರದಲ್ಲಿ ಉಳಿಯಲು ಸಾಧ್ಯ, ಡಿ.ಕೆ. ಶಿವಕುಮಾರ್ ಅವರು ಬಿಜೆಪಿಯ ಪ್ರಪೋಗಂಡ.
BJP's primary objective in Karnataka is clear — to dethrone Siddaramaiah by using DK Shivakumar as a political tool.
— Gururaj Anjan (@Anjan94150697) November 25, 2025
📌 The reason is simple: the BJP lacks a leader with the stature, mass appeal, and political aura that Siddaramaiah commands across the state.
DK Shivakumar's… pic.twitter.com/wiX6vm1f0w
ಸಿಎಂ ಸ್ಥಾನದಿಂದ ಸಿದ್ದರಾಮಯ್ಯ ಅವರನ್ನು ಕೆಳಗಿಳಿಸಿ, ಡಿ.ಕೆ. ಶಿವಕುಮಾರ್ ಅವರನ್ನು ಅಧಿಕಾರಕ್ಕೆ ತಂದು ಸುಲಭವಾಗಿ ಅಧಿಕಾರಕ್ಕೆ ಬರುವ ಉದ್ದೇಶ ಬಿಜೆಪಿ ವರಿಷ್ಠರದ್ದು ಎನ್ನುತ್ತಿದ್ದಾರೆ.
Some Congressis have really gone mad.
— Dr Nimo Yadav 2.0 (@DrNimoYadav) November 24, 2025
When Congress is at its all-time low, they are pushing for a CM change in Karnataka.
Siddaramaiah is a leader of the masses, he is loved by both Kannadigas and non-Kannadigas.
He shaped Karnataka into a model of development.
These voices… pic.twitter.com/vdYwOfyxJb
ಮತ್ತೊಂದೆಡೆ ಡಿ.ಕೆ. ಶಿವಕುಮಾರ್ ಬೆಂಬಲಿಗರು, ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವಲ್ಲಿ ಡಿ.ಕೆ. ಶಿವಕುಮಾರ್ ಪಾತ್ರ ಅಪಾರವಾಗಿದೆ. ದೇಶದಲ್ಲಿ ಕಾಂಗ್ರೆಸ್ ಮೂಲೆ ಗುಂಪಾದರೂ, ಕರ್ನಾಟಕ ಮತ್ತು ತೆಲಂಗಾಣದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಡಿ.ಕೆ.ಶಿವಕುಮಾರ್ ಪ್ರಮುಖ ಕಾರಣ.
In 2019, DK Shivakumar was jailed for 50 days & was even denied bail to perform rituals for his dead father
— Ankit Mayank (@mr_mayank) November 25, 2025
Later he came out of jail, took over as Karnataka PCC Chief, worked 24×7 & ensured humiliating defeat for BJP 🔥
This man is a true lionheart, his loyalty shouldn’t be… pic.twitter.com/29eBzJNhZd
ಸಿಎಂ ಆಗಿರುವ ಸಿದ್ದರಾಮಯ್ಯ ಕಳೆದ ವಿಧಾನಸಭೆ ಚುನಾವಣೆ ಬಹುತೇಕ ಅವರ ಕ್ಷೇತ್ರದ ಬಗ್ಗೆ ಗಮನಹರಿಸಿದರೆ, ಡಿ.ಕೆ. ಶಿವಕುಮಾರ್ ರಾಜ್ಯಾದ್ಯಂತ ಓಡಾಡಿ ತನು, ಮನ, ಧನವನ್ನು ಅರ್ಪಿಸಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತಂದಿದ್ದಾರೆ.
ವರಿಷ್ಠರು ಈ ಮುಂಚೆ ನೀಡಿದ ಮಾತಿನಂತೆ ಸಿದ್ದರಾಮಯ್ಯ ಅವರು ಡಿ.ಕೆ. ಶಿವಕುಮಾರ್ ಅವರಿಗೆ ಅಧಿಕಾರ ಬಿಟ್ಟುಕೊಡಬೇಕು ಎನ್ನುತ್ತಿದ್ದಾರೆ.
ಇದರ ಬೆನ್ನಲ್ಲೇ ಇಂದು ದೊಡ್ಡಬಳ್ಳಾಪುರ ತಾಲೂಕಿನ ಘಾಟಿ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಡಿ.ಕೆ. ಶಿವಕುಮಾರ್ ಸಿಎಂ ಆಗಲೆಂದು ಅವರ ಅಭಿಮಾನಿಗಳು 1001 ಈಡುಗಾಯಿ ಹೊಡೆದಿದ್ದಾರೆ.
ಇನ್ನೂ ಕಾಂಗ್ರೆಸ್ ನಲ್ಲಿ ನಡೆಯುತ್ತಿರುವ ಬಣ ಬಡಿದಾಟದ ಕುರಿತು ಅನೇಕ ಕಾಂಗ್ರೆಸ್ ಮುಖಂಡರು ಬೇಸರ ವ್ಯಕ್ತಪಡಿಸಿದ್ದು, ಕರ್ನಾಟಕ ಕಾಂಗ್ರೆಸ್ ಪವರ್ ಶೇರಿಂಗ್ ಬಣಬಡಿದಾಟ ರಾಷ್ಟ್ರ ಮಟ್ಟದಲ್ಲಿ ಸುದ್ದಿಯಾಗುತ್ತಿದೆ.
ನೋಡ್ರಪ್ಪಾ ಕ್ರಾಂತಿ ಹೆಂಗೆ ಮಾಡ್ತಾರೆ ಅಂತ ಆವಾಗ್ಲೇ ಹೇಳಿದ್ದೆ https://t.co/NOz6ZXmscg
— Rohith (@rohitgowda1212) November 25, 2025
ಗೋದಿ ಮೀಡಿಯಾಗಳು ರಾಜ್ಯ ಬಿಜೆಪಿ ಅಧ್ಯಕ್ಷ ಆಯ್ಕೆ ಗೊಂದಲದ ಕುರಿತು ಪ್ರಶ್ನೆ ಮಾಡದೆ, ಕೇವಲ ಕಾಂಗ್ರೆಸ್ ಗೊಂದಲವನ್ನು ರಾಷ್ಟ್ರ ಮಟ್ಟದಲ್ಲಿ ಸುದ್ದಿಮಾಡಿ, ಪಕ್ಷಕ್ಕೆ ಬಹಳಷ್ಟು ಡ್ಯಾಮೇಜ್ ಮಾಡುತ್ತಿದ್ದು, ವರಿಷ್ಠರು ಹೆಚ್ಚೆತ್ತುಕೊಳ್ಳದಿದ್ದರೆ ಪಕ್ಷಕ್ಕೆ ಮತ್ತಷ್ಟು ಹಿನ್ನಡೆಯಾಗಿ, ಕಾರ್ಯಕರ್ತರ ಆತ್ಮ ಸ್ಥೈರ್ಯ ಕುಸಿಯುತ್ತದೆ ಎನ್ನುತ್ತಿದ್ದಾರೆ.
Entire Congress in Karnataka is united & we have only one mission — To repeat Congress Govt in 2028
— Ankit Mayank (@mr_mayank) November 24, 2025
— DK Shivakumar 🔥pic.twitter.com/mMzezCSf6Z