ಕೊಚ್ಚಿ: ಬಹುಭಾಷಾ ಖ್ಯಾತ ನಟ ಮೋಹನ್ ಲಾಲ್ (Actor Mohan lal) ಅವರ ತಾಯಿ ಶಾಂತಕುಮಾರಿ ಅವರು ವಿಧಿವಶರಾಗಿದ್ದಾರೆ. ಅವರಿಗೆ 90 ವರ್ಷ ವಯಸ್ಸಾಗಿತ್ತು.
ವಯೋಸಹಜ ಆರೋಗ್ಯ ಸಮಸ್ಯೆಯನ್ನು ಎದುರಿಸುತ್ತಿದ್ದ ಅವರು, ಇಂದು (ಡಿ.30) ಕೊಚ್ಚಿಯ ಎಲಮಕ್ಕರದಲ್ಲಿರುವ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ.
മോഹൻലാലിൻറെ അമ്മക്ക് ആദരാഞ്ജലി അർപ്പിക്കാൻ വീട്ടിലെത്തി മമ്മൂട്ടി | Mohanlal Mother Passed Away#Mammootty #Mohanlal #ShanthakumariAmma #MalayalamFilmibeat #FBUpdates pic.twitter.com/CjHWqE12rW
— FilmiBeat Malayalam (@FilmibeatMa) December 30, 2025
ಮೋಹನ್ ಲಾಲ್ ಅವರಿಗೆ ತಮ್ಮ ತಾಯಿಯೊಟ್ಟಿಗೆ ಬಹಳ ಭಾವನಾತ್ಮಕವಾದ ಸಂಬಂಧವಿತ್ತು. ಇತ್ತೀಚೆಗೆ ಅವರಿಗೆ ‘ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ದೊರೆತ ವೇಳೆ ಕೂಡ ಕೊಚ್ಚಿಗೆ ಬಂದು ಮೊದಲು ತಮ್ಮ ತಾಯಿಯನ್ನು ಭೇಟಿಯಾಗಿ ಸಂತಸ ಹಂಚಿಕೊಂಡಿದ್ದರು.
ಶಾಂತಕುಮಾರಿ ಅವರು ಮೂಲತಃ ಪತ್ತನಂತಿಟ್ಟದ ಎಲಂತೂರಿನವರು. ಪತಿ ವಿಶ್ವನಾಥನ್ ನಾಯರ್ ಅವರ ಜೊತೆ ಹಲವು ವರ್ಷಗಳ ಹಿಂದೆ ತಿರುವನಂತಪುರಂಗೆ ತೆರಳಿ ಅಲ್ಲೇ ನೆಲೆಸಿದ್ದರು.
ಕಳೆದ ಕೆಲ ದಿನಗಳ ಹಿಂದೆ ಅವರಿಗೆ ಪಾರ್ಶ್ವವಾಯು ಆಗಿತ್ತು. ಇದಾದ ಬಳಿಕ ಮೋಹನ್ ಲಾಲ್ ಅವರು ತಮ್ಮೊಂದಿಗೆ ತಾಯಿಯನ್ನು ಕರೆತಂದಿದ್ದರು.