
ದೊಡ್ಡಬಳ್ಳಾಪುರ: ಮೂರು ಅಂತಸ್ತಿನ ಮನೆಯ ಮೇಲಿಂದ ಬಿದ್ದು ವ್ಯಕ್ತಿಯೋರ್ವ ಸಾವನಪ್ಪಿರುವ (Dies) ಘಟನೆ ಇಂದು ಮುತ್ತೂರಿನ (Muttur) 6ನೇ ವಾರ್ಡ್ ನಲ್ಲಿ ಸಂಭವಿಸಿದೆ.
ಮೃತನನ್ನು 50 ವರ್ಷದ ಸೋಮಶೇಖರ್ ಎಂದು ಗುರುತಿಸಲಾಗಿದೆ.
ಮುತ್ತೂರಿನ 6ನೇ ವಾರ್ಡ್‌ನಲ್ಲಿ ಮೂರು ಅಂತಸ್ತಿನ ಮನೆಯೊಂದರಲ್ಲಿ ಬಾಡಿಗೆಗೆ ಕುಟುಂಬದೊಂದಿಗೆ ವಾಸವಿದ್ದ ಸೋಮಶೇಖರ್ ಅವರು, ಇಂದು ಬೆಳಗ್ಗೆ ಮನೆಯ ಮೇಲಿನ ನೀರಿನ ಟ್ಯಾಂಕ್ ವಾಲ್ವ್ ದುರಸ್ತಿ ಮಾಡಲು ಹೋಗಿದ್ದ ವೇಳೆ ಕಾಲು ಜಾರಿ ಬಿದ್ದು, ಸ್ಥಳದಲ್ಲಿಯೇ ಸಾವನಪ್ಪಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ದೊಡ್ಡಬಳ್ಳಾಪುರ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.