ದೊಡ್ಡಬಳ್ಳಾಪುರ: ಜಮೀನಿನಲ್ಲಿ ಮೇಯುತ್ತಿದ್ದ ಸೀಮೆ ಹಸುವಿನ ಮೇಲೆ ಚಿರತೆ ದಾಳಿ (Leopard attack) ನಡೆಸಿ, ರಕ್ತ ಹೀರಿ ಕೊಂದುಹಾಕಿರುವ ಘಟನೆ ತಾಲೂಕಿನ ತಮ್ಮಗಾನಹಳ್ಳಿಯಲ್ಲಿ ಇಂದು (ಡಿ. 31) ರಂದು ಸಂಭವಿಸಿದೆ.
ಸಾಸಲು ಹೋಬಳಿಯ ತಮ್ಮಗಾನಹಳ್ಳಿಯ ಹನುಮಂತರಾಯಪ್ಪ ಎನ್ನುವವರ ಮಡದಿ ಅರಣ್ಯದ ಸಮೀಪದ ಜಮೀನಿನಲ್ಲಿ ಹಸುಗಳನ್ನು ಮೇಸಲು ತೆರಳಿದ್ದ ವೇಳೆ ಸಂಜೆ 3.30 ಸಂದರ್ಭದಲ್ಲಿ ಚಿರತೆ ದಾಳಿ ಮಾಡಿದೆ.
ಈ ವೇಳೆ ಸಮೀಪದಲ್ಲಿಯೇ ಇದ್ದ ಹನುಮಂತರಾಯಪ್ಪ ಹಾಗೂ ಅಕ್ಕಪಕ್ಕದ ಜಮೀನಿನಲ್ಲಿದ್ದ ರೈತರು ಕಿರುಚಾಡಿದ ಕಾರಣ ಚಿರತೆ ಪರಾರಿಯಾಗಿದೆ. ಆದರೆ ಅಷ್ಟರ ವೇಳೆಗೆ ಚಿರತೆ ದಾಳಿಯಲ್ಲಿ ಹಸು ಸಾವನಪ್ಪಿದೆ.
ಇದರಿಂದಾಗಿ ಹನುಮಂತರಾಯಪ್ಪ ಅವರಿಗೆ ಸುಮಾರು 15 ರಿಂದ 20 ಸಾವಿರದಷ್ಟು ನಷ್ಟವಾಗಿದ್ದು, ನಷ್ಟಕ್ಕೆ ಒಳಗಾಗಿದ್ದಾರೆ.
ದೊಡ್ಡಬೆಳವಂಗಲ ಪೊಲೀಸ್ ಠಾಣೆಯಲ್ಲಿ ವ್ಯಾಪ್ತಿಯ ಘಟನೆ ವರದಿಯಾಗಿದೆ.