ಹೈದರಾಬಾದ್: ಪುಷ್ಪ-2 (Pushpa -2) ಚಿತ್ರ ಬಿಡುಗಡೆ ವೇಳೆ ನಡೆದ ಕಾಲ್ತುಳಿತ ಪ್ರಕರಣಕ್ಕೆ (Stampede case) ಸಂಬಂಧಿಸಿದಂತೆ ತೆಲಗು ನಟ ಅಲ್ಲು ಅರ್ಜುನ್ (Allu Arjun) ಸೇರಿದಂತೆ 23 ಜನರ ವಿರುದ್ಧ ಪೊಲೀಸರು ದೋಷಾರೋಪ ಪಟ್ಟಿ (George sheet) ಸಲ್ಲಿಸಿದ್ದಾರೆ.
ಹೈದರಾಬಾದ್‌ನ ಸಂಧ್ಯಾ ಚಿತ್ರ ಮಂದಿರದ ಆಡಳಿತ ಮಂಡಳಿ, ಅಲ್ಲು ಅರ್ಜುನ್, ಅವರ ಮ್ಯಾನೇಜರ್ ವಿರುದ್ಧ ಪೊಲೀಸರು ನಾಮಪಲ್ಲಿ ಕೋರ್ಟ್ 9ನೇ ಹೆಚ್ಚುವರಿ ಮ್ಯಾಜಿಸ್ಟ್ರೇಟ್ ಅವರ ಪೀಠಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ ಎಂದು ವರದಿಯಾಗಿದೆ.
2024ರ ಡಿಸೆಂಬರ್ 4ರಂದು ಪುಷ್ಪ -2 ಚಿತ್ರ ಬಿಡುಗಡೆ ವೇಳೆ ಮುನ್ಸೂಚನೆ ನೀಡದೇ ನಟ ಅಲ್ಲು ಅರ್ಜುನ್ ಚಿತ್ರ ಮಂದಿರಕ್ಕೆ ಭೇಟಿ ನೀಡಿದ್ದರಿಂದ ಭಾರಿ ಸಂಖ್ಯೆಯಲ್ಲಿ ಅಭಿಮಾನಿಗಳು ಜಮಾಯಿಸಿದ್ದು ಕಾಲ್ತುಳಿತಕ್ಕೆ ಕಾರಣವಾಯಿತು.
ಈ ಘಟನೆಯಲ್ಲಿ 35 ವರ್ಷದ ಮಹಿಳೆ ಸಾವನ್ನಪ್ಪಿ, ಬಾಲಕ ತೀವ್ರವಾಗಿ ಅಸ್ವಸ್ಥವಾದ ಕಾರಣ ಅಲ್ಲು ಅರ್ಜುನ್‌ರನ್ನು ಬಂಧಿಸಲಾಗಿತ್ತು.