ಬೆಂಗಳೂರು: ಏಳನೇ ತರಗತಿ ವಿದ್ಯಾರ್ಥಿ (Student) ಮೇಲೆ ಹಲ್ಲೆ ಮಾಡಿದ ಆರೋಪದಡಿ ಖಾಸಗಿ ಶಾಲೆಯೊಂದರ ದೈಹಿಕ ಶಿಕ್ಷಣ ಶಿಕ್ಷಕ (Teacher) ರಾಜೇಶ್ ಎನ್ನುವರ ವಿರುದ್ಧ ಎಫ್‌ಐಆರ್ ದಾಖಲಾಗಿದ್ದು ಹುಳಿಮಾವು ಪೊಲೀಸರು ಶಿಕ್ಷಕ ರಾಜೇಶ್ ರನ್ನು ಬಂಧಿಸಿದ್ದಾರೆ.
ಶಿಕ್ಷಕ ರಾಜೇಶ್ ಸಿಬ್ಬಂದಿ ಕೊಠಡಿಯಲ್ಲಿ ಶಿಕ್ಷಕರ ಮುಂದೆ ವಿದ್ಯಾರ್ಥಿ ಕೆನ್ನೆಗೆ ಬಾರಿಸಿದ್ದು, ಹೊಡೆದ ಏಟಿಗೆ ವಿದ್ಯಾರ್ಥಿಯ ಕೆನ್ನೆ ಊದಿಕೊಂಡಿದೆ. ಇದರಿಂದ ಬಾಲಕ ಮನೆಗೆ ಹೋಗಿರಲಿಲ್ಲ. ಇದರಿಂದ ಆತಂಕಗೊಂಡ ಪೋಷಕರು ಶಾಲೆಗೆ ತೆರಳಿ ಪರಿಶೀಲನೆ ನಡೆಸಿದ ವೇಳೆ ಈ ಘಟನೆ ಬೆಳಕಿಗೆ ಬಂದಿದೆ.
ಬೆಂಗಳೂರಿನ ಹುಳಿಮಾವು ಬಳಿಯ ಖಾಸಗಿ ಶಾಲೆಯಲ್ಲಿ ರಾಜೇಶ್ ದೈಹಿಕ ಶಿಕ್ಷಕರಾಗಿರುವ ಶಿಕ್ಷಕ ರಾಜೇಶ್, ಏಳನೇ ತರಗತಿ ವಿದ್ಯಾರ್ಥಿ ಸುಮಂತ್ ಕುಮಾರ್ (ಹೆಸರು ಬದಲಾಯಿಸಲಾಗಿದೆ) ಎಂಬಾತನ ಕಪಾಳಕ್ಕೆ ನಾಲೈದು ಶಿಕ್ಷಕರ ಮುಂದೆ ಹೊಡೆದಿದ್ದರು.
ವಿದ್ಯಾರ್ಥಿಯನ್ನು ಮನೆಗೆ ಕಳುಹಿಸದೇ ಸಂಜೆಯವರೆಗೂ ಶಾಲೆಯಲ್ಲಿಯೇ ಇರಿಸಿಕೊಂಡಿದ್ದರು ಎಂಬ ಆರೋಪ ಕೇಳಿ ಬಂದಿದೆ.
ಸಂಜೆಯಾದರೂ ಮಗ ಮನೆಗೆ ಬರದಿದ್ದಾಗ ಸುಮಂತ್ ಕುಮಾರ್ ಪೋಷಕರು ಶಾಲೆಯತ್ತ ಬಂದಿದ್ದಾರೆ. ಶಾಲೆಗೆ ಬಂದಾಗ ಸುಮಂತ್ ಕುಮಾರ್ ಕೆನ್ನೆ ಊದಿಕೊಂಡಿರುವ ವಿಷಯ ಗೊತ್ತಾಗಿದೆ.
ಕೂಡಲೇ ಮಗನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿದ್ದಾರೆ. ನಂತರ ಹುಳಿಮಾವು ಠಾಣೆಯಲ್ಲಿ ಶಿಕ್ಷಕ ರಾಜೇಶ್ ವಿರುದ್ಧ ದೂರು ದಾಖಲಿಸಿದ್ದಾರೆ ದೂರಿನ ಅನ್ವಯ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡು ಬಂಧಿಸಿದ್ದಾರೆ.
ಶಿಕ್ಷಕ ಹೊಡೆದಿದ್ಯಾಕೆ..?
ಸುಮಂತ್ ಕುಮಾರ್ ಊಟದ ವೇಳೆ ಸಹಪಾಠಿಯ ಕುರ್ಚಿಯನ್ನು ಎಳೆದಿದ್ದ. ತರಗತಿ ಕೊಠಡಿಯಲ್ಲಿಯೂ ಇದೇ ರೀತಿ ಕುರ್ಚಿ ಎಳೆದಿದ್ದರಿಂದ ವಿದ್ಯಾರ್ಥಿಯೊಬ್ಬ ಕೆಳಗೆ ಬಿದ್ದಿದ್ದ. ಕೆಳಗೆ ಬಿದ್ದ ವಿದ್ಯಾರ್ಥಿ ನೇರವಾಗಿ ಶಿಕ್ಷಕ ರಾಜೇಶ್ ಬಳಿ ತೆರಳಿ ಸುಮಂತ್ ಕುಮಾರ್ ವಿರುದ್ಧ ದೂರು ನೀಡಿದ್ದ.
ಶಿಕ್ಷಕ ರಾಜೇಶ್, ಸುಮಂತ್ ನನ್ನು ಸಿಬ್ಬಂದಿ ಕೊಠಡಿಗೆ ಕರೆದು ಕಪಾಳಕ್ಕೆ ಹೊಡೆದಿದ್ದರು.