Private channels that ignited a fire between Darshan-Sudeep fans..?!

ದರ್ಶನ್-ಸುದೀಪ್ ಅಭಿಮಾನಿಗಳ ನಡುವೆ ತಂದಿಟ್ಟ ಖಾಸಗಿ ಚಾನಲ್‌ಗಳು..?!

ಕೆ.ಎಂ.ಸಂತೋಷ್, ಆರೂಢಿ (ದೊಡ್ಡಬಳ್ಳಾಪುರ): ಕೆಲ ಖಾಸಗಿ ನ್ಯೂಸ್ ಚಾನಲ್‌ಗಳಿಗೆ (Private channels) ನಟ ದರ್ಶನ್ (Darshan) ಅಭಿಮಾನಿಗಳನ್ನು ಕೆರಳಿಸುವುದು, ಮತ್ತೋರ್ವ ನಟ ಎತ್ತಿಕಟ್ಟುವುದನ್ನೇ ಕಾಯಕ ಮಾಡಿಕೊಂಡಿವೆ ಎಂಬುದು ವೀಕ್ಷಕರ ಆರೋಪವಾಗಿದೆ.

ಗೆಳತಿಗೆ ಅಶ್ಲೀಲ ಸಂದೇಶ ಕಳುಹಿಸಿದ ವ್ಯಕ್ತಿಯೋರ್ವನ ಹತ್ಯೆ ಆರೋಪದಡಿಯಲ್ಲಿ ದರ್ಶನ್ ನ್ಯಾಯಾಂಗ ಬಂಧನದಲ್ಲಿದ್ದಾರೆ. ಈ ನಡುವೆ ಅವರ ನಟನೆಯ “ದಿ ಡೆವಿಲ್” ಸಿನಿಮಾ ಬಿಡುಗಡೆಯಾಗಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ‌.

ದರ್ಶನ್ ಅವರ ದಿ ಡೆವಿಲ್ ಸಿನಿಮಾ ಕುರಿತಂತೆ ನಕಾರಾತ್ಮಕ ವರದಿ ಪ್ರಸಾರ ಮಾಡಿದ್ದ ಕೆಲ ನ್ಯೂಸ್ ಚಾನಲ್‌ಗಳು, ಸಿನಿಮಾಗೆ ಹಿನ್ನಡೆ ಮಾಡಲು ಅನೇಕ ಕುತಂತ್ರ ನಡೆಸಿ ವಿಫಲವಾಗಿವೆ.

ಕಿಚ್ಚ ಸುದೀಪ್ ವಿರುದ್ಧವೂ ಷಡ್ಯಂತ್ರ..?!

ಇದರ ಬೆನ್ನಲ್ಲೇ ನಟ ಕಿಚ್ಚ ಸುದೀಪ್ ಅವರ ಮಾರ್ಕ್ ಸಿನಿಮಾ ಬಿಡುಗಡೆಯಾಗಲಿದ್ದು, ಈ ನಡುವೆ ಪ್ರೀ ರಿಲೀಸ್ ಈವೆಂಟ್ ನಲ್ಲಿ ಸುದೀಪ್ ಆಡಿದ ಮಾತನ್ನು ದರ್ಶನ್ಗೆ ಹೇಳಿದ್ದು ಎಂಬಂತೆ ಇಬ್ಬರು ನಟರ ಅಭಿಮಾನಿಗಳ ನಡುವೆ ಬೆಂಕಿ ಹಚ್ಚುವ ಕಾಯಕ ಮಾಡುತ್ತಿವೆ.

ಇಷ್ಟಕ್ಕೂ ಆಗಿದ್ದೇನು ಎಂದರೆ ಹುಬ್ಬಳ್ಳಿಯಲ್ಲಿ ಮಾರ್ಕ್ ಚಿತ್ರದ ಪ್ರೀ ರಿಲೀಸ್ ಈವೆಂಟ್ ಮಾಡಲಾಗಿತ್ತು. ಈ ಸಂದರ್ಭದಲ್ಲಿ ಸುದೀಪ್ ಅವರು ಕೆಲ ಮಾತು ಹುಬ್ಬಳ್ಳಿಯಲ್ಲಿ ಮಾತನಾಡಿದ್ರೆ ಎಲ್ಲಿ ತಟ್ಟಬೇಕೋ ಅಲ್ಲಿ ತಟ್ಟುತ್ತೆ. ಹೊರಗಡೆ ಒಂದು ಪಡೆ ಯುದ್ಧಕ್ಕೆ ರೆಡಿಯಾಗುತ್ತಿದೆ.

ನಾವು ಯುದ್ಧಕ್ಕೆ ಸಿದ್ಧ, ನಾವು ನಮ್ಮ ಮಾತಿಗೆ ಬದ್ದರಾಗಿದ್ದೇವೆ, ಸೈಲೆಂಟ್ ಆಗಿರೋದು ಒಳ್ಳೆಯದೋ ಕೆಟ್ಟದ್ದೋ ಗೊತ್ತಿಲ್ಲಾ. ಆದರೆ ನೀವು ನನ್ನ ಸ್ನೇಹಿತರು ಚೆನ್ನಾಗಿ ಇರಬೇಕು. ಅಂತ ಬಾಯಿ ಮುಚ್ಚಿಕೊಂಡು ಇದ್ದೆ, ಬಾಯಿ ಇಲ್ಲಾ ಅಂತ ಅಲ್ಲಾ ಎಂದು ಹೇಳಿದ್ದಾರೆ.

ಈ ಮಾತನ್ನು ಸಿನಿಮಾದ ಪೈರೆಸಿ ಕುರಿತಂತೆ ಹೇಳಿದ್ದಾರೆ ಎಂಬುದು ಸುದೀಪ್ ಬೆಂಬಲಿಗರ ಹೇಳಿಕೆಯಾಗಿದೆ. ಆದರೆ ನ್ಯೂಸ್ ಚಾನಲ್‌ಗಳು ಈ ಮಾತನ್ನು ದರ್ಶನ್ ಬೆಂಬಲಿಗರಿಗೇ ಹೇಳಿದ್ದು ಎಂಬಂತೆ ಸರಣಿ ವರದಿ ಮಾಡುವ ಮೂಲಕ ದರ್ಶನ್ ಹಾಗೂ ಸುದೀಪ್ ಅಭಿಮಾನಿಗಳ ನಡುವೆ ತಂದಿಟ್ಟು ತಮಾಷೆ ನೋಡುತ್ತಿವೆ‌.

ಉರಿಯುವ ಬೆಂಕಿಗೆ ತುಪ್ಪ..?!

ಅಲ್ಲದೆ ದಿ ಡೆವಿಲ್ ಸಿನಿಮಾ ಪ್ರಮೋಷನ್‌ನಲ್ಲಿ ಬ್ಯುಸಿ ಆಗಿರುವ ವಿಜಯಲಕ್ಷ್ಮಿ ದರ್ಶನ್ ಅವರ ಮಾತನ್ನು ಸುದೀಪ್ ಅವರಿಗೆ ಹೇಳಿದ್ದು ಎಂದು ಲಿಂಕ್ ಮಾಡಿ, ಉರಿಯುವ ಬೆಂಕಿಗೆ ತುಪ್ಪ ಸುರಿಯುತ್ತಿವೆ.

ಇನ್ನೂ ವಿಜಯಲಕ್ಷ್ಮಿ ದರ್ಶನ್ ಅವರು ದಾವಣಗೆರೆಯಲ್ಲಿ ಸಿನಿಮಾ ಯಶಸ್ಸಿನ ಸಂಭ್ರಮಾಚರಣೆ ವೇಳೆ ದರ್ಶನ್ ಇಲ್ಲದೆ ಇದ್ದಾಗ ಕೆಲ ವ್ಯಕ್ತಿಗಳು, ಅವರ ಬಗ್ಗೆ ಅವರ ಅಭಿಮಾನಿಗಳಾದ ನಿಮ್ಮ ಬಗ್ಗೆ ವೇದಿಕೆ ಮೇಲೆ, ಚಾನಲ್‌ಗಳಲ್ಲಿ ಕೂತು ಮಾತಾಡೋದು, ಹೊರಗಡೆ ಎಲ್ಲ ಮಾತಾಡೋದ್ ಮಾಡ್ತಾರೆ. ಆದರೆ ದರ್ಶನ್ ಹೊರಗಡೆ ಇದ್ದಾಗ ಇವರು ಬೆಂಗಳೂರಿನಲ್ಲಿ ಇರ್ತಾರೋ ಇಲ್ಲೋ, ಎಲ್ಲಿ ಮಾಯ ಆಗ್ತಾರೋ ಗೊತ್ತಾಗಲ್ಲ.

ಅವರು ಏನೆ ಮಾತಾಡುದ್ರು, ದರ್ಶನ್ ಅವರು ಹೇಳುವ ಹಾಗೆ, ಯಾರ್ ಏನೆ ಮಾತಾಡುದ್ರು ನಾವ್ ನೊಂದುಕೊಳ್ಳಲ್ಲ, ಕೋಪ ಮಾಡಿಕೊಳ್ಳಲ್ಲ, ನೀವು ಕೂಡ ಕೋಪ ಮಾಡ್ಕೋಬೇಡಿ, ಬೇಜಾರ್ ಮಾಡ್ಕೋಬೇಡಿ, ತಲೆ ಕೆಡಿಸಿಕೊಳ್ಳಬೇಡಿ.

ನಾವು ನಿಮ್ಮಿಂದ (ಅಭಿಮಾನಿಗಳು) ಬಯಸೋದು ನಿಮ್ಮ ಪ್ರೀತಿ, ಬೆಂಬಲ ಮಾತ್ರ ಎಂದು ವಿಜಯಲಕ್ಷ್ಮಿ ಹೇಳಿದ್ದಾರೆ. ಆದರೆ ಈ ಮಾತನ್ನು ವಿಜಯಲಕ್ಷ್ಮಿ ದರ್ಶನ್ ಅವರು ಕಿಚ್ಚ ಸುದೀಪ್ ಗೆ ಪರೋಕ್ಷವಾಗಿ ಟಾಂಗ್ ಕೊಟ್ಟಿದ್ದಾರೆ ಎಂದು ಕೆಲ ಖಾಸಗಿ ಚಾನಲ್ ಮತ್ತು ಪತ್ರಿಕೆಗಳು ಲಿಂಕ್ ಮಾಡಿವೆ.

ಈ ವಿಚಾರದಲ್ಲಿ ನೆನಪಿಡಬೇಕಾದ್ದು, ದರ್ಶನ್ ಹಾಗೂ ಅವರ ಅಭಿಮಾನಿಗಳ ವಿಚಾರವಾಗಿ ಪ್ರಥಮ್, ರಮ್ಯ ಸೇರಿದಂತೆ ಕೆಲ ನಟರ ಹೇಳಿಕೆ ಎಲ್ಲರಿಗೂ ತಿಳಿದಿರುವುದೇ ಆಗಿದೆ.

ಆದಾಗ್ಯೂ ವಿಜಯಲಕ್ಷ್ಮಿ ದರ್ಶನ್ ಅವರ ಮಾತನ್ನು ಸುದೀಪ್ ಅವರಿಗೆ ಹೇಳಿದ್ದು ಎಂಬಂತೆ (?) ಹಾಕಿ ಬಿಂಬಿಸಿ, ಉರಿಯುವ ಮನೆಯಲ್ಲಿ ಬೀಡಿ ಹಚ್ಚಿಕೊಳ್ಳುವ ಕುಯುಕ್ತಿ ಕೆಲ ಖಾಸಗಿ ಚಾನಲ್‌ಗಳದ್ದಾಗಿದೆ ಎಂಬುದು ಇಬ್ಬರು ನಟರ ಪ್ರಜ್ಞಾವಂತ ಅಭಿಮಾನಿಗಳ ಅಭಿಪ್ರಾಯ.

ಅಲ್ಲದೆ ಇಂದು ಮಾರ್ಕ್ ಸಿನಿಮಾ ಬಿಡುಗಡೆಗೆ ಎಲ್ಲಾ ಸಿದ್ಧತೆ ಪೂರ್ಣ ಎಂಬಂತೆ ಸುದೀಪ್ ಅವರು ಟ್ವಿಟರ್ ಖಾತೆಯಲ್ಲಿ ಆಲ್ ಸೆಟ್..?? ಕೇವಲ 3 ದಿನಗಳಲ್ಲಿ ಮಾರ್ಕ್ ಸಿನಿಮಾ ನಿಮ್ಮೊಂದಿಗೆ – ನಿಮ್ಮ ಸ್ಕ್ರೀನ್ ಅನ್ನು ಆಯ್ಕೆ ಮಾಡಿಕೊಳ್ಳಿ ಎಂದು ಬರೆದರಿದ್ದಾರೆ.

ಇಲ್ಲಿಯೂ ಇದನ್ನೂ ಸುದೀಪ್ ಅವರು ಪರೋಕ್ಷವಾಗಿ ವಿಜಯಲಕ್ಷ್ಮೀ ದರ್ಶನ್‌ಗೆ ಟಾಂಗ್ ನೀಡಿದ್ದಾ ಎಂದು ಬಿಂಬಿಸುವ ಮೂಲಕ ಸಂವಿಧಾನದ ನಾಲ್ಕನೆ ಅಂಗ ನಾವೇ, ನಮ್ಮಿಂದಲೇ ರಕ್ಷಣೆ ಎಂದು ಬಿಂಬಿಸಿಕೊಳ್ಳುವ ಕೆಲ ನ್ಯೂಸ್ ಚಾನಲ್‌ಗಳು ಹಾಗೂ ಪತ್ರಿಕೆಗಳು ವೃತ್ತಿ ಧರ್ಮ ಮರೆತು ವರ್ತಿಸುತ್ತಿವೆ.

ಸುದೀಪ್ ಆತ್ಮೀಯರು ಈವೆಂಟ್ ನಲ್ಲಿ ಸುದೀಪ್ ಅವರು ಮಾತನಾಡಿದ್ದು, ಪೈರೆಸಿ ಪಡೆಯ ವಿಚಾರವಾಗಿ ಎಂದು ಸ್ಪಷ್ಟವಾಗಿ ಹೇಳಿದರು. ಪದೇ ಪದೇ ದರ್ಶನ್ ಹಾಗೂ ಸುದೀಪ್ ಅವರ ನಡುವೆ ತಂದಿಟ್ಟು, ಅವರನ್ನು ಕೆರಳಿಸುವ ತಮ್ಮ ಚಾಳಿ ಮುಂದುವರಿಸುತ್ತಿವೆ. ಆದರೆ ಇದನ್ನು ಅರಿಯದೆ ಇಬ್ಬರ ಅಭಿಮಾನಿಗಳ ನಡುವೆ ಸಾಮಾಜಿಕ ಜಾಲತಾಣದಲ್ಲಿ ಸಮರವೇ ನಡೆಯುತ್ತಿದೆ.

ರಾಜಕೀಯ

ಈ ಸರ್ಕಾರ ಮೊದಲು ದೆತು ದೆತು ಅಂತಾರೆ, ಬಳಿಕ ದಿಲಾತು ದಿಲಾತು ಅಂತಾರೆ: ಬಸವರಾಜ ಬೊಮ್ಮಾಯಿ

ಈ ಸರ್ಕಾರ ಮೊದಲು ದೆತು ದೆತು ಅಂತಾರೆ, ಬಳಿಕ ದಿಲಾತು ದಿಲಾತು ಅಂತಾರೆ:

ಈ ಸರ್ಕಾರದಲ್ಲಿ ಹೆಂಗಿದೆ ಅಂದರೆ ಮೊದಲು ದೆತು ದೆತು ಅಂತಾರೆ, ದಿಲಾತು ದಿಲಾತು ಅಂತಾರೆ ನಂತರ ದೇನೆವಾಲಾಂಕೊ ದಿಕಾತು ಅಂತ ಹೇಳುತ್ತಾರೆ‌. ಉತ್ತರ ಕರ್ನಾಟಕ ಶಿಕ್ಷಣಕ್ಕೆ ಪ್ರಾಥಮಿಕ ಆದ್ಯತೆ ಕೊಡಬೇಕು: ಬಸವರಾಜ ಬೊಮ್ಮಾಯಿ (Basavaraj

[ccc_my_favorite_select_button post_id="117677"]
ಕಲಾವಿದರಾದ ಉಮೇಶ್, ರಾಮಚಂದ್ರಯ್ಯ ಅವರಿಗೆ ದೊಡ್ಡಬಳ್ಳಾಪುರದಲ್ಲಿ ನುಡಿನಮನ

ಕಲಾವಿದರಾದ ಉಮೇಶ್, ರಾಮಚಂದ್ರಯ್ಯ ಅವರಿಗೆ ದೊಡ್ಡಬಳ್ಳಾಪುರದಲ್ಲಿ ನುಡಿನಮನ

ದೊಡ್ಡಬಳ್ಳಾಪುರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಕನ್ನಡ ಜಾಗೃತ ಪರಿಷತ್ತು ವತಿಯಿಂದ ಚಲನಚಿತ್ರ ಹಾಸ್ಯ ನಟ ಉಮೇಶ್ (Umesh) ಮತ್ತು ಜಾನಪದ ಕಲಾವಿದ ಶ್ಯಾಕಲದೇವನಪುರ ರಾಮಚಂದ್ರಯ್ಯ (Ramachandraiah) ಅವರಿಗೆ ನುಡಿನಮನ ಕಾರ್ಯಕ್ರಮ ನಡೆಯಿತು. 

[ccc_my_favorite_select_button post_id="117539"]
ಕಾಮನ್‌ವೆಲ್ತ್‌ ಸಂಸದೀಯ ಸಂಘದ ಭಾರತೀಯ ವಿಭಾಗದ 11ನೇ ಸಮ್ಮೇಳನದಲ್ಲಿ ಸಂಸದ ಡಾ.ಕೆ.ಸುಧಾಕರ್‌ ಭಾಗಿ

ಕಾಮನ್‌ವೆಲ್ತ್‌ ಸಂಸದೀಯ ಸಂಘದ ಭಾರತೀಯ ವಿಭಾಗದ 11ನೇ ಸಮ್ಮೇಳನದಲ್ಲಿ ಸಂಸದ ಡಾ.ಕೆ.ಸುಧಾಕರ್‌ ಭಾಗಿ

ಕಾಮನ್‌ವೆಲ್ತ್‌ ಸಂಸದೀಯ ಸಂಘದ ಭಾರತೀಯ ವಿಭಾಗದ 11ನೇ ಸಮ್ಮೇಳನದಲ್ಲಿ ಲೋಕಸಭೆ ಸ್ಪೀಕರ್‌ ಓಂ ಬಿರ್ಲಾ ಅವರೊಂದಿಗೆ, ಸಂಘಟನೆಯ ಟ್ರಸ್ಟಿಯೂ ಆಗಿರುವ ಸಂಸದ ಡಾ.ಕೆ.ಸುಧಾಕರ್‌ (Dr.K.Sudhakar)

[ccc_my_favorite_select_button post_id="113863"]
ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ -ಚೀನಿ ಬಾಯಿ ಬಾಯಿ

ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ

ಅಮೇರಿಕಾದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ (Donald Trump) ಶೇ.50 ರಷ್ಟು ತೆರಿಗೆ ಬರೆ ಬೆನ್ನಲ್ಲೇ, ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು 7 ವರ್ಷಗಳ ಬಳಿಕ ಚೀನಾಗೇ ಭೇಟಿ ನೀಡಿದ್ದಾರೆ.

[ccc_my_favorite_select_button post_id="113347"]

ಕ್ರೀಡೆ

ದೊಡ್ಡಬಳ್ಳಾಪುರದ ಎಂ.ಆ‌ರ್.ಜಾಹ್ನವಿಗೆ ಬಾಲ ವಿಕಾಸ ಅಕಾಡೆಮಿ ಪ್ರಶಸ್ತಿ

ದೊಡ್ಡಬಳ್ಳಾಪುರದ ಎಂ.ಆ‌ರ್.ಜಾಹ್ನವಿಗೆ ಬಾಲ ವಿಕಾಸ ಅಕಾಡೆಮಿ ಪ್ರಶಸ್ತಿ

ಇಲ್ಲಿನ ನಿಸರ್ಗ ಯೋಗ ಕೇಂದ್ರದ ಯೋಗಪಟು ಎಂ. ಆರ್. ಜಾಹ್ನವಿ (M.R. Jahnavi) ಅವರಿಗೆ ಧಾರವಾಡದ ಕರ್ನಾಟಕ ಬಾಲ ವಿಕಾಸ ಅಕಾಡೆಮಿ ವತಿಯಿಂದ 2023-24ನೇ ಸಾಲಿಗೆ ನೀಡಲಾಗುವ ಅಕಾಡೆಮಿ ಬಾಲ ಗೌರವ ಪ್ರಶಸ್ತಿ ಬಾಲ

[ccc_my_favorite_select_button post_id="117462"]
ದೊಡ್ಡಬಳ್ಳಾಪುರ: ನೀರಿಲ್ಲದ ಪಾಳು ಬಾವಿಗೆ ಬಿದ್ದು ವ್ಯಕ್ತಿ ಸಾವು..!

ದೊಡ್ಡಬಳ್ಳಾಪುರ: ನೀರಿಲ್ಲದ ಪಾಳು ಬಾವಿಗೆ ಬಿದ್ದು ವ್ಯಕ್ತಿ ಸಾವು..!

ಸುಮಾರು 40 ಅಡಿ ಆಳದ ಪಾಳು ಬಾವಿಗೆ (Water well) ಬಿದ್ದು ವ್ಯಕ್ತಿಯೋರ್ವ ಸಾವನಪ್ಪಿರುವ ಘಟನೆ ತಾಲೂಕಿನ ಪುಟ್ಟಯ್ಯನ ಅಗ್ರಹಾರದಲ್ಲಿ ಶುಕ್ರವಾರ ರಾತ್ರಿ ಸಂಭವಿಸಿದ್ದು, ಶನಿವಾರ ಬೆಳಕಿಗೆ ಬಂದಿದೆ.

[ccc_my_favorite_select_button post_id="117569"]
ದೊಡ್ಡಬಳ್ಳಾಪುರ; ಕಂಟೇನರ್‌ಗೆ ಡಿಕ್ಕಿ.. ಬೈಕ್ ಸವಾರ ಸಾವು..

ದೊಡ್ಡಬಳ್ಳಾಪುರ; ಕಂಟೇನರ್‌ಗೆ ಡಿಕ್ಕಿ.. ಬೈಕ್ ಸವಾರ ಸಾವು..

ಕಂಟೇನರ್ (container) ಚಾಲಕ ನಿರ್ಲಕ್ಷ್ಯದಿಂದ ಏಕಾಏಕಿ ತಿರುವ ಪಡೆದ ವೇಳೆ ಎದುರು ರಸ್ತೆಯಲ್ಲಿ ಬರುತ್ತಿದ್ದ ದ್ವಿಚಕ್ರ ವಾಹನ‌ ಡಿಕ್ಕಿ ಹೊಡೆದ ಪರಿಣಾಮ (Accident) ಬೈಕ್ (Bike) ಸವಾರ ಸಾವನಪ್ಪಿರುವ ಘಟನೆ ಕನ್ನಮಂಗಲ ಗೇಟ್ ಬಳಿ

[ccc_my_favorite_select_button post_id="117565"]

ಆರೋಗ್ಯ

ಸಿನಿಮಾ

‘ದಿ ಡೆವಿಲ್’ ರಿಲೀಸ್; ದೊಡ್ಡಬಳ್ಳಾಪುರದಲ್ಲಿ ಮುಗಿಲು ಮುಟ್ಟಿದ ದರ್ಶನ್ ಅಭಿಮಾನಿಗಳ ಸಂಭ್ರಮ.!| Video ನೋಡಿ

‘ದಿ ಡೆವಿಲ್’ ರಿಲೀಸ್; ದೊಡ್ಡಬಳ್ಳಾಪುರದಲ್ಲಿ ಮುಗಿಲು ಮುಟ್ಟಿದ ದರ್ಶನ್ ಅಭಿಮಾನಿಗಳ ಸಂಭ್ರಮ.!| Video

ಅಭಿಮಾನಿಗಳ ದಾಸ, ಚಾಲೆಂಜಿಂಗ್ ಸ್ಟಾರ್ ದರ್ಶನ್ ತೂಗುದೀಪ (Darshan) ಅಭಿನಯದ ಬಹುನಿರೀಕ್ಷಿತ ಚಿತ್ರ 'ದಿ ಡೆವಿಲ್' ಇಂದು (ಡಿ.11) ರಾಜ್ಯಾದ್ಯಂತ ಅದ್ಧೂರಿಯಾಗಿ ರಿಲೀಸ್ ಆಗಿದ್ದು, ಯಶಸ್ವಿ ಪ್ರದರ್ಶನ ಕಾಣುತ್ತಿದೆ.

[ccc_my_favorite_select_button post_id="117242"]
error: Content is protected !!