ಬೆಂಗಳೂರು: ಆಸ್ತಿ ನೋಂದಣಿಗೆ, ಒಪ್ಪಂದಗಳಿಗೆ ಛಾಪಾ ಕಾಗದದ ಬದಲಿಗೆ ರಾಜ್ಯ ಸರಕಾರ ಜಾರಿ ಮಾಡಿದ್ದ ಇ-ಸ್ಟ್ಯಾಂಪ್ (E-stamp) ಬಳಕೆ ಕೂಡ ಇನ್ನು ನಿಲ್ಲಲಿದೆ. ಇನ್ನು ಮುಂದೆ ಕಡ್ಡಾಯವಾಗಿ ಡಿಜಿಟಲ್ ಸ್ಟ್ಯಾಂಪ್ ಗಳನ್ನೇ (Digital stamp) ಬಳಕೆ ಮಾಡಲಾಗುತ್ತದೆ. ಹಂತಹಂತವಾಗಿ ಇ-ಸ್ಟ್ಯಾಂಪ್ ಬಳಕೆಯನ್ನು ನಿಲ್ಲಿಸಲಾಗುತ್ತದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ (Krishna Byre Gowda) ಹೇಳಿದ್ದಾರೆ.
ಛಾಪಾ ಕಾಗದ ನಕಲನ್ನು ತಡೆಯುವ ಸಲುವಾಗಿ ಇಲಾಖೆಯಿಂದ ಇ-ಛಾಪಾ ಕಾಗದ ಪರಿಚಯಿಸುತ್ತಿದ್ದು, ಆ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಅವರು ಮಾಹಿತಿ ನೀಡಿದರು.
ಇದುವರೆಗೆ ಪ್ರಾಯೋಗಿಕವಾಗಿ ಜಾರಿಯಲ್ಲಿದ್ದ ಡಿಜಿಟಲ್ ಸ್ಟ್ಯಾಂಪ್ ಮುಂದಿನ ದಿನದಲ್ಲಿ ಕಡ್ಡಾಯ ವಾಗಿ ಜಾರಿಗೆ ಬರಲಿದೆ.
ಇದಕ್ಕೆ ಬಲ ತುಂಬಲು ಡಿಜಿಟಲ್ ಸಹಿಗೆ ಕಾನೂನಿನ ಮಾನ್ಯತೆ ನೀಡಲಾಗಿದೆ. ಇದಕ್ಕಾಗಿ, ಕರ್ನಾಟಕ ಸ್ಟ್ಯಾಂಪು ತಿದ್ದುಪಡಿ ವಿಧೇಯಕ-2025 ಜಾರಿಯಾಗಿದೆ.
ಡಿಜಿಟಲ್ ಸ್ಟ್ಯಾಂಪ್ ಬಳಸಿ ಮಾಡಿದ ಒಪ್ಪಂದಗಳು ಕಳೆದುಹೋಗುವ ಭಯವಿಲ್ಲ ಎಂದು ಕೃಷ್ಣ ಬೈರೇಗೌಡ ಹೇಳಿದ್ದಾರೆ.