ಪಣಜಿ: ವಿಮಾನದಲ್ಲಿ ಪ್ರಯಾಣಿಸುವ ವೇಳೆ ಅಮೆರಿಕ ಯುವತಿಯೊಬ್ಬರ ಜೀವ ಉಳಿಸುವಲ್ಲಿ ಮೂಲತಃ ವೈದ್ಯೆಯೂ ಆಗಿರುವ ಖಾನಾಪುರದ ಮಾಜಿ ಶಾಸಕಿ ಡಾ. ಅಂಜಲಿ ನಿಂಬಾಳ್ಕರ್ (Dr. Anjali Nimbalkar ಶನಿವಾರ ಯಶಸ್ವಿಯಾಗಿದ್ದಾರೆ.
ಗೋವಾದಿಂದ ದೆಹಲಿಗೆ ಹೊರಟಿದ್ದ ವಿಮಾನ ದಲ್ಲಿ ಡಾ.ಅಂಜಲಿಯೂ ಪ್ರಯಾಣಿಸಿದ್ದರು. ಇದೇ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಅಮೆರಿಕ ಮೂಲದ ಯುವತಿಗೆ ಇದ್ದಕ್ಕಿದ್ದಂತೆ ಪ್ರಜ್ಞೆ ತಪ್ಪಿದೆ. ಸನ್ನಿವೇಶ ಗಮನಿಸಿದ ಅಂಜಲಿ ಕೂಡಲೇ ಯುವತಿಯ ಹೃದಯದ ಮೇಲೆ ಕೈಯಿಟ್ಟು ಒತ್ತಿ ಸಿಪಿಆರ್ ನಡೆಸಿದ್ದಾರೆ. ಬಳಿಕ ಆಕೆ ಉಸಿರಾಡಿ ಚೇತರಿಸಿಕೊಂಡಿದ್ದರು
ಆದರೆ ಇದಾದ 30 ನಿಮಿಷಗಳಲ್ಲಿ ಯುವತಿ ಮತ್ತೆ ಕುಸಿದುಬಿದ್ದಳು. ಕೈ-ಕಾಲುಗಳಲ್ಲಿ ನಡುಕ ಉಂಟಾಗಿ, ಮೈಬಣ್ಣ ನೀಲಿ ಬಣ್ಣಕ್ಕೆ ತಿರುಗಿ, ಬಿಪಿ ಏರಿತ ಕಂಡು ಬಂದಿದೆ ರಾಜ್ಯ ಕಾಂಗ್ರೆಸ್ ನಾಯಕಿ ಡಾ. ಅಂಜಲಿ ನಿಂಬಾಳ‌್ಕರ್ ಅವರ ಸುಮಾರು ಎರಡೂವರೆ ಕಂಟೆಗಳ ಅವಿರತ ಪ್ರಯತ್ನದಿಂದಾಗಿ ಮತ್ತೆ ಜೀವ ಉಳಿದಿದೆ.
ಬಳಿಕ ವಿಮಾನ ನಿಲ್ದಾಣದಲ್ಲಿ ಇವರು ತೆರಳುತ್ತಿದ್ದ ವಿಮಾನಕ್ಕೆ ತುರ್ತು ಹಾಗೂ ವಿಶೇಷ ಲ್ಯಾಂಡಿಂಗ್ ಗೆ ಅವಕಾಶ ಕಲ್ಪಿಸಿ, ಚೇತರಿಸಿಕೊಂಡಿದ್ದ ಯುವತಿಯನ್ನು ಅಂಬುಲೆನ್ಸ್ ಮೂಲಕ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.