ದೊಡ್ಡಬಳ್ಳಾಪುರ: ತಾಲ್ಲೂಕು ವಕೀಲರ ಸಂಘದ (Doddaballapura Taluk Lawyers Association) 2025- 2027ನೇ ಅವಧಿಗೆ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಡಿ.ಎಂ.ರೇಣುಕಾಮೂರ್ತಿ, ಉಪಾಧ್ಯಕ್ಷರಾಗಿ ಕೆ.ಜಗನ್ನಾಥ್,ಪ್ರಧಾನ ಕಾರ್ಯದರ್ಶಿಯಾಗಿ ಬಿ.ಕೆ. ಕನಕರಾಜ್, ಖಜಾಂಚಿಯಾಗಿ ಆರ್.ಗೀತಾ, ಸಹಕಾರ್ಯದರ್ಶಿಯಾಗಿ ಜಿ.ಸಿ.ನರಸಿಂಹಮೂರ್ತಿ ಆಯ್ಕೆಯಾಗಿದ್ದಾರೆ.
ಸಾಮಾನ್ಯ ಕ್ಷೇತ್ರದಿಂದ ನಿರ್ದೇಶಕರಾಗಿ ಕೆ. ಅಕ್ಷಯ್ ಕುಮಾರ್, ಅರುಣ್ ಕುಮಾರ್, ವಿ.ಕೆ.ಅಶೋಕ್, ಟಿ.ಎಂ. ಮಹೇಂದ್ರಪ್ರತಾಪ್, ಎ.ಎಸ್.ಸಂದೇಶ್ ಕುಮಾರ್, ಸಿ.ರಾಜು.
ಮಹಿಳಾ ಮೀಸಲು ಕ್ಷೇತ್ರದಿಂದ ನಿರ್ದೇಶಕರಾಗಿ ಎಂ.ಎನ್.ಗಾಯಿತ್ರಿ, ಎನ್.ಸಿ.ನೇತ್ರಾವತಿ, ಟಿ.ಭಾರತಿ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಕ್ಷೇತ್ರದಿಂದ ಎಂ.ನರಸಿಂಹ ಆಯ್ಕೆಯಾಗಿದ್ದಾರೆ ಎಂದು ಚುನಾವಣ ಅಧಿಕಾರಿ ಎಲ್.ಸಂಜೀವಪ್ಪ ತಿಳಿಸಿದ್ದಾರೆ.