
ದೊಡ್ಡಬಳ್ಳಾಪುರ: ತಾಲೂಕಿನ ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯಿತಿ ಚುನಾವಣೆ (Bashettihalli town panchayat election) ಬೆಳಗ್ಗೆ 7 ಗಂಟೆಯಿಂದ ಆರಂಭವಾಗಿದ್ದು, 9 ಗಂಟೆ ವರದಿ ಅನ್ವಯ ಶೇ.3.82 ಮತದಾನ ನಡೆದಿದೆ.
ತೀವ್ರ ಚಳಿ ಹಿನ್ನೆಲೆಯಲ್ಲಿ ಮತದಾನ ನೀರಸ ಆರಂಭ ಕಂಡಿದ್ದು, 294 ಪುರುಷರು, 202 ಮಹಿಳೆಯರು ಸೇರಿ ಒಟ್ಟು 496 ಮಂದಿ ಮತದಾನ ಮಾಡಿದ್ದಾರೆ.
ವರದಿ ಅನ್ವಯ
ಮತಗಟ್ಟೆ 1 ರಲ್ಲಿ ಶೇ.7.91.
ಮತಗಟ್ಟೆ 2 ರಲ್ಲಿ ಶೇ. 2.15.
ಮತಗಟ್ಟೆ 3 ರಲ್ಲಿ ಶೇ. 3.16.
ಮತಗಟ್ಟೆ 4 ರಲ್ಲಿ ಶೇ. 2.95.
ಮತಗಟ್ಟೆ 5 ರಲ್ಲಿ ಶೇ.4.92.
ಮತಗಟ್ಟೆ 6 ರಲ್ಲಿ ಶೇ.3.75.
ಮತಗಟ್ಟೆ 7 ರಲ್ಲಿ ಶೇ.5.50.
ಮತಗಟ್ಟೆ 8 ರಲ್ಲಿ ಶೇ.6.15.
ಮತಗಟ್ಟೆ 9 ರಲ್ಲಿ ಶೇ.4.53.
ಮತಗಟ್ಟೆ 10 ರಲ್ಲಿ ಶೇ.5.56.
ಮತಗಟ್ಟೆ 11 ರಲ್ಲಿ ಶೇ.1.72.
ಮತಗಟ್ಟೆ 12 ರಲ್ಲಿ ಶೇ.2.32.
ಮತಗಟ್ಟೆ 13 ರಲ್ಲಿ ಶೇ.0.80
ಮತಗಟ್ಟೆ 14 ರಲ್ಲಿ ಶೇ.2.76.
ಮತಗಟ್ಟೆ 15 ರಲ್ಲಿ ಶೇ.2.29.
ಮತಗಟ್ಟೆ 16 ರಲ್ಲಿ ಶೇ.1.78
ಮತಗಟ್ಟೆ 17 ರಲ್ಲಿ ಶೇ.3.25
ಮತಗಟ್ಟೆ 18 ರಲ್ಲಿ ಶೇ.4.54
ಮತಗಟ್ಟೆ 19 ರಲ್ಲಿ ಶೇ.9.78 ರಷ್ಟು ಮತದಾನ ನಡೆದಿದೆ.
ಇಂದು ಬೆಳ್ಳಂಬೆಳಗ್ಗೆ ಜಿಲ್ಲಾಧಿಕಾರಿ ಎ.ಬಿ. ಬಸವರಾಜು ಅವರು ಮತಗಟ್ಟೆ ಕೇಂದ್ರಗಳಿಗೆ ಭೇಟಿ ನೀಡಿದ್ದರು.
ನಿಷೇಧಾಜ್ಞೆ ನಡುವೆಯೂ ಪೆಂಡಾಲ್ ಅಳವಡಿಸಿ, ಪ್ರಚಾರಕ್ಕೆ ಮುಂದಾದ ಮುಖಂಡರ ತರಾಟೆಗೆ ತೆಗೆದುಕೊಂಡ ಅವರು ಪೆಂಡಾಲ್ ತೆರವಿಗೆ ಸೂಚನೆ ನೀಡಿದರು.
ಮತದಾರರ ಪರದಾಟ
ಇನ್ನೂ ಇದೇ ಮೊದಲ ಬಾರಿಗೆ ನಡೆಯುತ್ತಿರುವ ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯಿತಿ ಚುನಾವಣೆ ವಾರ್ಡ್ ವಿಂಗಡಣೆಯಾಗಿರುವ ಕಾರಣ, ಮತ ಕೇಂದ್ರಗಳ ಗೊಂದಲ ಮತದಾರನ್ನು ಕಾಡಿದ್ದು, ಮತಗಟ್ಟೆ ಹುಡುಕಾಟದಲ್ಲಿ ಅನೇಕರು ನಿರತರಾಗಿದ್ದಾರೆ.
ದೊಡ್ಡಬಳ್ಳಾಪುರ ನಗರಸಭೆ: ಶೇ.3.38 ಮತದಾನ
ಮತ್ತೊಂದೆಡೆ ದೊಡ್ಡಬಳ್ಳಾಪುರ ನಗರಸಭೆ ವಾರ್ಡ್ 21ರ ಉಪಚುನಾವಣೆಯಲ್ಲಿ ಶೇ.3.38 ರಷ್ಟು ಮತದಾನ ನಡೆದಿದೆ.