Doddaballapura: KPTCL staff create awareness about preventing electrical accidents

ದೊಡ್ಡಬಳ್ಳಾಪುರ: ವಿದ್ಯುತ್ ಅಪಘಾತ ತಡೆ ಕುರಿತು ಕೆಪಿಟಿಸಿಎಲ್ ಅಧಿಕಾರಿಗಳಿಂದ ಜನಜಾಗೃತಿ

ದೊಡ್ಡಬಳ್ಳಾಪುರ: ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ ಇಲಾಖೆ (KPTCL) ಹಾಗೂ ದರ್ಗಾಜೋಗಿಹಳ್ಳಿ ಗ್ರಾಮ ಪಂಚಾಯತಿಯ ಸಹಯೋಗದೊಂದಿಗೆ, ತಾಲ್ಲೂಕಿನ ದರ್ಗಾಜೋಗಿಹಳ್ಳಿ ಪಂಚಾಯತಿ ವ್ಯಾಪ್ತಿಯಲ್ಲಿ ವಿದ್ಯುತ್ ಅಪಘಾತ ಉಂಟಾಗದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವ ಕುರಿತು ಸಾರ್ವಜನಿಕರಿಗೆ ಜಾಗೃತಿ ಮೂಡಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಈ ಕಾರ್ಯಕ್ರಮದಲ್ಲಿ ಕೆಪಿಟಿಸಿಎಲ್ (KPTCL) ಇಲಾಖೆಯ ಅಧಿಕಾರಿಗಳು ಸಾರ್ವಜನಿಕರಿಗೆ ತುಂಡಾಗಿ ಬಿದ್ದಿರುವ ವಿದ್ಯುತ್ ತಂತಿಗಳನ್ನು ಮುಟ್ಟಬಾರದು, ವಿದ್ಯುತ್ ಮಾರ್ಗಗಳ ಕಾರಿಡಾರ್‌ನಲ್ಲಿ ಮನೆಗಳನ್ನು ನಿರ್ಮಾಣ ಮಾಡಬಾರದು, ವಿದ್ಯುತ್ ಗೋಪುರಗಳಿಗೆ ಬ್ಯಾನರ್ ಕಟ್ಟುವುದಾಗಲಿ, ಯಾವುದೇ ತರಹದ ಕೇಬಲ್‌ಗಳನ್ನು ಕಟ್ಟುವುದಾಗಲಿ, ಜಾನುವಾರಗಳನ್ನು ಕಟ್ಟುವುದಾಗಲಿ, ಬಟ್ಟೆ ಒಣಗಿಸಲು ಹಾಕುವುದಾಗಲಿ, ವಿದ್ಯುತ್ ಮಾರ್ಗಗಳ ಹತ್ತಿರದಲ್ಲಿ ಗಾಳಿಪಟವನ್ನು ಹಾರಿಸುವುದಾಗಲಿ, ವಿದ್ಯುತ್ ಗೋಪುರಗಳ ಸುತ್ತಲೂ ಮಣ್ಣನ್ನು ತೆಗೆಯುವುದಾಗಲಿ ಮಾಡಬಾರದೆಂದು ಸಲಹೆ ನೀಡಿದರು.

ಅಲ್ಲದೆ ಗೃಹೊಪಯೋಗಿ ವಸ್ತುಗಳಿಗೆ ಕಡ್ಡಾಯವಾಗಿ ಅರ್ಥಿಂಗ್ ಮಾಡಿಸಬೇಕೆಂದು, ವಿದ್ಯುತ್ ಸಂಬಂಧಿತ ಕೆಲಸಗಳನ್ನು ಸಂಬಂಧಪಟ್ಟವರಿಂದ ಮಾತ್ರ ಮಾಡಿಸಬೇಕೆಂದರು. ಹಾಗೂ ಮಣ್ಣನ್ನು ಅಗೆಯುವಾಗ ಭೂಗತ ಕೇಬಲ್‌ಗಳು ಇಲ್ಲದಿರುವುದನ್ನು ಖಚಿತ ಪಡಿಸಿಕೊಂಡು ಕಾಮಗಾರಿಗಳನ್ನು ಮಾಡಬೇಕೆಂದರು.

ಇದೇ ವೇಳೆ ವಿದ್ಯುತ್ ಮಾರ್ಗಗಳ ಹತ್ತಿರದಲ್ಲಿ ಬೆಳೆದಿರುವ ಮರಗಳನ್ನು ಕತ್ತರಿಸುವ ಮುನ್ನ ಜಾಗರೂಕತೆಯಿಂದ ಇರಬೇಕೆಂದು ಹಾಗೂ ವಿದ್ಯುತ್ ಮಾರ್ಗಗಳ ಅಡಿಯಲ್ಲಿ ಯಾವುದೇ ರೀತಿಯ ಚಟುವಟಿಕೆಗಳನ್ನು ಮಾಡಬಾರದೆಂದು ತಿಳಿಸಿದರು.

ಈ ಕಾರ್ಯಕ್ರಮದಲ್ಲಿ ದರ್ಗಾಜೋಗಿಹಳ್ಳಿ ಗ್ರಾಮ ಪಂಚಾಯತಿಯ ಅಧ್ಯಕ್ಷೆ ಶಶಿಕಲಾ ಪಿಡಿಒ ಶಿವರಾಜ್, ಗ್ರಾಮ ಪಂಚಾಯತಿಯ ಸದಸ್ಯರುಗಳು, ಕೆಪಿಟಿಸಿಎಲ್ ದೊಡ್ಡಬಳ್ಳಾಪುರ ಟಿ.ಎಲ್.ಎಮ್ ಉಪವಿಭಾಗದ ಎಇಇ ಉಷಾ. ಎಂ.ಎಸ್., ಟಿಎಕ್ಯೂ ವಿಭಾಗದ ಎಇಇ ಅಂಭಿಕಾ, 220 ಕೆ,ವಿ ಸ್ವೀಕರಣಾ ಕೇಂದ್ರದ ಎಇಇ ಅಜೀತ್ ಕುಮಾರ್, ಚಿಕ್ಕಬಳ್ಳಾಪುರ ನೋಡಲ್ ಕೇಂದ್ರದ ಎಇಇ ಲಕ್ಷ್ಮೀನಾರಾಯಣ ಪಿ., ಎಇ ಗಳಾದ ನಾಗಮಣಿ, ನಟರಾಜು, ನಾಗರಾಜು, ಪ್ರಕಾಶ್ ಹಾಗೂ ದೊಡ್ಡಬಳ್ಳಾಪುರ ಟಿ.ಎಲ್.ಎಮ್ ಶಾಖೆಯ ಕಿರಿಯ ಇಂಜಿನಿಯರ್ ಮಲ್ಲಿಕಾರ್ಜುನ ಹಾಗೂ ಸಿಬ್ಬಂದಿಗಳು ಇದ್ದರು.

ರಾಜಕೀಯ

ರಾಜಘಟ್ಟದಲ್ಲಿ ಬೀದಿಗೆ ಬಂದ ಜೆಡಿಎಸ್ ಮುಖಂಡರ ಒಳಜಗಳ..!

ರಾಜಘಟ್ಟದಲ್ಲಿ ಬೀದಿಗೆ ಬಂದ ಜೆಡಿಎಸ್ ಮುಖಂಡರ ಒಳಜಗಳ..!

ಜೆಡಿಎಸ್ (JDS) ಮುಖಂಡರ ಒಳಜಗಳ ರಾಜಘಟ್ಟ ಆಂಜನೇಯಸ್ವಾಮಿ ದೇವಸ್ಥಾನದ ಸಮೀಪದಲ್ಲಿನ ಅರಳಿಕಟ್ಟೆಯಲ್ಲಿ ಬೀದಿಗೆ ಬಂದಿದೆ.

[ccc_my_favorite_select_button post_id="118288"]
ರಾಜ್ಯ ಸರ್ಕಾರಿ ನೌಕರ ಸಂಘದ ಕ್ಯಾಲೆಂಡರ್ ಬಿಡುಗಡೆ

ರಾಜ್ಯ ಸರ್ಕಾರಿ ನೌಕರ ಸಂಘದ ಕ್ಯಾಲೆಂಡರ್ ಬಿಡುಗಡೆ

ರಾಜ್ಯ ಸರ್ಕಾರಿ ನೌಕರ ಸಂಘದ (State Government Employees Association) 2026ನೇ ವರ್ಷದ ಕ್ಯಾಲೆಂಡರ್ (Calendar) ಅನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ (Cmsiddaramaiah) ಅವರು ಬಿಡುಗಡೆ ಮಾಡಿ, ಸರ್ಕಾರಿ ನೌಕರರಿಗೆ ಹೊಸ ವರ್ಷದ ಶುಭಾಶಯ ಕೋರಿದರು.‌

[ccc_my_favorite_select_button post_id="117770"]
ಭಾರತ ಹಿಂದೂ ರಾಷ್ಟ್ರ, ಯಾವುದೇ ಸಾಂವಿಧಾನಿಕ ಅನುಮೋದನೆ ಬೇಕಿಲ್ಲ: ಮೋಹನ್ ಭಾಗವತ್

ಭಾರತ ಹಿಂದೂ ರಾಷ್ಟ್ರ, ಯಾವುದೇ ಸಾಂವಿಧಾನಿಕ ಅನುಮೋದನೆ ಬೇಕಿಲ್ಲ: ಮೋಹನ್ ಭಾಗವತ್

ಭಾರತ ಹಿಂದೂ ರಾಷ್ಟ್ರ ಎಂಬುದು ಸತ್ಯ. ಅದಕ್ಕೆ ಯಾವುದೇ ಸಾಂವಿಧಾನಿಕ ಅನುಮೋದನೆ ಅಗತ್ಯವಿಲ್ಲ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ಮುಖ್ಯಸ್ಥ ಮೋಹನ್ ಭಾಗವತ್ (Mohan Bhagwat) ಹೇಳಿದ್ದಾರೆ.

[ccc_my_favorite_select_button post_id="117699"]
ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ -ಚೀನಿ ಬಾಯಿ ಬಾಯಿ

ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ

ಅಮೇರಿಕಾದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ (Donald Trump) ಶೇ.50 ರಷ್ಟು ತೆರಿಗೆ ಬರೆ ಬೆನ್ನಲ್ಲೇ, ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು 7 ವರ್ಷಗಳ ಬಳಿಕ ಚೀನಾಗೇ ಭೇಟಿ ನೀಡಿದ್ದಾರೆ.

[ccc_my_favorite_select_button post_id="113347"]

ಕ್ರೀಡೆ

ಕ್ರೀಡಾಪಟುಗಳಿಂದ ಪ್ರೋತ್ಸಾಹ ಧನಕ್ಕಾಗಿ ಅರ್ಜಿ ಆಹ್ವಾನ

ಕ್ರೀಡಾಪಟುಗಳಿಂದ ಪ್ರೋತ್ಸಾಹ ಧನಕ್ಕಾಗಿ ಅರ್ಜಿ ಆಹ್ವಾನ

ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದ ಕ್ರೀಡಾ ಸ್ಪಧೆಯಲ್ಲಿ ಭಾಗವಹಿಸುವ ಕ್ರೀಡಾಪಟುಗಳಿಗೆ (Athletes) 2025-26ನೇ ಸಾಲಿನಲ್ಲಿ ಪ್ರೋತ್ಸಾಹಧನಕ್ಕೆ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ (Applications invited).

[ccc_my_favorite_select_button post_id="118180"]
ದೊಡ್ಡಬಳ್ಳಾಪುರ: ಕಿಡಿಗೇಡಿಗಳ ಹಾವಳಿ.. ಕಾರಿನ ಗಾಜು ಪುಡಿಪುಡಿ..!

ದೊಡ್ಡಬಳ್ಳಾಪುರ: ಕಿಡಿಗೇಡಿಗಳ ಹಾವಳಿ.. ಕಾರಿನ ಗಾಜು ಪುಡಿಪುಡಿ..!

ಮನೆಯ ಮುಂದೆ ನಿಲ್ಲಿಸಿದ್ದ ಕಾರಿನ ಗಾಜನ್ನು ಹೊಡೆಯುವ ಮೂಲಕ ಕಿಡಿಗೇಡಿಗಳು ಉಪಟಳ (Miscreant's annoyance) ಮೆರೆದಿರುವ ಘಟನೆ ಬುಧವಾರ ರಾತ್ರಿ ತಾಲೂಕಿನ ಆರೂಢಿ ಗ್ರಾಮದಲ್ಲಿ ನಡೆ

[ccc_my_favorite_select_button post_id="118236"]
ದೊಡ್ಡಬಳ್ಳಾಪುರ: ಕಾರು ಡಿಕ್ಕಿ.. ಮಹಿಳೆಗೆ ತೀವ್ರ ಗಾಯ

ದೊಡ್ಡಬಳ್ಳಾಪುರ: ಕಾರು ಡಿಕ್ಕಿ.. ಮಹಿಳೆಗೆ ತೀವ್ರ ಗಾಯ

ಇತ್ತೀಚೆಗಷ್ಟೇ ಜೆಸಿಬಿಗೆ (JCB) ಕಾರು (Car) ಡಿಕ್ಕಿ ಹೊಡೆದಿದ್ದ ಘಟನೆ ಮಾಸುವ ಮುನ್ನವೇ, ಅದೇ ಸ್ಥಳದಲ್ಲಿ ಕಾರು ಮಹಿಳೆಗೆ ಡಿಕ್ಕಿ ಹೊಡೆದು (Accident) ಪರಾರಿಯಾಗಿರುವ ಘಟನೆ ರಾಷ್ಟ್ರೀಯ ಹೆದ್ದಾರಿ ಮೆಣಸಿ ಗೇಟ್ ಬಳಿ ಸಂಭವಿಸಿದೆ.

[ccc_my_favorite_select_button post_id="118137"]

ಆರೋಗ್ಯ

ಸಿನಿಮಾ

17ನೇ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ: ರಾಯಭಾರಿಯಾಗಿ ಪ್ರಕಾಶ್ ರಾಜ್ ನೇಮಕ

17ನೇ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ: ರಾಯಭಾರಿಯಾಗಿ ಪ್ರಕಾಶ್ ರಾಜ್ ನೇಮಕ

ಹಿರಿಯ ಚಲನಚಿತ್ರ ಕಲಾವಿದರು, ನಿರ್ದೇಶಕರು ನಿರ್ಮಾಪಕ ಪ್ರಕಾಶ್ ರಾಜ್ (Prakash Raj) ಅವರನ್ನು 17ನೇ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ ರಾಯಭಾರಿಯಾಗಿ (Brand Ambassador) ಆಗಿ ನೇಮಿಸಲಾಗಿದೆ.

[ccc_my_favorite_select_button post_id="117722"]
error: Content is protected !!