Raghu stabbed Gilli in the back..!

ಗಿಲ್ಲಿ ಬೆನ್ನಿಗೆ ಚಾಕು ಚುಚ್ಚಿದ ರಘು..! ಬಾಹುಬಲಿ ಕಟ್ಟಪ್ಪನ ನೆನೆದು ಅಪ್‌ಸೆಟ್ ಆದ ವೀಕ್ಷಕರು.. Video ನೋಡಿ

ಕೆ.ಎಂ.ಸಂತೋಷ್, ಆರೂಢಿ (ದೊಡ್ಡಬಳ್ಳಾಪುರ): ಪ್ರಸ್ತುತ ಆವೃತ್ತಿಯ ‘ಬಿಗ್ ಬಾಸ್ ಕನ್ನಡ ಸೀಸನ್ 12’ (Bigg Boss )50 ದಿನಗಳನ್ನು ಪೂರೈಸಿ, ಮನೆ ಮಂದಿ ಕೂತು ಎಂಜಾಯ್ ಮಾಡಬಹುದು ಎಂಬಂತೆ ವೀಕ್ಷಕರ ಗಮನ ಸೆಳೆದು ಮುಂದೆ ಸಾಗುತ್ತಿದೆ.

ಕಳೆದ ಭಾನುವಾರ ನಡೆದ ವಾರದ ಕಥೆ ಕಿಚ್ಚನ ಜೊತೆ ಎಪಿಸೋಡ್ ‌ನಲ್ಲಿ ನಾಮಿನೇಟ್ ಆಗಿದ್ದ ಗಿಲ್ಲಿ ನಟ ಸೇಫ್ ಎಂದು ನಿರೂಪಕ ಸುದೀಪ್ ಹೇಳುತ್ತಿದ್ದಂತೆ ವೀಕ್ಷಕರ ಸಂಭ್ರಮ ಮುಗಿಲು ಮುಟ್ಟಿತು.

ಅದು ಯಾವ ಮಟಕ್ಕೆ ಎಂದರೆ ಚಪ್ಪಾಳೆ, ಸಿಳ್ಳೆ, ಕೂಗಾಟ ಬಿಗ್ ಬಾಸ್ ಮನೆಯೊಳಗೆ ಇದ್ದ ಸ್ಪರ್ಧಿಗಳು ಅಚ್ಚರಿಗೆ ಒಳಗಾದರು.

ಬಿಗ್ ಬಾಸ್ ಸೀಸನ್ 12 ಕುಟುಂಬ ಸಮೇತ ವೀಕ್ಷಕರ ಹಿಡಿದಿಡುವಲ್ಲಿ ಯಶಸ್ವಿಯಾಗಿದೆ. ಗಿಲ್ಲಿಯ ನಟನ ಹಾಸ್ಯಪ್ರವೃತ್ತಿ ಮತ್ತು ತಾಳ್ಮೆ ಅಶ್ವಿನಿಯವರ ಘನತೆ, ರಘುವಿನ ಗಾಂಭೀರ್ಯ, ರಕ್ಷಿತಾಳ ಮುಗ್ಧತೆ, ರಾಶಿಕಾಳ ಸೌಂದರ್ಯ, ರಾಶಿಳ ಕೋಪ, ಧ್ರುವಂತ್‌ನ ಪೆದ್ದುತನ, ಕಾವ್ಯಾಳ ಬುದ್ಧಿವಂತಿಕೆ ಎಲ್ಲವೂ ವೀಕ್ಷಕರ ರಂಜಿಸುತ್ತಿದೆ.

ಗಿಲ್ಲಿ ಬೆನ್ನಿಗೆ ಚುಚ್ಚಿದ ರಘು..!

ಖ್ಯಾತ ಬಹುಭಾಷಾ ಸಿನಿಮಾ ‘ಬಾಹುಬಲಿ -1’ರಲ್ಲಿ ಬಾಹುಬಲಿ ಬೆನ್ನಿಗೆ ನಂಬಿಕಸ್ಥ ಕಟ್ಟಪ್ಪನೇ ಹಿಂದಿನಿಂದ ಕತ್ತಿಯಿಂದ ಚುಚ್ಚಿ ಕೊಂದ ಹಾಗೆ, ‘ಬಿಗ್ ಬಾಸ್’ ಮನೆಯಲ್ಲಿ ಗಿಲ್ಲಿ ನಟನ ಆತ್ಮೀಯ ಕುಚ್ಚಿಕ್ಕೂ ಬೆನ್ನಿಗೆ ರಘು ಚೂರಿ ಹಾಕಿದ್ದಾರೆ.

ಆ ಮೂಲಕ ಗಿಲ್ಲಿಯನ್ನ ರಘು ಅವರು ನಾಮಿನೇಟ್ ಮಾಡಿದ್ದಾರೆ. ಇದು ವೀಕ್ಷಕರಿಗೆ ಬೇಸರಕ್ಕೆ ಕಾರಣವಾಗಿದೆ.

ಜನ ಮೆಚ್ಚಿದ ಗಿಲ್ಲಿ- ರಘು ನಡುವಿನ ಟಾಮ್ ಅಂಡ್ ಜರಿ ಒಡನಾಟ

ಬಿಗ್ ಬಸ್ 12 ಸೀಸನ್ ಅಲ್ಲಿ ಗಿಲ್ಲಿ ನಟ ಹಾಗೂ ರಘು ಪರಿಚಿತರು. ‘ಬಿಗ್ ಬಾಸ್’ ಮನೆಗೆ ವೈಲ್ಡ್ ಕಾರ್ಡ್ ಎಂಟ್ರಿಕೊಟ್ಮೇಲೆ ರಘು ಜೊತೆ ಹೆಚ್ಚು ಆತ್ಮೀಯವಾಗಿದ್ದವರು ಗಿಲ್ಲಿ ನಟ.

ಸದಾ ಕಾಲ ರಘು ಅವರ ಅಕ್ಕ-ಪಕ್ಕನೇ ಗಿಲ್ಲಿ ನಟ ಕಾಣಿಸಿಕೊಳ್ಳುತ್ತಿದ್ದರು. ಎಷ್ಟೋ ಬಾರಿ ರಘು ತೊಡೆ ಮೇಲೆ ಗಿಲ್ಲಿ ಮಲಗಿರುತ್ತಿದ್ದರು. ಸಾಮಾಜಿಕ ಜಾಲತಾಣದಲ್ಲಿ ಇವರ ಒಡನಾಟ ‘ಟಾಮ್ ಅಂಡ್ ಜರಿ’, ‘ರಘು ಲಪ್ಸ್ ಗಿಲ್ಲಿ’ ವಿಡಿಯೋ ವೈರಲ್ ಆಗಿತ್ತು.

ಹೀಗಿರುವಾಗಲೇ ಅನೇಕ ಸ್ಪರ್ಧಿಗಳು ರಘು ವಿರುದ್ದ ನಾಮಿನೇಷನ್ಗೆ ಗಿಲ್ಲಿ ನಡುವಿನ ಒಡನಾಟ ಕಾರಣ ನೀಡಿರುವುದರಿಂದ ರಘು ಅವರು ಗಿಲ್ಲಿಯಿಂದ ಅಂತರ ಕಾಯ್ದುಕೊಳ್ಳುತ್ತಿದ್ದಾರೆ. ಇದು ಮುಂದುವರಿದು ಗಿಲ್ಲಿ ನಟ ಮೇಲೆ ರಘು ಏಕಾಏಕಿ ಮುನಿಸಿಕೊಂಡಿದ್ದಾರೆ. ಅಷ್ಟೇ ಅಲ್ಲ.. ಗಿಲ್ಲಿ ನಟ ಅವರನ್ನ ರಘು ನಾಮಿನೇಟ್ ಮಾಡಿದ್ದಾರೆ!

ಕಳೆದ ವಾರದ ಹಿಂದೆಯಷ್ಟೇ ‘ಬಿಗ್ ಬಾಸ್’ ಮನೆಯಲ್ಲಿ ‘ಬಾಹುಬಲಿ’ ಸಿನಿಮಾದ ಬಗ್ಗೆ ಗಿಲ್ಲಿ ಮಾತನಾಡಿದ್ದರು.

“50 ದಿನಗಳ ಬಳಿಕ ಅಶ್ವಿನಿ ಗೌಡ 2.0 ಆರಂಭವಾಗಲಿದೆ.. ಅಶ್ವಿನಿ ಮೇಡಂ ಜಾಗವನ್ನ ರೀಪ್ಲೇಸ್ ಮಾಡೋದು ರಕ್ಷಿತಾ. ಕಟ್ಟಪ್ಪ ರಘು. ಕಟ್ಟಪ್ಪನಿಗೇ ರಕ್ಷಿತಾ ನಾಮಿನೇಟ್ ಮಾಡಿ ಚಾಕು ಚುಚ್ಚಿಬಿಟ್ಟಳು. ಪಾರ್ಟ್ 2 ಸಿನಿಮಾ ಬಂದರೂ ಇನ್ನೂ ಸರಿಯಾಗಿ ಕಾರಣ ಕೊಟ್ಟಿಲ್ಲ” ಅಂತ ಗಿಲ್ಲಿ ನಟ ಕಿಚ್ಚಾಯಿಸಿದ್ದರು.

ಆದರೆ ನಿನ್ನೆ ಸಂಚಿಕೆಯಲ್ಲಿ, ‘ಬಿಗ್ ಬಾಸ್’ ಮನೆಯಲ್ಲಿ ಅಕ್ಷರಶಃ ಬಾಹುಬಲಿ’ ಸಿನಿಮಾದ ಸೀನ್ ರೀ-ಕ್ರಿಯೇಟ್ ಆಗಿದ್ದು, ಗಿಲ್ಲಿಯ ಹಾಸ್ಯ ಸಮಯ ಪ್ರಜ್ಞೆ, ಬಾಹುಬಲಿಯಲ್ಲಿ ಕಟ್ಟಪ್ಪ ಬೆನ್ನಿಗೆ ಚೂರಿ ಚುಚ್ಚಿದ ದೃಶ್ಯಗಳಂತೆ ರಘು ಚೂರಿ ಚುಚ್ಚಿರುವುದ ರೀಕ್ರಿಯೇಟ್ ಮಾಡಿರುವುದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಸೋಮವಾರದ ಸೀಸನ್‌ನಲ್ಲಿ ಸ್ಪರ್ಧಿಗಳ ಬೆನ್ನಿಗೆ ಚೂರಿ ಇರಿಯುವ ಮೂಲಕ ಸ್ಪರ್ಧಿಗಳನ್ನು ನಾಮಿನೇಟ್ ಮಾಡುವ ಟಾಸ್ಕ್ ಅನ್ನು ನೀಡಲಾಗಿತ್ತು. ಇದರ ಅನ್ವಯ ಗಿಲ್ಲಿ ನಟನ ಬೆನ್ನಿಗೇ ರಘು ಚೂರಿ ಚುಚ್ಚಿ ನಾಮಿನೇಟ್ ಮಾಡಿದ್ದಾರೆ.

ಈ ವೇಳೆ ಗಿಲ್ಲಿ ಬಾಹುಬಲಿಗೆ ಕಟ್ಟಪ್ಪ ಬೆನ್ನಿಗೆ ಚೂರಿಯಿಂದ ಚುಚ್ಚಿದಾಗ ನಟ ಪ್ರಭಾಸ್ ನೀಡಿದ ರಿಯಾಕ್ಷನ್ ಅನ್ನು ತೋರಿಸಿದ್ದಾರೆ. ಅಲ್ಲದೆ ಕನ್ನಡ ಸಿನಿಮಾ ರಾಜಾಹುಲಿಯಲ್ಲಿ ಯಶ್ ಅವರು ಸ್ನೇಹಿತರ ಕುರಿತಾದ ಡೈಲಾಗ್ ಹೊಡೆದಿದ್ದನ್ನು ಕಂಡು ವೀಕ್ಷಕರು ಬೆರಗಾಗಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ರಘು ಅವರು ಗಿಲ್ಲಿಗೆ ಚೂರಿ ಚುಚ್ಚಿದ್ದು, ಕಟ್ಟಪ್ಪ ಬಾಹುಬಲಿಗೆ ಚೂರಿ ಚುಚ್ಚಿದ ವಿಡಿಯೋ ಮಿಕ್ಸ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುವ ಮೂಲಕ ರಘು ವಿರುದ್ಧ ಬೇಸರ ವ್ಯಕ್ತಪಡಿಸುತ್ತಿದ್ದಾರೆ.

ಇಷ್ಟೆಲ್ಲ ಚರ್ಚೆಗಳ ನಡುವೆ ಇಂದು ರಘು ಮತ್ತು ಗಿಲ್ಲಿ ನಿನ್ನೆ ನಡೆದ ಎಲ್ಲಾ ವಾಗ್ವಾದಗಳ ಮರೆತು ಜೊತೆಯಾಗಿ ತಮಾಷೆ ಮಾಡುತ್ತಿರುವ ವಿಡಿಯೋ ವೈರಲ್ ಆಗಿದ್ದು, ಇದು Beauty of boys… ನಿನ್ನೆ ಕುರುಕ್ಷೇತ್ರ ಮಾಡಿ ಇವತ್ತು ಇಬ್ರು Flex ಮಾಡ್ತಾ ಇದಾರೆ…

ಅದೇ ಹೆಣ್ ಮಕ್ಳು ಯಾವತ್ತೋ ಯಾವ್ದೋ ಟಾಸ್ಕ್ ಅಲ್ಲಿ Dependent ಅಂದಳು ಅಂತ ಇವತ್ತಿಗೂ ಅದನ್ನ ಒಳ್ಳೆ Bubblegum ಥರ ಎಳೆದಾಡ್ತ ಇದಾರೆ ಎಂದು ನೆಟ್ಟಿಗರು ಕಿಚಾಯಿಸಿದ್ದಾರೆ.

ಒಟ್ಟಾರೆ ಬಿಗ್ ಬಾಸ್ ಸೀಸನ್ 12 ಗಿಲ್ಲಿ ತಂಡದ ಚೇಸ್ಟೆಗಳಿಂದ ಮನೆ ಮಂದಿ ಒಟ್ಟಿಗೆ ಕೂತು ಶೋ ನೋಡುತ್ತಾ ನಕ್ಕುನಲಿಯುವ ಮೂಲಕ ಎಂಜಾಯ್ ಮಾಡುತ್ತಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಕಲ್ಲರ್ಸ್ ಕನ್ನಡ ಜಿಯೋ ಹಾಟ್ ಸ್ಟಾರ್ ವಿಡಿಯೋ, ಮತ್ತು ಬಾಹುಬಲಿ ಸಿನಿಮಾದ ವಿಡಿಯೋಗಳು ವೈರಲ್ ಆಗಿದೆ.

ರಾಜಕೀಯ

ಅವಧಿ ಮುಗಿದ ಗ್ರಾಪಂಗಳಿಗೆ ಆಡಳಿತಾಧಿಕಾರಿಗಳನ್ನು ನೇಮಿಸಲು ಆದೇಶ

ಅವಧಿ ಮುಗಿದ ಗ್ರಾಪಂಗಳಿಗೆ ಆಡಳಿತಾಧಿಕಾರಿಗಳನ್ನು ನೇಮಿಸಲು ಆದೇಶ

ಗ್ರಾಮ ಪಂಚಾಯಿತಿ (Gram Panchayats) ಸದಸ್ಯರ ಅವಧಿಯು ಅವುಗಳ ಮೊದಲ ಸಭೆಗಾಗಿ ಗೊತ್ತುಪಡಿಸಿದ ದಿನಾಂಕದಿಂದ 5 ವರ್ಷಗಳ ಅವಧಿಯವರೆಗೆ ಅಸ್ತಿತ್ವದಲ್ಲಿದ್ದು 5 ವರ್ಷಗಳು ಮುಗಿದ ನಂತರದ ದಿನಾಂಕದಿಂದ ಗ್ರಾಮ ಪಂಚಾಯಿತಿಯ ಅವಧಿಯು ಮುಕ್ತಾಯಗೊಳ್ಳಲಿದೆ.

[ccc_my_favorite_select_button post_id="118535"]
ರಾಜ್ಯ ಸರ್ಕಾರಿ ನೌಕರ ಸಂಘದ ಕ್ಯಾಲೆಂಡರ್ ಬಿಡುಗಡೆ

ರಾಜ್ಯ ಸರ್ಕಾರಿ ನೌಕರ ಸಂಘದ ಕ್ಯಾಲೆಂಡರ್ ಬಿಡುಗಡೆ

ರಾಜ್ಯ ಸರ್ಕಾರಿ ನೌಕರ ಸಂಘದ (State Government Employees Association) 2026ನೇ ವರ್ಷದ ಕ್ಯಾಲೆಂಡರ್ (Calendar) ಅನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ (Cmsiddaramaiah) ಅವರು ಬಿಡುಗಡೆ ಮಾಡಿ, ಸರ್ಕಾರಿ ನೌಕರರಿಗೆ ಹೊಸ ವರ್ಷದ ಶುಭಾಶಯ ಕೋರಿದರು.‌

[ccc_my_favorite_select_button post_id="117770"]
ಭಾರತ ಹಿಂದೂ ರಾಷ್ಟ್ರ, ಯಾವುದೇ ಸಾಂವಿಧಾನಿಕ ಅನುಮೋದನೆ ಬೇಕಿಲ್ಲ: ಮೋಹನ್ ಭಾಗವತ್

ಭಾರತ ಹಿಂದೂ ರಾಷ್ಟ್ರ, ಯಾವುದೇ ಸಾಂವಿಧಾನಿಕ ಅನುಮೋದನೆ ಬೇಕಿಲ್ಲ: ಮೋಹನ್ ಭಾಗವತ್

ಭಾರತ ಹಿಂದೂ ರಾಷ್ಟ್ರ ಎಂಬುದು ಸತ್ಯ. ಅದಕ್ಕೆ ಯಾವುದೇ ಸಾಂವಿಧಾನಿಕ ಅನುಮೋದನೆ ಅಗತ್ಯವಿಲ್ಲ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ಮುಖ್ಯಸ್ಥ ಮೋಹನ್ ಭಾಗವತ್ (Mohan Bhagwat) ಹೇಳಿದ್ದಾರೆ.

[ccc_my_favorite_select_button post_id="117699"]
ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ -ಚೀನಿ ಬಾಯಿ ಬಾಯಿ

ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ

ಅಮೇರಿಕಾದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ (Donald Trump) ಶೇ.50 ರಷ್ಟು ತೆರಿಗೆ ಬರೆ ಬೆನ್ನಲ್ಲೇ, ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು 7 ವರ್ಷಗಳ ಬಳಿಕ ಚೀನಾಗೇ ಭೇಟಿ ನೀಡಿದ್ದಾರೆ.

[ccc_my_favorite_select_button post_id="113347"]

ಕ್ರೀಡೆ

ಕ್ರೀಡಾಪಟುಗಳಿಂದ ಪ್ರೋತ್ಸಾಹ ಧನಕ್ಕಾಗಿ ಅರ್ಜಿ ಆಹ್ವಾನ

ಕ್ರೀಡಾಪಟುಗಳಿಂದ ಪ್ರೋತ್ಸಾಹ ಧನಕ್ಕಾಗಿ ಅರ್ಜಿ ಆಹ್ವಾನ

ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದ ಕ್ರೀಡಾ ಸ್ಪಧೆಯಲ್ಲಿ ಭಾಗವಹಿಸುವ ಕ್ರೀಡಾಪಟುಗಳಿಗೆ (Athletes) 2025-26ನೇ ಸಾಲಿನಲ್ಲಿ ಪ್ರೋತ್ಸಾಹಧನಕ್ಕೆ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ (Applications invited).

[ccc_my_favorite_select_button post_id="118180"]
ಮಾಂಜಾ ದಾರ ಕುತ್ತಿಗೆಗೆ ಸಿಲುಕಿ ಬೈಕ್ ಸವಾರ ಸಾವು..!

ಮಾಂಜಾ ದಾರ ಕುತ್ತಿಗೆಗೆ ಸಿಲುಕಿ ಬೈಕ್ ಸವಾರ ಸಾವು..!

ದ್ವಿಚಕ್ರ ವಾಹನದಲ್ಲಿ ತೆರಳುವ ವೇಳೆ ಗಾಳಿಪಟ ಹಾರಿಸುವ ಮಾಂಜಾ ದಾರ (Maanja thread) ಕುತ್ತಿಗೆ ಸೀಳಿ ವ್ಯಕ್ತಿಯೊಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ಚಿಟಗುಪ್ಪ ತಾಲೂಕಿನ ತಾಳಮಡಗಿ ಗ್ರಾಮದ ಸೇತುವೆ ಸಮೀಪ ನಡೆದಿದೆ.

[ccc_my_favorite_select_button post_id="118471"]
ದೊಡ್ಡಬಳ್ಳಾಪುರ: 2 ಪ್ರತ್ಯೇಕ ಕಾರು ಅಪಘಾತ.. ಗಾಯಾಳುಗಳು ಆಸ್ಪತ್ರೆಗೆ

ದೊಡ್ಡಬಳ್ಳಾಪುರ: 2 ಪ್ರತ್ಯೇಕ ಕಾರು ಅಪಘಾತ.. ಗಾಯಾಳುಗಳು ಆಸ್ಪತ್ರೆಗೆ

ಇಂದು ಸಂಭವಿಸಿದ ಎರಡು ಪ್ರತ್ಯೇಕ ಕಾರುಗಳ ಅಪಘಾತದಲ್ಲಿ (Accident) ಇಬ್ಬರು ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡು, ಆಸ್ಪತ್ರೆಗೆ ದಾಖಲಾಗಿದ್ದಾರೆ.

[ccc_my_favorite_select_button post_id="118357"]

ಆರೋಗ್ಯ

ಸಿನಿಮಾ

2020 ಹಾಗೂ 2021 ರ ರಾಜ್ಯ ಚಲನಚಿತ್ರ ಪ್ರಶಸ್ತಿಗಳು ಪ್ರಕಟ

2020 ಹಾಗೂ 2021 ರ ರಾಜ್ಯ ಚಲನಚಿತ್ರ ಪ್ರಶಸ್ತಿಗಳು ಪ್ರಕಟ

ಕರ್ನಾಟಕ ಸರ್ಕಾರವು ಚಲನಚಿತ್ರ ರಂಗದಲ್ಲಿನ ಜೀವಮಾನ ಸಾಧನೆಗಾಗಿ ನೀಡುವ ಡಾ.ರಾಜಕುಮಾರ್, ಪುಟ್ಟಣ್ಣ ಕಣಗಾಲ್ ಹಾಗೂ ಡಾ.ವಿಷ್ಣುವರ್ಧನ್ ಪ್ರಶಸ್ತಿಗಳನ್ನು ಪ್ರಕಟಿಸಿದೆ (State Film Awards).

[ccc_my_favorite_select_button post_id="118307"]
error: Content is protected !!