
ದೊಡ್ಡಬಳ್ಳಾಪುರ: ಇದೇ ತಿಂಗಳ 15 ರಂದು ಕಾಣೆಯಾಗಿದ್ದ ಬಾಲಕನ ಶವ ತಾಲೂಕಿನ ತೂಬಗೆರೆ ಹೋಬಳಿಯ ಸಾಧುಮಠ ರಸ್ತೆಯ ಬಳಿ ಪತ್ತೆಯಾಗಿದೆ (Missing boy found dead)
ದೊಡ್ಡಬಳ್ಳಾಪುರ ತಾಲೂಕಿನ ತೂಬಗೆರೆ ಹೋಬಳಿಯ ದೊಡ್ಡರಾಯಪ್ಪನಹಳ್ಳಿ ನಿವಾಸಿ ನಿಶಾಂಕ್ ಎನ್(15 ವರ್ಷ) ಮೃತ ಬಾಲಕ ಎಂದು ಗುರುತಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೃತ ಬಾಲಕ ನಿಶಾಂಕ್ ಡಿ.15 ರಂದು ಬೆಳಿಗ್ಗೆ 7.30ಗಂಟೆಗೆ ಮನೆಯಿಂದ ಊರಿನ ಒಳಗೆ ಹೋಗಿಬರುತ್ತೇನೆಂದು ಎದುರು ಮನೆಯವರ ಬೈಕ್ ತೆಗೆದುಕೊಂಡು ಹೋದವನು ವಾಪಸ್ಸು ಮನೆಗೆ ಬಂದಿರುವುದಿಲ್ಲ.
ಕಾಣೆಯಾದ ಮಗ ನಿಶಾಂಕ್ ಪತ್ತೆಗಾಗಿ ತಂದೆ ನಾರಾಯಣಸ್ವಾಮಿ ದೊಡ್ಡಬಳ್ಳಾಪುರ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಈ ಕುರಿತಂತೆ ಪೊಲೀಸರು, ಕರಪತ್ರಗಳ ಮುದ್ರಿಸಿ ತೀವ್ರ ಹುಡುಕಾಟ ನಡೆಸಿದ್ದರು.
ಆದರೆ ನಿಶಾಂಕ್ ಕಾಣೆಯಾದ 12 ದಿನಗಳ ಇಂದು ಆತನ ಮೃತ ದೇಹ ಚಿಕ್ಕರಾಯಪ್ಪನಹಳ್ಳಿ ಮಾರ್ಗದ ಸಾಧುಮಠ ರಸ್ತೆಯಲ್ಲಿ ಸಮೀಪ ಪತ್ತೆಯಾಗಿದ್ದು, ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.