
ಕೋಲ್ಕತಾ: ಭಾರತ ಹಿಂದೂ ರಾಷ್ಟ್ರ ಎಂಬುದು ಸತ್ಯ. ಅದಕ್ಕೆ ಯಾವುದೇ ಸಾಂವಿಧಾನಿಕ ಅನುಮೋದನೆ ಅಗತ್ಯವಿಲ್ಲ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ಮುಖ್ಯಸ್ಥ ಮೋಹನ್ ಭಾಗವತ್ (Mohan Bhagwat) ಹೇಳಿದ್ದಾರೆ.
ಕೋಲ್ಕತಾದಲ್ಲಿ ನಡೆದ RSS ಶತಮಾನೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸೂರ್ಯ ಪೂರ್ವದಲ್ಲಿ ಉದಯಿಸುತ್ತಾನೆ. ಈ ಪ್ರಕ್ರಿಯೆ ಯಾವಾಗಿನಿಂದ ನಡೆಯುತ್ತಿದೆ ಎಂಬುದು ನಮಗೆ ತಿಳಿದಿಲ್ಲ. ಅದಕ್ಕೆ ಸಾಂವಿಧಾನಿಕ ಅನುಮತಿ ಬೇಕೆ? ಹಿಂದೂಸ್ಥಾನವು ಹಿಂದೂರಾಷ್ಟವೇ.
ಜನರು ದೇಶದ ಸಾಂಸ್ಕೃತಿಕ ಪರಂಪರೆ ಮತ್ತು ತಮ್ಮ ಪೂರ್ವಜರ ವೈಭವವನ್ನು ಆಚರಿಸುವವರೆಗೇ ದೇಶ ಹಿಂದೂರಾಷ್ಟವಾಗಿಯೇ ಉಳಿಯುತ್ತದೆ.
ಯಾರೂ ಭಾರತವನ್ನು ತನ್ನ ಮಾತೃಭೂಮಿ ಅಂದುಕೊಳ್ಳುತ್ತಾನೋ. ಎಲ್ಲಿಯವರೆಗೂ ಒಬ್ಬ ವ್ಯಕ್ತಿ ತಾನು ಜೀವಂತವಾಗಿರುವವರೆಗೂ ಭಾರತೀಯ ಸಂಸ್ಕೃತಿ, ಪೂರ್ವಜರ ವೈಭವ ಆಚರಿಸುತ್ತಾನೋ ಅಲ್ಲಿಯವರೆಗೂ ಭಾರತ ಹಿಂದೂರಾಷ್ಟ್ರ ಆಗಿರುತ್ತದೆ ಎಂದು ಪ್ರತಿಪಾದಿಸಿದರು.