ದೊಡ್ಡಬಳ್ಳಾಪುರ: ಗೋವುಗಳನ್ನು ಖಾಸಾಯಿ ಖಾನೆಗೆಂದು (Slaughterhouse) ಅಕ್ರಮವಾಗಿ ತುಂಬಿಕೊಂಡು ಸಾಗುತ್ತಿದ್ದ ಆರೋಪದ ಹಿನ್ನೆಲೆಯಲ್ಲಿ ಕ್ಯಾಂಟರ್ (Canter) ಅನ್ನು ಬೆಂಗಳೂರಿನ ಹಿಂದೂಪರ ಸಂಘಟನೆ ಕಾರ್ಯಕರ್ತರು ತಡೆದು, ಪೊಲೀಸರಿಗೆ ಒಪ್ಪಿಸಿರುವ ಘಟನೆ ತಾಲೂಕಿನ ಹುಲಿಕುಂಟೆ ಬಳಿ ಟೋಲ್ ಬಳಿ ನಡೆದಿದೆ.
ಸ್ಥಳೀಯರ ಹೇಳಿಕೆ ಅನ್ವಯ ಸುಮಾರು 25 ಕ್ಕೂ ಹೆಚ್ಚು ಗೋವುಗಳನ್ನು ತುಮಕೂರು ಕಡೆಯಿಂದ ಅಕ್ರಮವಾಗಿ ಕ್ಯಾಂಟರ್‌ನಲ್ಲಿ ತುಂಬಿಕೊಂಡು ಬರುವುದನ್ನು ಬೆನ್ನತ್ತಿರುವ ಹಿಂದೂಪರ ಕಾರ್ಯಕರ್ತರು ತಡೆದಿದ್ದಾರೆ.
ಈ ವಾಹನ ಕಳೆದ ಹಲವು ದಿನಗಳಿಂದ ಇದೇ ರಸ್ತೆಯಲ್ಲಿ ಅಕ್ರಮವಾಗಿ ಗೋವುಗಳನ್ನು ಸಾಗಿಸುತ್ತಿದ್ದ ಅನುಮಾನದ ಹಿನ್ನೆಲೆಯಲ್ಲಿ ಕ್ಯಾಂಟರ್ ಅನ್ನು ನಿಗಾದಲ್ಲಿಟ್ಟು, ಕಳೆದ ಎರಡು ದಿನಗಳಿಂದ ಟಾಟಾ ಎಸ್ ವಾಹನದಲ್ಲಿ ಬೆನ್ನತ್ತಿರು ಹಿಂದೂಪರ ಸಂಘಟನೆ ಕಾರ್ಯಕರ್ತರು, ಇಂದು ಬೆಳಗ್ಗೆ ಹುಲಿಕುಂಟೆ ಟೋಲ್ ಬಳಿ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ ಎಂದು ತಿಳಿದು ಬಂದಿದೆ.
ಈ ವೇಳೆ ಚಾಲಕ ಸೇರಿ ಮೂವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎನ್ನಲಾಗುತ್ತಿದೆ.
ದೊಡ್ಡಬೆಳವಂಗಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.