ದೊಡ್ಡಬಳ್ಳಾಪುರ: ಮೇಕೆ (Goat) ಮತ್ತು ಶ್ವಾನವ (Dog) ಬಲಿ ಪಡೆದು ಗ್ರಾಮಸ್ಥರ ಆತಂಕಕ್ಕೆ ಕಾರಣವಾಗಿದ್ದ, ಚಿರತೆಯ (Leopard) ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ.
ದೊಡ್ಡಬಳ್ಳಾಪುರ ತಾಲ್ಲೂಕಿನ ಹಾರೋನಹಳ್ಳಿ ಗ್ರಾಮದ ಹೊರವಲಯದಲ್ಲಿನ ಅರಣ್ಯ ಪ್ರದೇಶ ಅಂಚಿನಲ್ಲಿ ನಿನ್ನೆ (ಶನಿವಾರ) ರಾಮಕೃಷ್ಣಪ್ಪ ಅವರ ಶ್ವಾನ ಹಾಗೂ ಮಾರೇಗೌಡ ಮೇಕೆಯನ್ನು ಬಲಿ ಪಡೆದಿತ್ತು.
ಈ ಕುರಿತಂತೆ ಗ್ರಾಮದ ಮುಖಂಡ, ಗ್ರಾಮಪಂಚಾಯಿತಿ ಮಾಜಿ ಅಧ್ಯಕ್ಷ ಶ್ರೀಧರ್ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು.
ಕೂಡಲೇ ಜಾಗೃತರಾದ ಅಧಿಕಾರಿಗಳು ಸಂಜೆಯ ವೇಳೆಗೆ ಬೋನ್ ಅಳವಡಿಸಿದ್ದರು.
ಇಂದು ಬೆಳಗ್ಗೆ ಚಿರತೆಯ ಆರ್ಭಟದ ಶಬ್ದ ಕೇಳಿ ಸ್ಥಳಕ್ಕೆ ಗ್ರಾಮಸ್ಥರು ತೆರಳಿದಾಗ ಶನಿವಾರ ರಾತ್ರಿ ಚಿರತೆ ಬೋನಿನಲ್ಲಿ ಸೆರೆಯಾಗಿರುವುದು ಕಂಡುಬಂದಿದ್ದು, ಗ್ರಾಮಸ್ಥರು ನಿಟ್ಟುಸಿರುಬಿಟ್ಟಿದ್ದಾರೆ.