ದೆಹಲಿ: ಪರ್ಮನೆಂಟ್ ಅಕೌಂಟ್ ನಂಬರ್ (PAN) ಮತ್ತು ಆಧಾರ್ ಕಾರ್ಡ್ (Aadhaar) ಜೋಡಣೆಗೆ ನೀಡಲಾಗಿದ್ದ ಗಡುವು ಬುಧವಾರಕ್ಕೆ (ಡಿ.31ಕ್ಕೆ) ಕೊನೆಗೊಳ್ಳುತ್ತಿದೆ.
ಆಧಾರ್ ಜೋಡಣೆ ಆಗದೇ ಇರುವ ಪ್ಯಾನ್ ಕಾರ್ಡ್‌ಗಳು ಜ.1 ರಿಂದಲೇ ರದ್ದುಗೊಳ್ಳುತ್ತವೆ.
ಪಾನ್ ಬಳಕೆದಾರರು ಆ ನಂತರದಲ್ಲಿ ಆಧಾರ್ ಜೋಡಣೆ ಮಾಡಿ ಪಾನ್ ಕಾರ್ಡ್‌ಗೆ ಮರು ಚಾಲನೆ ನೀಡಲು ಬಯಸಿದರೆ ದಂಡವಾಗಿ ರೂ.1000 ಪಾವತಿಸಬೇಕಾಗುತ್ತದೆ.
ನಾಗರಿಕರು ತಮ್ಮ ಪಾನ್ ಕಾರ್ಡ್‌ಗೆ ಆಧಾರ್ ಸಂಖ್ಯೆ ಜೋಡಣೆ ಆಗಿದೆಯೋ ಇಲ್ಲವೋ ಎಂಬು ದನ್ನು ತಿಳಿಯಲು ‘ಇನ್‌ಕಂಟ್ಯಾಮ್ಸ್ ಇ-ಫೈಲಿಂಗ್’ ವೆಬ್‌ತಾಣದಲ್ಲಿ ‘ಆಧಾರ್ ಸ್ಟೇಟಸ್’ ಲಿಂಕ್ ಕ್ಲಿಕ್ ಮಾಡಿ ಪ್ಯಾನ್ ಸಂಖ್ಯೆ ಮತ್ತು ಆಧಾರ್ ಸಂಖ್ಯೆ ಗಳನ್ನು ನಮೂದಿಸಿ ಕ್ಲಿಕ್ ಮಾಡುವ ಮೂಲಕ ಪ್ಯಾನ್ ಕಾರ್ಡ್ ಆಧಾರ್‌ಗೆ ಲಿಂಕ್ ಆಗಿದೆಯೋ ಇಲ್ಲವೋ ಎಂಬುದನ್ನು ಪರಿಶೀಲಿಸಿಕೊಳ್ಳ ಬಹುದಾಗಿದೆ.
Link: e-Filing portal – incometax.gov.in