ದೊಡ್ಡಬಳ್ಳಾಪುರ: ಗ್ರಾಮೀಣ ಉಪ ವಿಭಾಗ ವ್ಯಾಪ್ತಿಗೆ ಬರುವ ಕನಸವಾಡಿ 66/11 ಕೆ.ವಿ ವಿದ್ಯುತ್ (Power) ಉಪಕೇಂದ್ರದಲ್ಲಿ ನಾಳೆ (ಡಿ.31) ತ್ರೈಮಾಸಿಕ ನಿರ್ವಹಣಾ ಕಾರ್ಯ ಹಮ್ಮಿಕೊಳ್ಳಲಾಗಿದೆ.
ಈ ಹಿನ್ನೆಲೆಯಲ್ಲಿ ಉಪಕೇಂದ್ರದಿಂದ ಹೊರಹೊಮ್ಮುವ ಫೀಡರ್ ಗಳಿಂದ ಸರಬರಾಜಾಗುವ ಗ್ರಾಮಗಳಲ್ಲಿ ಡಿ.31 ರಂದು ಬೆಳಗ್ಗೆ 10:00 ರಿಂದ ಸಂಜೆ 5:30 ರವರೆಗೆ ವಿದ್ಯುತ್ ಪೂರೈಕೆ ಸ್ಥಗಿತಗೊಳಿಸಲಾಗುತ್ತಿದೆ ಎಂದು ಪ್ರಕಟಣೆ ತಿಳಿಸಿದೆ.
ವಿದ್ಯುತ್ ಅಡಚಣೆಯಾಗುವ ಪ್ರದೇಶಗಳು
ಕನ್ನಮಂಗಲ, ಪುದ್ದೇನಹಳ್ಳಿ, ತಿಮ್ಮಸಂದ್ರ ವಡಗೆರೆ, ಹಾಲೇನಹಳ್ಳಿ, ಕೆಂಜಿಗದಹಳ್ಳಿ, ಯಲ್ಲದಹಳ್ಳಿ, ಕಮ್ಮಸಂದ್ರ, ಪುರುಷನಹಳ್ಳಿ, ಅಂಬಲಗೆರೆ, ಐನಹಳ್ಳಿ, ಕಾರೇಪುರ, ಹೊನ್ನಾದೇವಿಷುರ, ಮುಪ್ಪಡಿಗಟ್ಟ, ಮದಗೊಂಡನಹಳ್ಳಿ, ಕಾಡನೂರು, ಕಾಡನೂರುಪಾಳ್ಯ, ಸಿ.ಡಿ.ಅಗ್ರಹಾರ.
ಮಲ್ಲೋಹಳ್ಳಿ, ಮಧುರೆ, ಕೋಡಿಪಾಳ್ಯ, ಕೋಡಿಹಳ್ಳಿ, ಬೀರಯ್ಯನಪಾಳ್ಯ, ಮಾರಸಂದ್ರ, ಕನಸವಾಡಿ, ರಾಮದೇನಹಳ್ಳಿ, ಶಾಸ್ತಿಪಾಳ್ಯ, ಕಲ್ಲೋಡು, ದೊಡ್ಡಕುಕ್ಕಲಹಳ್ಳಿ, ಹಾಗೂ ಇನ್ನಿತರ ಸುತ್ತಮುತ್ತಲ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆ ಸ್ಥಗಿತಗೊಳಿಸಲಾಗುತ್ತಿದೆ.
(ಕೊನೆಯ ಕ್ಷಣ ಬದಲಾವಣೆ ಹೊರತುಪಡಿಸಿ)