ಸಂಭ್ರಮದ ಶ್ರೀ ವರಪ್ರದ ಬೇಟೆ ರಂಗನಾಥಸ್ವಾಮಿ ಜಾತ್ರೆ

The festive Sri Varaprada Bete festival of Ranganathaswamy

ದೊಡ್ಡಬಳ್ಳಾಪುರ: ತಾಲ್ಲೂಕಿನ ಹುಲಿಕುಂಟೆ ಗ್ರಾಮದಲ್ಲಿನ ಇತಿಹಾಸ ಪ್ರಸಿದ್ಧ ಶ್ರೀ ವರಪ್ರದ ಬೇಟೆ ರಂಗನಾಥಸ್ವಾಮಿ ಬೇಟೆ ಜಾತ್ರಾ ಮಹೋತ್ಸವ (Sri Varaprada bete festival) ಗುರುವಾರ ವಿಜೃಂಭಣೆಯಿಂದ ನಡೆಯಿತು.

ಹುಲಿಕುಂಟೆ ಗ್ರಾಮದ ಬೇಟೆ ಕೊಡುವ ಕದಿರು ಆಲದ ಮರದ ದಿನ್ನೆಯವರೆಗೆ ಸಾಗಿದ ರಂಗನಾಥಸ್ವಾಮಿ ಉತ್ಸವದಲ್ಲಿ ರಾಜ್ಯದ ವಿವಿಧಡೆಗಳಿಂದ ಆಗಮಿಸಿದ್ದ ಸಹಸ್ರಾರು ಜನ ಭಕ್ತಾದಿಗಳು ಭಾಗವಹಿಸಿದ್ದರು.

ಪೇಟಧಾರಿ ಬೇಟೆ ರಂಗನಾಥಸ್ವಾಮಿಯನ್ನು ಹೂವುಗಳಿಂದ ಸಿಂಗರಿಸಲಾಗಿತ್ತು.

ಹುಲಿಕುಂಟೆ, ಮಾವಿನಕುಂಟೆ, ಸೀತಕಲ್ಲು, ಚಿಕ್ಕಬೆಳವಂಗಲ ಮತ್ತಿತರೆ ಗ್ರಾಮಗಳಿಂದ ಕೋಲು ಹಿಡಿದುಕೊಂಡು ತಂಡೋಪ ತಂಡವಾಗಿ ಆಗಮಿಸಿ ಕೋಲು ಬೇಟೆ ಸಂಪ್ರದಾಯವನ್ನು ಸಾಂಕೇತಿಕವಾಗಿ ಆಚರಿಸಿದರು.

ದೇವಾಲಯದಲ್ಲಿ ವಿಶೇಷ ಪೂಜಾ ಕಾರ್ಯಕ್ರಮಗಳು ನಡೆದವು.

ಕೋಲುಬೇಟೆ ಜಾತ್ರೆಯಲ್ಲಿ ವಿವಿಧ ರೀತಿಯ ತಿಂಡಿ ತಿನಿಸುಗಳ ಅಂಗಡಿಗಳು ಗಮನ ಸೆಳೆದವು.

ಸುಮಾರು 600 ವರ್ಷಗಳ ಇತಿಹಾಸವಿರುವ ಚೋಳರ ಕಾಲದ ಇತಿಹಾಸ ಹೊಂದಿರುವ ಹುಲಿಕುಂಟೆ ಕೋಲುಬೇಟೆ ಕಾರಣಕ್ಕೆ ಮಹತ್ವದ್ದೆನಿಸಿದೆ.

ಮಾಗಡಿ ತಾಲ್ಲೂಕಿನ ಜನತೆಯ ಆರಾದ್ಯ ದೈವವಾದ ಮಾಗಡಿ ರಂಗನಾಥ, ದೊಡ್ಡಬಳ್ಳಾಪುರ ತಾಲ್ಲೂಕಿನ ಹಣಬೆ ಗ್ರಾಮದ ಸುತ್ತಲಿನ ಜನರು ಪೂಜಿಸುವ ಹಣಬೆ ರಂಗನಾಥ ಮತ್ತು ಹುಲಿಕುಂಟೆ ಸುತ್ತಲಿನ ಜನತೆಯ ಆರಾದ್ಯ ದೈವ ಹುಲಿಕುಂಟೆ ಬೇಟೆ ರಂಗನಾಥ ಈ ಮೂರು ಐತಿಹಾಸಿಕ ವ್ಯಕ್ತಿಗಳ ಶಕ್ತಿ ಸಂಚಯನದ ಸಾಕಾರ ರೂಪವೇ ಹುಲಿಕುಂಟೆ ಬೇಟೆ ರಂಗನಾಥ.

ಮೂರೂ ಜನ ವ್ಯಕ್ತಿಗಳು ಸೇರಿ ತಮ್ಮ ಶಕ್ತಿಯನ್ನು ಕ್ರೋಢೀಕರಿಸಿ ಹುಲಿಕುಂಟೆಯಲ್ಲಿ ‘ಬೇಟೆ ರಂಗನಾಥಸ್ವಾಮಿ’ ಹೆಸರಿನ ಗುಡಿಯೊಂದನ್ನು ಕಟ್ಟಿ ವಿಗ್ರಹವೊಂದನ್ನು ಸ್ಥಾಪಿಸಿ ಯುದ್ಧವೊಂದಕ್ಕೆ ಸಿದ್ಧರಾಗುತ್ತಾರೆ.

ರಂಗನಾಥಸ್ವಾಮಿಯೇ ಬೇಟೆಯ ನಾಯಕ ಎಂದು ಈ ಆಚರಣೆಯನ್ನು ಸಾಂಕೇತಿಕವಾಗಿ ಈಗಲೂ ನಡೆಸುತ್ತ ಬರಲಾಗುತ್ತಿದೆ. ಅಲ್ಲಿಂದ ಸ್ವಲ್ಪ ದೂರದಲ್ಲಿ ರಂಗನಾಥಸ್ವಾಮಿಗೆ ಮೊದಲ ಬಲಿ ಸಿಗುತ್ತದೆ. ಆ ಮೊದಲ ಬಲಿ ಸಿಕ್ಕ ಜಾಗದಲ್ಲಿ ಒಂದು ಮಂಟಪ ಕಟ್ಟಿ ಸ್ವಾಮಿಯನ್ನು ಶಾಂತಗೊಳಿಸಲಾಗುತ್ತದೆ.

ಈಗಲೂ ಅದೇ ಜಾಗದಲ್ಲಿ ಬೇಟೆ ಮುಗಿಸಿಕೊಂಡು ಬಂದ ಬೇಟೆ ರಂಗನಾಥಸ್ವಾಮಿಗೆ ಪೂಜೆ ನಡೆಯುತ್ತದೆ. ಈ ಕುರಿತ ಆಚರಣೆಗೆ ‘ಕೋಲು ಬೇಟೆ’ ಎಂದೇ ಕರೆಯಲಾಗುತ್ತದೆ. ಪ್ರತಿ ವರ್ಷದ ಶೂನ್ಯ ಮಾಸದ ಕಡೆಯ ಗುರುವಾರ ಈ ಆಚರಣೆ ನಡೆಯುತ್ತದೆ.

ಬೆಳೆಗಳ ಕೊಯ್ಲು ಮುಗಿದು ದಾನ್ಯ ಮನೆಗೆ ಬರುವ ಕಾಲವಾದ್ದರಿಂದ ದಾನ್ಯಗಳನ್ನು ಹೊಲಗಳಲ್ಲಿಯೇ ಕೂಡಿಡುವ ಪರಿಪಾಟವಿದ್ದುದರಿಂದ ಸುತ್ತಲಿನ ಪ್ರದೇಶದ ಪ್ರಾಣಿಗಳನ್ನು ನಿಯಂತ್ರಿಸುವ ಕಾರಣಕ್ಕೆ ಸುತ್ತಲಿನ ಜನ ಬೇಟೆಯಾಡಿ ಪ್ರಾಣಿಗಳನ್ನು ನಿಯಂತ್ರಿಸುವ ಪದ್ಧತಿ ಬೆಳೆದು ಬಂದಿರಬಹುದು ಎನ್ನಲಾಗಿದೆ.

ಹಳ್ಳಿಗಳ ಜನ ಸುತ್ತಲಿನ ಕಾಡುಗಳನ್ನು ತಿರುಗಿ, ಕೋಲು ಹಿಡಿದುಕೊಂಡು ಈ ಸ್ಥಳಕ್ಕೆ ಬಂದು ಸೇರಿ ಸಾಂಪ್ರದಾಯಿಕ ಕೋಲು ಬೇಟೆ ಆಚರಣೆಯನ್ನು ಮಾಡಲಾಗುತ್ತದೆ.

ರಾಜಕೀಯ

ದೊಡ್ಡಬಳ್ಳಾಪುರ BJPಗೆ ಶಾಕ್: ನಗರಸಭೆ ಸದಸ್ಯ ದಿಢೀರ್ ರಾಜೀನಾಮೆ..?

ದೊಡ್ಡಬಳ್ಳಾಪುರ BJPಗೆ ಶಾಕ್: ನಗರಸಭೆ ಸದಸ್ಯ ದಿಢೀರ್ ರಾಜೀನಾಮೆ..?

ಅಚ್ಚರಿಯ ಬೆಳವಣಿಗೆಯಲ್ಲಿ ಎಸ್. ಪದ್ಮನಾಭ (S. Padmanabha) ಅವರು ದೊಡ್ಡಬಳ್ಳಾಪುರ ನಗರಸಭೆ ಸದಸ್ಯತ್ವ ಸ್ಥಾನಕ್ಕೆ ರಾಜೀನಾಮೆ ನೀಡುವ ಮೂಲಕ ದೊಡ್ಡಬಳ್ಳಾಪುರ ಬಿಜೆಪಿಗೆ (Doddaballapur BJP) ಶಾಕ್ ನೀಡಿದ್ದಾರೆ

[ccc_my_favorite_select_button post_id="120682"]
ಸಿದ್ದರಾಮಯ್ಯ ನವರ ದಿಕ್ಕೆಟ್ಟ ನೀತಿಗಳು ಸರ್ಕಾರಿ ನೌಕರರನ್ನು ಬೀದಿಗೆ ತಂದಿವೆ;ಆರ್. ಅಶೋಕ

ಸಿದ್ದರಾಮಯ್ಯ ನವರ ದಿಕ್ಕೆಟ್ಟ ನೀತಿಗಳು ಸರ್ಕಾರಿ ನೌಕರರನ್ನು ಬೀದಿಗೆ ತಂದಿವೆ;ಆರ್. ಅಶೋಕ

ತುಘಲಕ್‌ ನೀತಿಗಳಿಂದಲೇ ದುರಾಡಳಿತಕ್ಕೆ ಹೆಸರಾಗಿರುವ ಕಾಂಗ್ರೆಸ್ ಸರ್ಕಾರ ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿದೆ. ಇದರಿಂದ ಸರ್ಕಾರಿ ನೌಕರರಿಗೆ ಸಂಬಳ ಕೊಡುವುದಕ್ಕೂ ಸರ್ಕಾರದ ಬಳಿ ದುಡ್ಡಿಲ್ಲ ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ (R. Ashoka)

[ccc_my_favorite_select_button post_id="120234"]
ಯುದ್ಧ: ಭಾರತದ ಷೇರುಪೇಟೆ ತತ್ತರ.. ಬೆಲೆಯೇರಿಕೆ ಚಿಂತೆ

ಯುದ್ಧ: ಭಾರತದ ಷೇರುಪೇಟೆ ತತ್ತರ.. ಬೆಲೆಯೇರಿಕೆ ಚಿಂತೆ

ಮಧ್ಯಪ್ರಾಚ್ಯದಲ್ಲಿ ಯುದ್ದ ನಡೆಯುತ್ತಿರುವುದರಿಂದ ಭಾರತದ ಷೇರುಪೇಟೆ (Indian share market ) ತತ್ತರಿಸುತ್ತಿದ್ದು, ಕೋಟ್ಯಾಂತರ ರೂ ನಷ್ಟದ ಜೊತೆಗೆ, ತೈಲ ಬೆಲೆಯೇರಿಕೆಯಾಗುವ ಭೀತಿ ಉಂಟಾಗಿದೆ.

[ccc_my_favorite_select_button post_id="119892"]
ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ -ಚೀನಿ ಬಾಯಿ ಬಾಯಿ

ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ

ಅಮೇರಿಕಾದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ (Donald Trump) ಶೇ.50 ರಷ್ಟು ತೆರಿಗೆ ಬರೆ ಬೆನ್ನಲ್ಲೇ, ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು 7 ವರ್ಷಗಳ ಬಳಿಕ ಚೀನಾಗೇ ಭೇಟಿ ನೀಡಿದ್ದಾರೆ.

[ccc_my_favorite_select_button post_id="113347"]

ಕ್ರೀಡೆ

IPLಗೆ ಕ್ಷಣಗಣನೆ.. ಟಿಕೆಟ್ ಬೇಡಿ ಮರ್ಯಾದೆ ಕಳೆದುಕೊಂಡ ಶಾಸಕರು

IPLಗೆ ಕ್ಷಣಗಣನೆ.. ಟಿಕೆಟ್ ಬೇಡಿ ಮರ್ಯಾದೆ ಕಳೆದುಕೊಂಡ ಶಾಸಕರು

ಇಂಡಿಯನ್ ಪ್ರೀಮಿಯರ್ ಲೀಗ್ (IPL) 19ನೇ ಆವೃತ್ತಿಯ ಉದ್ಘಾಟನಾ ಪಂದ್ಯ ಇಂದು (ಮಾರ್ಚ್ 28) ಚಿನ್ನಸ್ವಾಮಿಯಲ್ಲಿ ನಡೆಯಲಿದ್ದು, ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಸನ್‌ ರೈಸರ್ಸ್ ಹೈದರಾಬಾದ್ ತಂಡ ಮುಖಾಮುಖಿಯಾಗಲಿವೆ.

[ccc_my_favorite_select_button post_id="120518"]

RCB ಮಾರಾಟ: ವಿಜಯ್ ಮಲ್ಯ ಭಾವುಕ ಸಂದೇಶ

[ccc_my_favorite_select_button post_id="120461"]

RCBಗೆ ಕೆಎಂಎಫ್ ಪ್ರಾಯೋಜಕತ್ವ..!

[ccc_my_favorite_select_button post_id="120424"]

IPL ಟಿಕೆಟ್: ನಕಲಿ ಲಿಂಕ್ ಎಚ್ಚರಿಕೆ

[ccc_my_favorite_select_button post_id="120376"]
ಮದುವೆಗಾಗಿ ಮಗನ ಜಗಳ; ತಾಯಿ ಸಾವು..!

ಮದುವೆಗಾಗಿ ಮಗನ ಜಗಳ; ತಾಯಿ ಸಾವು..!

ಮದುವೆ (Marriage) ಮಾಡಿಲ್ಲವೆಂದು ಜಗಳ ತಗೆದ ಮಗ (Son) ಸ್ವಂತ ತಾಯಿಯನ್ನೇ (Mother) ಹೊಡೆದು ಕೊಂದಿರುವ (Murder) ಘಟನೆ ವರದಿಯಾಗಿದೆ.

[ccc_my_favorite_select_button post_id="120643"]
ದೊಡ್ಡಬಳ್ಳಾಪುರ: ಪಾಲನಜೋಗಿಹಳ್ಳಿ ಬಳಿ ಮತ್ತೆ ಅಪಘಾತ.. ಇಬ್ಬರಿಗೆ ಗಾಯ..!

ದೊಡ್ಡಬಳ್ಳಾಪುರ: ಪಾಲನಜೋಗಿಹಳ್ಳಿ ಬಳಿ ಮತ್ತೆ ಅಪಘಾತ.. ಇಬ್ಬರಿಗೆ ಗಾಯ..!

ನಿನ್ನೆಯಷ್ಟೆ ಕೆಎಸ್‌ಆರ್‌ಟಿಸಿ ಬಸ್ ಹರಿದು ಬೈಕ್ ಸವಾರ ಸಾವನಪ್ಪಿರುವ ಬೆನ್ನಲ್ಲೇ, ರಸ್ತೆ ಬದಿ ನಿಂತಿದ್ದ ಆಟೋಗೆ ದ್ವಿಚಕ್ರ ವಾಹನ ಡಿಕ್ಕಿ (Accident) ಹೊಡೆದ ಪರಿಣಾಮ, ಬೈಕ್ ಸವಾರ ಹಾಗೂ ರಸ್ತೆಯ ಬದಿ ನಿಂತಿದ್ದ ಮಹಿಳೆಗೆ

[ccc_my_favorite_select_button post_id="120677"]

ಆರೋಗ್ಯ

ಸಿನಿಮಾ

ದರ್ಶನ್ ಬರ್ತ್‌ಡೇ: ಅಭಿಮಾನಿಗಳಿಂದ ವಿಶೇಷ ವಿಶ್

ದರ್ಶನ್ ಬರ್ತ್‌ಡೇ: ಅಭಿಮಾನಿಗಳಿಂದ ವಿಶೇಷ ವಿಶ್

ಕನ್ನಡ ಚಿತ್ರರಂಗದ ಖ್ಯಾತ ನಟ ದರ್ಶನ್ (Actor Darshan) ಅವರಿಗೆ ಇಂದು ಜನ್ಮದಿನದ (Birthday) ಸಡಗರ. 49ನೇ ವರ್ಷಕ್ಕೆ ದರ್ಶನ್ ಕಾಲಿಟ್ಟಿದ್ದಾರೆ.

[ccc_my_favorite_select_button post_id="119431"]